ವರಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮುತ್ತೈದೆಯರಿಗೆ ಬಾಗಿನ ಸಮರ್ಪಣೆ

0
334

ರಿಪ್ಪನ್‌ಪೇಟೆ: ಭಾರತೀಯ ಸಂಸ್ಕೃತಿಯಲ್ಲಿ ನಾರಿಯರಿಗೆ ವಿಶೇಷ ಸ್ಥಾನ ಗೌರವ ಅದರನ್ವರ ರಾಜ್ಯ ಸರ್ಕಾರ ವರಮಹಾಲಕ್ಷ್ಮೀ ಪೂಜೆಯ ದಿನದೊಂದು ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಅರಿಶಿಣ, ಕುಂಕುಮ, ಬಳೆ ಹಾಗೂ ಬ್ಲೌಜ್ ಪೀಸ್‌ಗಳೊಂದಿಗೆ ಬಾಗಿನ ಸಮರ್ಪಿಸಿದರು.

ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಶುಕ್ರವಾರ ದೇವಸ್ಥಾನಕ್ಕೆ ಮಹಿಳೆಯರು ಬೆಳಗ್ಗೆಯಿಂದಲೇ ಜಗನ್ಮಾತೆ ಅನ್ನಪೂರ್ಣೇಶ್ವರಿ ಅಮ್ಮನವರ ಮತ್ತು ವರಸಿದ್ದಿವಿನಾಯಕ ದೇವರ ದರ್ಶನಾರ್ಶಿವಾದ ಪಡೆಯಲು ಬಂದವರು. ಸರ್ಕಾರದ ಆದೇಶದಂತೆ ದೇವಸ್ಥಾನ ಸಮಿತಿಯವರು ನೀಡುತ್ತಿರುವ ಬಾಗಿನವನ್ನು ಸ್ವೀಕರಿಸಿ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ದೇವಸ್ಥಾನ ಧರ್ಮದರ್ಶಿ ಸಮಿತಿ ಅಧ್ಯಕ್ಷ ಗಣೇಶ್ ಎನ್.ಕಾಮತ್, ಎಂ.ಡಿ.ಇಂದ್ರಮ್ಮ, ಜಯಲಕ್ಷ್ಮಿ, ಈಶ್ವರಪ್ಪ, ವಾಣಿ ಗೋವಿಂದಪ್ಪಗೌಡ, ಸರಸ್ವತಿ, ಶೈಲಾ ಆರ್.ಪ್ರಭು, ಸಂಧ್ಯಾ ಜಿ.ಕಾಮತ್, ಜಯಲಕ್ಷ್ಮಿ ಮೋಹನ್,‌ ಶಕುಂತಲಾ, ದೀಪಾ ಸುಧೀರ್ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here