ವಚನಗಳ ಮೂಲಕ ಬದುಕಿಗೆ ದಾರಿ ತೋರಿದ ವಿಶ್ವಗುರು ಬಸವಣ್ಣ: ನಂಜುಂಡಪ್ಪ

0
332

ಹೊಸನಗರ: ಬಸವಣ್ಣ ಈ ಹೆಸರಿನಲ್ಲೆ ಏನೋ ಚೈತನ್ಯವಿದೆ ನಮ್ಮ ವಿಶ್ವವೇ ಕಂಡ ಮಹಾನ್ ಸಮಾಜ ಸುದಾರಕರಿವರು ಬಸವಣ್ಣನವರ ತತ್ವ ಆದರ್ಶಗಳು ಸದಾ ಕಾಲಕ್ಕೂ ಪ್ರಸ್ತುತ ವಚನಗಳ ಮೂಲಕ ಬದುಕಿಗೆ ದಾರಿ ತೋರಿದ ವಿಶ್ವಗುರು ಬಸವಣ್ಣನವರು ಎಂದು ವೀರಶೈವ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಖ್ಯಾತ ವಕೀಲರಾದ ನಂಜುಂಡಪ್ಪನವರು ಹೇಳಿದರು.

ಹೊಸನಗರದ ವೀರಶೈವ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ವಿಶ್ವ ಬಸವಣ್ಣ ಜಯಂತಿ ಆಚರಿಸಲಾಗಿದ್ದು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಬಸವಣ್ಣನವರು ಚಿಕ್ಕಂದಿನಿಂಲೇ ಕ್ರಾಂತಿಕಾರಿ ಎಂದು ಸಾಬೀತು ಪಡಿಸಿದ್ದು ಅವರ ಉಪನಯನ ಸಂಸ್ಕಾರದ ಘಟನೆಯಿಂದಲೇ ಕ್ರಾಂತಿಗೆ ಮುಂದಾಗಿದ್ದು ಇವರು ಸಮಾಜದ ಸುದಾರಣೆಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟವರು ಎಂದರು.

ಈ ಸಂದರ್ಭದಲ್ಲಿ ಹರತಾಳು ನಾಗರಾಜ್, ಡಿ.ಆರ್ ಶೋರೂಮ್ ಮಾಲೀಕರಾದ ಮಲ್ಲಿಕಾ, ವಿಶ್ವೇಶ್ವರ, ಗೀತಾ ಗಿರೀಶ್ ಹಾಗೂ ವೀರಶೈವ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೆಶಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here