ಲಾಠಿ ಹಿಡಿಯುವ ಕೈಗಳಿಂದ ಮಕ್ಕಳಿಗೆ ಕಾನೂನಿನ ಪಾಠ ಮಾಡಿದ ರಿಪ್ಪನ್‌ಪೇಟೆ ಪಿಎಸ್ಐ !

0
1103

ರಿಪ್ಪನ್‌ಪೇಟೆ: ಶಾಲಾ ವಿದ್ಯಾರ್ಥಿಗಳು ಓದಿನೊಂದಿಗೆ ಕಾನೂನಿನ ಅರಿವು ಮೂಡಿಸಿಕೊಳ್ಳುವುದರೊಂದಿಗೆ ಪೊಲೀಸ್ ಇಲಾಖೆಯಲ್ಲಿ ದೂರು ನೀಡುವ ಸಂದರ್ಭದಲ್ಲಿ ಅಧಿಕಾರಿಗಳನ್ನು ಹೇಗೆ ಭೇಟಿ ಮಾಡಬೇಕು ಮತ್ತು ಅವರ ಸಲಹೆ ಪಡೆದು ದೂರನ್ನು ದಾಖಲಿಸುವ ಕುರಿತು ಸಮಗ್ರವಾಗಿ ವಿದ್ಯಾರ್ಥಿಗಳಿಗೆ ರಿಪ್ಪನ್‌ಪೇಟೆ ಠಾಣೆಯ ಪಿಎಸ್ಐ ಶಿವಾನಂದ್ ಕೋಳಿ ಮಾಹಿತಿ ನೀಡಿದರು.

ರಿಪ್ಪನ್‌ಪೇಟೆಯ ಪೊಲೀಸ್ ಠಾಣೆಗೆ ಕೋಡೂರಿನ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಇಂದು ಬೆಳಿಗ್ಗೆ ಭೇಟಿ ನೀಡಿ ಠಾಣೆಯಲ್ಲಿನ ಗಣಕಯಂತ್ರ, ಎಫ್ಐಆರ್ ದಾಖಲು ಮತ್ತು ಪೊಲೀಸ್ ಠಾಣೆಯ ಸೇಂಟ್ರಿ ಅಪರಾಧಿಯ ಶೆಲ್ ವಿಭಾಗ ಮತ್ತು ಎಎಸ್ಐ, ಹೆಡ್‌ ಕಾನ್ ಸ್ಟೇಬಲ್, ಪೊಲೀಸ್ ಪೇದೆಯಲ್ಲಿನ ಕರ್ತವ್ಯದ ಕುರಿತು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ಕಾನುನಿನ ಜಾಗೃತಿ ನೀಡಿದರು.

ಈ ಸಂದರ್ಭದಲ್ಲಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಸುಹಾಸ್ ಶಿಕ್ಷಕರಾದ ಸುನಂದಮ್ಮ, ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಜು ಮತ್ತು ಪೊಲೀಸ್ ಸಿಬ್ಬಂದಿ ವರ್ಗ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here