ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆಯಾರ್ಭಟ ; ಹುಲಿಕಲ್ಲಿನಲ್ಲಿ ಅತ್ಯಧಿಕ 19 ಸೆಂ.ಮೀ. ಮಳೆ !

0
1411

ಹೊಸನಗರ (ಮ.ಟೈ): ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶ, ಮಲೆನಾಡಿನ ತವರೂರು ಹಾಗೂ ಹೃದಯ ಭಾಗವಾದ ಹೊಸನಗರ ತಾಲೂಕಿನಾದ್ಯಂತ ಶುಕ್ರವಾರದಿಂದ ಆಶ್ಲೇಷ ಮಳೆಯ ಆರ್ಭಟ ಹೆಚ್ಚಾಗಿದ್ದು ಶನಿವಾರ ಬೆಳಿಗ್ಗೆ 8:00 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ಚಿರಾಪುಂಜಿ ಖ್ಯಾತಿಗೆ ಪಾತ್ರವಾದ ತಾಲೂಕಿನ ಹುಲಿಕಲ್ಲು ಪ್ರದೇಶದಲ್ಲಿ 19 ಸೆಂಟಿ ಮೀಟರ್ ಮಳೆ ದಾಖಲಾಗಿದೆ.

ಉಳಿದಂತೆ ಮಾಸ್ತಿಕಟ್ಟೆಯಲ್ಲಿ 183, ಮಾಣಿಯಲ್ಲಿ 165, ಚಕ್ರಾನಗರದಲ್ಲಿ 161, ಸಾವೇಹಕ್ಲುನಲ್ಲಿ 160, ಯಡೂರಿನಲ್ಲಿ 137, ಸುಳುಗೋಡು 129, ಬಿದನೂರು ನಗರದಲ್ಲಿ 116, ಹೊಸನಗರದಲ್ಲಿ 87.2, ಲಿಂಗನಮಕ್ಕಿಯಲ್ಲಿ 67.2 ಮಿಲಿಮೀಟರ್ ಮಳೆ ದಾಖಲಾಗಿದೆ.

1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಇಂದು ಬೆಳಿಗ್ಗೆ 08 ಗಂಟೆಗೆ 1801.35 ಅಡಿ ತಲುಪಿದೆ. ಜಲಾಶಯಕ್ಕೆ 30397 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಜಲಾಶಯದ ನೀರಿನ ಮಟ್ಟ 1810.35 ದಾಖಲಾಗಿತ್ತು.

ಜಾಹಿರಾತು

LEAVE A REPLY

Please enter your comment!
Please enter your name here