ವಸವೆ ಗ್ರಾಮದ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಾವಸ್ಥೆಯಲ್ಲಿ ; ಸರಿಪಡಿಸಲು ಗ್ರಾಮಸ್ಥರ ಆಗ್ರಹ

0
241

ಹೊಸನಗರ: ತಾಲ್ಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸವೆ ಗ್ರಾಮದ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಾವಸ್ಥೆಗೊಂಡಿದ್ದು ತುರ್ತು ಸರಿಪಡಿಸಲು ಅಲ್ಲಿನ ಗ್ರಾಮಸ್ಥರ ಪರವಾಗಿ ವೈ. ಧರ್ಮಪ್ಪನವರು ಆಗ್ರಹಿಸಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿಯ ಮೂಲಕ ತಿಳಿಸಿದ್ದಾರೆ.

ಈ ಅಂಗನವಾಡಿ ಕೆಂದ್ರದಲ್ಲಿ ಸುಮಾರು 20 – 25 ಮಕ್ಕಳಿದ್ದು ನೆಲದ ಅಡಿಪಾಯದಿಂದ ಮೇಲಿನ ಹೆಂಚಿನವರೆಗೆ ಶಿಥಿಲಾವಸ್ಥೆಯಾಗಿದೆ ಇದನ್ನು ರಿಪೇರಿ ಮಾಡುವ ಬದಲು ಹೊಸ ಅಂಗನವಾಡಿಯನ್ನೇ ಕಟ್ಟಿಕೊಡಬೇಕೆಂದು ಹಾಗೂ ನೂತನ ಅಂಗನವಾಡಿ ಕಟ್ಟಡ ಕಟ್ಟುವವರೆಗೆ ಈ ಅಂಗನವಾಡಿಯನ್ನು ತಾತ್ಕಾಲಿಕ ದುರಸ್ಥಿ ಮಾಡಕೊಡಬೇಕೆಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here