23.2 C
Shimoga
Sunday, November 27, 2022

ಲೋಕಾಯುಕ್ತ ಬಲೆಗೆ ಬಿದ್ದ
ಸರ್ಕಲ್ ಇನ್ಸ್‌ಪೆಕ್ಟರ್‌ !

ಎನ್ಆರ್ ಪುರ : ಪೊಲೀಸ್‌ ಅಧಿಕಾರಿಯೊಬ್ಬರು ಲಂಚ
ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ತಂಡ
ದಾಳಿ ನಡೆಸಿರುವ ಘಟನೆ ಎನ್.ಆರ್. ಪುರದಲ್ಲಿ ನಡೆದಿದೆ.

ತಾಲ್ಲೂಕಿನ ಸರ್ಕಲ್ ಇನ್ಸ್‌ಪೆಕ್ಟರ್‌ ವಸಂತ
ಶಂಕರ್ ಭಾಗವತ್ ಲೋಕಾಯುಕ್ತ ಬಲೆಗೆ ಬಿದ
ಇನ್ಸ್‌ಪೆಕ್ಟರ್‌. ಎನ್‌.ಆರ್‌.ಪುರ ಪಟ್ಟಣದ ಬಸ್ತಿಮಠ ರಸ್ತೆ
ನಿವಾಸಿ ಮಸ್ತಾನ್ ಎಂಬುವರಿಗೆ ಸೇರಿದ ಸಿಮೆಂಟ್
ಲಾರಿಯಲ್ಲಿ 15 ಟನ್ ತೂಕಕ್ಕಿಂತ ಹೆಚ್ಚುವರಿಯಾಗಿ
ವಸ್ತುಗಳನ್ನು ಹಾಕಲಾಗಿತ್ತು. ಅದಕ್ಕೆ ವಸಂತ ಶಂಕರ್
ಭಾಗವತ್ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಸ್ತಾನ್ ಲೋಕಾಯುಕ್ತ ಪೊಲೀಸರಿಗೆ ದೂರು
ನೀಡಿದ್ದರು.

ಶುಕ್ರವಾರ ಎನ್.ಆರ್.ಪುರ ವೃತ್ತ ನಿರೀಕ್ಷಕರ
ಕಚೇರಿಯಲ್ಲಿ ಲಂಚ ಪಡೆಯುವಾಗ ಚಿಕ್ಕಮಗಳೂರು
ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಹಣದ
ಸಮೇತ ಇನ್ಸ್‌ಪೆಕ್ಟರ್‌ರನ್ನು ಬಂಧಿಸಿ, ಕೆಲ ಕಾಲ ವಿಚಾರಣೆ
ನಡೆಸಿದರು.

ವಿಚಾರಣೆಯ ಬಳಕ ಸರ್ಕಲ್ ಇನ್ಸ್‌ಪೆಕ್ಟರ್‌
ವಸಂತ ಶಂಕರ್‌ ಭಾಗವತ್ ಅವರನ್ನು ನ್ಯಾಯಾಧೀಶರ
ಮುಂದೆ ಹಾಜರುಪಡೆಸುವ ಸಾಧ್ಯತೆ ಇದೆ ಎಂದು
ಹೇಳಲಾಗಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!