ವಡಗೆರೆ: ತುಳಜಾಭವಾನಿ ದೇವಸ್ಥಾನದಲ್ಲಿ ಅ‌.7 ರಿಂದ ಶರನ್ನವರಾತ್ರಿ

0
315

ರಿಪ್ಪನ್‌ಪೇಟೆ: ಸಮೀಪದ ವಡಗೆರೆ ಶ್ರೀ ತುಳಜಾಭವಾನಿ ಸನ್ನಿಧಿಯಲ್ಲಿ ಅಕ್ಟೋಬರ್ 7 ರಿಂದ 15ರ ವರೆಗೆ ಶರನ್ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

7 ರಂದು ದೇವಿಯ ಕಳಸ ಸ್ಥಾಪನೆ ಪೂಜೆ ಪ್ರಸಾದ ವಿನಿಯೋಗ, 13 ರಂದು ದುರ್ಗಾಷ್ಠಾಮಿ ದಿನ ಅಮ್ಮನವರಿಗೆ ಉಡಿ ತುಂಬುವ ಕಾರ್ಯಕ್ರಮ, 14 ರಂದು ಆಯುಧ ಪೂಜೆ ಪಲ್ಲಕ್ಕಿಯಲ್ಲಿ ದೇವಿಯ ಉತ್ಸವಮೂರ್ತಿ ಪ್ರತಿಷ್ಠಾಪನೆ 15ರಂದು ವಿಜಯದಶಮಿ ದೇವಿಯ ಸನ್ನಿಧಿಯಲ್ಲಿ ದುರ್ಗಾ ಹೋಮ ನಂತರ ಸಾಮೂಹಿಕ ಅನ್ನ ಸಂತರ್ಪಣೆ ಹಾಗು ಪಲ್ಲಕ್ಕಿ ಉತ್ಸವ ಜರುಗಲಿದೆ ಎಂದು ದೇವಸ್ಥಾನ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here