ಲಾಡ್ಜ್‌ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಇಬ್ಬರು ಯುವಕರು!

0
5123

ಸಾಗರ: ಪಟ್ಟಣದ ಲಾಡ್ಜ್‌ವೊಂದರಲ್ಲಿ ಇಬ್ಬರು ಯುವಕರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಗ್ರಾಮದ ಸಂತೋಷ್ (23) ಮತ್ತು ಹನುಮಂತ (28) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.

ಸಂತೋಷ್ ಮತ್ತು ಹನುಮಂತ ಇಬ್ಬರು ಶುಕ್ರವಾರ ತಡರಾತ್ರಿ ಲಾಡ್ಜ್‌ಗೆ ಬಂದು ಬಾಡಿಗೆಗೆ ರೂಂ ಪಡೆದಿದ್ದರು. ಶನಿವಾರ ಮಧ್ಯಾಹ್ನ ಇಬ್ಬರೂ ಹೊರಗೆ ಬಂದು ಊಟ ತೆಗೆದುಕೊಂಡು ರೂಂ ಸೇರಿಕೊಂಡಿದ್ದರು ಎನ್ನಲಾಗಿದೆ.

ಶನಿವಾರ ರಾತ್ರಿ ರೂಂ ಬಾಯ್ ಊಟಕ್ಕೆ ವಿಚಾರಿಸಲು ರೂಂ ಬಾಗಿಲು ಬಡಿದಿದ್ದಾನೆ. ಆದರೆ, ಇಬ್ಬರೂ ಹೊರಗೆ ಬಂದಿರಲಿಲ್ಲ. ರೂಂ ಬಾಯ್ ಇಬ್ಬರೂ ಮಲಗಿರಬೇಕು ಎಂದು ವಾಪಾಸ್ ತೆರಳಿದ್ದ. ಮಾರನೇ ದಿನ (ಭಾನುವಾರ) ಬೆಳಿಗ್ಗೆ ಸಹ ರೂಮಿನ ಬಾಗಿಲು ಸಾಕಷ್ಟು ಬಾರಿ ಬಡಿದಾಗಲೂ ಬಾಗಿಲು ತೆರೆಯಲಿಲ್ಲ. ಇದರಿಂದ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ರೂಮಿನ ಬಾಗಿಲು ಒಡೆದು ನೋಡಿದಾಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸಾಗರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here