ರಿಪ್ಪನ್ಪೇಟೆ: 4.86 ಕೋಟಿ ರೂ. ವೆಚ್ಚದ ಸುಸಜ್ಜಿತ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಶಾಸಕ ಹರತಾಳು ಹಾಲಪ್ಪ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಕಟ್ಟಡ ಕಾಮಗಾರಿ ವೀಕ್ಷಣೆಯೊಂದಿಗೆ ಕಟ್ಟಡದ ನೀಲನಕ್ಷೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡುವುದು ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಹಿಂಭಾಗದ ಮಹಡಿ ಮಟ್ಟಿಲ ಬಳಿ ಕಬ್ಬಣದ ಬಾಗಿಲು ಅಳವಡಿಸುವುದು ಮತ್ತು ಮುಂಭಾಗದ ವರಾಂಡದಲ್ಲಿ ಸ್ಟೆನ್ಲೆಸ್ ಪೈಪ್ ಅಳವಡಿಸುವಂತೆ ಹೀಗೆ ಕೆಲವು ಬದಲಾವಣೆಯನ್ನು ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಕಾಮಗಾರಿಗೆ ಶಂಕುಸ್ಥಾಪನೆ ಮಾಡುವುದೇ ನನ್ನ ಉದ್ದೇಶವಾಗದೆ ಹಲವು ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವುದರಿಂದ ಕಳಪೆ ದರ್ಜೆಯಲ್ಲಿ ಮಾಡಿದ್ದಾರಾ ಅಥವಾ ಪ್ಲಾನ್ ಅಂಡ್ ಎಸ್ಟಿಮೆಂಟ್ನಂತೆ ಕಾಮಗಾರಿ ನಿರ್ವಹಿಸಿದ್ದಾರಾ ಎಂಬುದನ್ನು ತಜ್ಞ ಇಂಜಿನಿಯರೊಂದಿಗೆ ಚರ್ಚಿಸಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲು ಇದೊಂದು ಅವಕಾಶವೆಂದರು.
ನಿಮ್ಮೂರಿನ ರಸ್ತೆ ಕಟ್ಟಡ ಹೀಗೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ತರುವುದೇ ಕೆಲಸವಾಗದೆ ಅನುದಾನ ಸಮರ್ಪಕವಾಗಿ ಸದ್ಬಳಕೆಯಾಗಿದೆಯೇ ಎಂಬುದನ್ನು ಖುದ್ದು ಪರಿಶೀಲಿಸಿದಾಗ ಮಾತ್ರ ಅಭಿವೃದ್ದಿಗೆ ಹೆಚ್ಚು ಮೌಲ್ಯ ಬರುವುದೆಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮಿ, ಜಿ.ಪಂ.ಮಾಜಿ ಸದಸ್ಯೆ ಎ.ಟಿ.ನಾಗರತ್ನ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಎಂ.ಸುರೇಶ್ಸಿಂಗ್, ಮೆಣಸೆ ಆನಂದ, ಗುತ್ತಿಗೆದಾರ ಹೆಚ್.ಎಸ್.ರವಿ ಹಾಲುಗುಡ್ಡೆ, ಕೆ.ಬಿ.ಹೂವಪ್ಪ, ಗ್ರಾ.ಪಂ.ಸದಸ್ಯ ಸುಧೀಂದ್ರ ಪೂಜಾರಿ, ದಾನಮ್ಮ, ವಿನೋಧ, ವನಮಾಲ
ದೀಪಾ ಸುಧೀರ್, ಎಇ ಶಿವಮೂರ್ತಿ, ಪಿಡಿಓ ಜೆ.ಚಂದ್ರಶೇಖರ್ ಇನ್ನಿತರರು ಹಾಜರಿದ್ದರು.
Related