ಲೇಖಕರು ತಮ್ಮನ್ನು ತಾವು ಪ್ರಶ್ನಿಸಿಕೊಂಡಾಗ ಮಾತ್ರ ಮೌಲ್ಯಯುತ ಸಾಹಿತ್ಯ ರಚನೆಯಾಗುತ್ತದೆ: ಕಲ್ಕುಳಿ ವಿಠಲ ಹೆಗಡೆ

0
192

ಶೃಂಗೇರಿ: ಗಂಭೀರವಾದ ಸಾಹಿತ್ಯವನ್ನ ರಚಿಸುವತ್ತ ಯುವಪೀಳಿಗೆ ಹೆಚ್ಚಿನ ಗಮನ ನೀಡಬೇಕು, ಲೇಖಕರು ಸೂಕ್ಷ್ಮವಾಗಿ ತಮ್ಮನ್ನು ತಾವು ಪ್ರಶ್ನಿಸಿಕೊಂಡಾಗ ಮಾತ್ರ ಮೌಲ್ಯಯುತ ಸಾಹಿತ್ಯ ರಚನೆಯಾಗುತ್ತದೆ ಎಂದು ಸಾಹಿತಿ ಕಲ್ಕುಳ್ಳಿ ವಿಠಲ ಹೆಗಡೆ ತಿಳಿಸಿದರು.

ಪಟ್ಟಣದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ಹಾಗು ಶೃಂಗೇರಿ ಸಾಹಿತ್ಯಾಸಕ್ತರ ವೇದಿಕೆ ಆಯೋಜಿಸಿದ್ದ ಸಾಹಿತಿ ಪದ್ಮನಾಭ ಆಗುಂಬೆ ಅವರು ಬರೆದ “ಕುರುಡು ಮಂತ್ರ” ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿ, ಸಮಾಜದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಕಾದಂಬರಿಗಳಲ್ಲಿ ಬರೆದು ಓದುಗರ ಕುತೂಹಲವನ್ನು ಹಿಡಿದಿಡುವಲ್ಲಿ ಕತೆಗಳು ಯಶಸ್ವಿಯಾಗಬೇಕು. ಪ್ರಸ್ತುತ ಬರವಣಿಗೆಯಲ್ಲಿ ನಾವು ಹಿಂದೆ ಇದ್ದೇವೆ. ಜೊತೆಗೆ ಓದುಗರ ಸಂಖ್ಯೆ ಕೂಡಾ ಕುಂಠಿತಗೊಂಡಿದೆ ಎಂದರು.

ತೀರ್ಥಹಳ್ಳಿ ನಿವೃತ್ತ ಪ್ರಾಧ್ಯಾಪಕಿ ಸುಮಿತ್ರ ಮಾತನಾಡಿ, ಸಮಾಜ ವೈಜ್ಞಾನಿಕವಾಗಿ ಮುಂದುವರಿದಿದೆ. ಕುವೆಂಪು, ಶಿವರಾಮ್ ಕಾರಂತ್ ಅಂತಹ ಶ್ರೇಷ್ಠ ಸಾಹಿತಿಗಳ ವಿಚಾರಧಾರೆಗಳು ಮರೆಯಾಗುತ್ತಿದೆ. ಸಾಹಿತ್ಯ ಸತ್ಯದ ಹಾದಿಯಲ್ಲಿ ಸಾಗಬೇಕು. ಆಗ ಮಾತ್ರ ಅದು ಓದುಗರ ಮನ ಮುಟ್ಟುತ್ತದೆ ಎಂದರು.

ಹಿರಿಯ ಸಾಹಿತಿ ಕೆ. ಪುಟ್ಟಯ್ಯ ಮಾತನಾಡಿ, ಸಾಹಿತ್ಯದಲ್ಲಿ ಅಂತ: ಸಾಕ್ಷಿ ಇರಬೇಕು, ಅದು ಇರದಿದ್ದರೆ ಸಮಾಜದ ಮೌಲ್ಯಗಳ ಅವ್ಯವಸ್ಥೆಯಾಗುತ್ತದೆ. ಪ್ರಸ್ತುತ ಅಕ್ಷರ ಸಂಸ್ಕೃತಿ ನಾಶವಾಗುತ್ತಿದೆ. ಬರವಣಿಗೆಯಲ್ಲಿ ಸಂಸ್ಕೃತಿ ಇರಬೇಕು. ಸಾಹಿತ್ಯವನ್ನು ಎಲ್ಲರೂ ಓದುವ ಹವ್ಯಾಸ ಬೆಳೆಸಿದಾಗ ಮಾತ್ರ ಸಾಹಿತ್ಯದ ಮೌಲ್ಯ ಬೆಳೆಯಲು ಸಾಧ್ಯ ಎಂದರು. ಕಾದಂಬರಿಕರ್ತ ಪದ್ಮನಾಭ ಆಗುಂಬೆ ಹಾಗೂ ಪುಪ್ಪ ದಂಪತಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಮಂಜುನಾಥ್ ಗೌಡ, ಮಹಿಳಾ ಮನೆ ಸಂಘದ ಮುಖ್ಯಸ್ಥೆ ಭಾಗ್ಯ ಹಾಗಲಗಂಚಿ, ಸಾಹಿತಿ ಪದ್ಮನಾಭ ಆಗುಂಬೆ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here