ಲಸಿಕೆ ಪಡೆಯಲು ಬಂದ ಮಹಿಳೆಯನ್ನು ಆಧಾರ್, ಪಾನ್ ಕಾರ್ಡ್ ಇಲ್ಲವೆಂದು ವಾಪಸ್ ಕಳುಹಿಸಿದ ಸಿಬ್ಬಂದಿ !

0
461

ತೀರ್ಥಹಳ್ಳಿ : ಸರ್ಕಾರದವರು ಕೊರೊನಾ ಮುಕ್ತ ದೇಶ ಮಾಡಬೇಕೆಂದು ನಿನ್ನೆ (ಶುಕ್ರವಾರ) ದಿನ ದೇಶದಾದ್ಯಂತ ಲಸಿಕಾ ಅಭಿಯಾನವನ್ನು ಮಾಡಿದ್ದಾರೆ. ಅದರಂತೆ ತೀರ್ಥಹಳ್ಳಿಯಲ್ಲಿಯೂ ಕೂಡ ಐದು ಕಡೆ ಲಸಿಕ ಮಹಾ ಮೇಳವನ್ನು ಆಯೋಜಿಸಿದ್ದರು. ಇದರಂತೆ ಮಾಧವ ಮಂಗಳ ಸಭಾಂಗಣದಲ್ಲಿಯು ಕೂಡ ಲಸಿಕಾ ಕಾರ್ಯಕ್ರಮ ನಡೆಯುತ್ತಿತ್ತು.

ಓರ್ವ ಮಹಿಳೆ ನಿನ್ನೆ ದಿನ ಮಧ್ಯಾಹ್ನ 3.45 ರ ಸಮಯದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಮಾಧವ ಮಂಗಲ ಸಭಾಂಗಣಕ್ಕೆ ಹೋಗಿದ್ದಾರೆ. ಸರತಿ ಸಾಲಿನಲ್ಲಿ ನಿಂತಿದ್ದಾರೆ ಹೆಸರು ನೊಂದಾಯಿಸುತ್ತಿರುವ ಪುರುಷ ಸಿಬ್ಬಂದಿಯು ಇವರಲ್ಲಿ ಆಧಾರ್ ಕಾರ್ಡ್ ಇದೆಯಾ ಪಾನ್ ಕಾರ್ಡ್ ಇದೆಯಾ ಎಂದು ಕೇಳಿದ್ದಾರೆ.

ರೇಷನ್ ಕಾರ್ಡ್ ಹಾಗೂ ಮತದಾನದ ಗುರುತಿನ ಪತ್ರ ಮಾತ್ರ ಇದೆ ಎಂದು ಇವರು ತಿಳಿಸಿದ್ದಾರೆ. ಪಾನ್ ಕಾರ್ಡ್, ಆಧಾರ್ ಕಾರ್ಡ್ ಇಲ್ಲದೆ ಇರುವುದರಿಂದ ನಿಮಗೆ ಲಸಿಕೆ ಕೊಡಲು ಆಗುವುದಿಲ್ಲ ಎಂದು ವಾಪಸ್ ಕಳುಹಿಸಿದ್ದಾರೆ. ನಂತರ ಈ ಮಹಿಳೆಯು ಮೇಲಿನ ಕುರುವಳ್ಳಿಯಲ್ಲಿ ಮತದಾನದ ಗುರುತಿನ ಚೀಟಿಯನ್ನು ತೋರಿಸಿ ಲಸಿಕೆಯನ್ನು ತೆಗೆದುಕೊಂಡಿದ್ದಾರೆ.

ಏನು ಗೊತ್ತಿಲ್ಲದ ತಿಳುವಳಿಕೆಯಿಲ್ಲದ ಬೇಜವಾಬ್ದಾರಿಯ ಇಂತಹ ಸಿಬ್ಬಂದಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬೇರೆ ಕಡೆ ಆಗುವ ಮತದಾನದ ಗುರುತಿನ ಚೀಟಿ ಮಾಧವ ಮಂಗಲ ಸಭಾಂಗಣದಲ್ಲಿ ಏಕೆ ಆಗಿಲ್ಲ ಎಂಬುದು ಈಗ ಇರುವ ಪ್ರಶ್ನೆ? ಈ ಸಿಬ್ಬಂದಿಗೆ ತರಬೇತಿ ಕೊಡಲಿಲ್ಲವೇ ಅಥವಾ ತರಬೇತಿ ಕೊಡುವಾಗ ಮೊಬೈಲ್ ನಲ್ಲಿ ಆಟವಾಡುತ್ತಿದ್ದರೆ? ಪಟ್ಟಣ ಪಂಚಾಯಿತಿಯವರು ನಗರವನ್ನು ಕೊರೊನಾ ಮುಕ್ತ ನಗರವನ್ನಾಗಿ ಮಾಡಬೇಕು ಎಂದು ಪ್ರಚಾರ ಮಾಡುತ್ತಿದ್ದಾರೆ. ಇಂತಹ ಸಿಬ್ಬಂದಿ ಇದ್ದರೆ ಕೊರೊನಾ ಮುಕ್ತ ಅಲ್ಲ ಕೊರೊನಾ ತೀರ್ಥಹಳ್ಳಿಯ ಸುತ್ತಮುತ್ತ.

ಏನು ಗೊತ್ತಿಲ್ಲದ ಈ ಸಿಬ್ಬಂದಿಯು ಹೆಸರು ನೊಂದಾಯಿಸುವಾಗ ಮಾಸ್ಕನ್ನು ಕೂಡ ಹಾಕಿರಲಿಲ್ಲ ಪಾನ್ ಕಾರ್ಡ್ ಆಧಾರ್ ಕಾರ್ಡ್ ಇಲ್ಲದವರಿಗೆ‌ ಕೊರೊನಾ ಬರುವುದಿಲ್ಲವೇ ಲಸಿಕೆ ನೀಡುವುದರಲ್ಲಿ ಬೆಂಗಳೂರು ಮೊದಲ ಸ್ಥಾನ ಶಿವಮೊಗ್ಗಕ್ಕೆ ಎರಡನೇ ಸ್ಥಾನ ಲಭಿಸಿತ್ತು. ಲಸಿಕೆ ನಿರಾಕರಿಸುವ ಇಂತಹ ಬೇಜವಾಬ್ದಾರಿಯ ಸಿಬ್ಬಂದಿ ಇಲ್ಲದಿದ್ದರೆ ಶಿವಮೊಗ್ಗ ಕೂಡ ಮೊದಲ ಸ್ಥಾನದಲ್ಲಿ ಇರುತ್ತಿತ್ತು ಇದಕ್ಕೆ ಸಂಬಂಧಪಟ್ಟವರು ಮುಂದಿನ ದಿನಗಳಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ಇಂತಹ ಬೇಜವಾಬ್ದಾರಿಯ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಸಾರ್ವಜನಿಕರಿಗೆ ತೊಂದರೆಯನ್ನು ಕೊಡಬೇಡಿ.

ಜಾಹಿರಾತು

LEAVE A REPLY

Please enter your comment!
Please enter your name here