ರಿಪ್ಪನ್ಪೇಟೆ: ಪಟ್ಟಣದ ಬರುವೆ ಗ್ರಾಮದ ಜನಸಂಪರ್ಕದ ಮಧ್ಯದಲ್ಲಿರುವ ಲೋಕೋಪಯೋಗಿ ಇಲಾಖೆಯವರ ವಸತಿ ನಿಲಯಗಳು ನಿರ್ವಹಣೆ ಇಲ್ಲದೆ ಗಿಡಗಂಟಿಗಳಿಂದ ಮುಚ್ಚಿಹೋಗಿದ್ದು ಕೇಳೋರಿಲ್ಲ ಹೇಳೋರಿಲ್ಲದಂತಾಗಿ ಇಲಿ, ಹೆಗ್ಗಣ, ವಿಷಜಂತುಗಳ, ನಾಯಿಗಳ ಆಶ್ರಯ ತಾಣವಾಗಿವೆ.
ಸರ್ಕಾರಿ ನೌಕರರು ಕಡಿಮೆ ಬಾಡಿಗೆ ನೀಡಿ ವಾಸ ಮಾಡುತ್ತಿದ್ದ ಲೋಕೋಪಯೋಗಿ ಇಲಾಖೆಯ ವಸತಿ ನಿಲಯಗಳಿಗೆ ಒಂದು ಕಾಲದಲ್ಲಿ ಭಾರಿ ಬೇಡಿಕೆ ಇತ್ತು. ಆಗ ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸಿ ಆಧ್ಯತೆ ಮೇಲೆ ವಸತಿ ನಿಲಯವನ್ನು ನೀಡಲಾಗುತ್ತಿತ್ತು. ಆದರೆ ಈಗ ಅವರ ವೇತನಕ್ಕೆ ಅನುಗುಣವಾಗಿ ವಸತಿ ನಿಲಯಗಳ ಬಾಡಿಗೆಯನ್ನು ನೀಡಬೇಕಾಗಿರುವ ಕಾರಣ ಮತ್ತು ನೀರಿನ ಸೌಲಭ್ಯಗಳು ಇಲ್ಲದ ಕಾರಣ ಈ ನಿಲಯಗಳು ಖಾಲಿ ಖಾಲಿಯಾಗಿ ಉಳಿಯುವಂತಾಗಿದೆ.
8 ವಸತಿ ನಿಲಯಗಳಲ್ಲಿ ಎರಡು ವಸತಿ ನಿಲಯಗಳಲ್ಲಿ ಮಾತ್ರ ಸರ್ಕಾರಿ ಶಿಕ್ಷಕರು ವಾಸಮಾಡುತ್ತಿದ್ದು ಉಳಿದ 6 ವಸತಿ ನಿಲಯಗಳು ಖಾಲಿ-ಖಾಲಿಯಾಗಿವೆ. ಖಾಲಿಯಾಗಿರುವ ನಿಲಯಗಳು ನಿರ್ವಹಣೆ ಇಲ್ಲದೆ ಗಿಡಗಂಟಿಗಳಿಂದ ಮುಚ್ಚಿಹೋಗಿವೆ ಎಲ್ಲಿವೆ ವಸತಿ ನಿಲಯಗಳು ಎಂದು ಹಗಲು ವೇಳೆಯಲ್ಲಿಯೇ ಹುಡುಕುವಂತಾಗಿದೆ ಈ ಬಗ್ಗೆ ಸರ್ಕರ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಗಮನಹರಿಸಿ ಖಾಸಗಿಯವರ ಪಾಲಾಗುವ ಮುನ್ನವೇ ತಮ್ಮ ವಸತಿ ನಿಲಯಗಳನ್ನು ಸಂರಕ್ಷಿಸಿ ಸರ್ಕಾರಿ ನೌಕರರಿಗೆ ಬಾಡಿಗೆ ನೀಡಲು ಮುಂದಾಗುವರೇ ಕಾದುನೋಡಬೇಕಾಗಿದೆ.
Related