ವಾಕಿಂಗ್ ಹೋಗಿದ್ದ ವೇಳೆ ಅನಾಹುತ: ನವ ವಿವಾಹಿತೆಯನ್ನೇ ಬಲಿ ಪಡೆದ ನಾಯಿ ಚೈನ್!

0
57886

ತೀರ್ಥಹಳ್ಳಿ: ನಾಯಿ ಕರೆದುಕೊಂಡು ವಾಕಿಂಗ್ ಹೋಗಿದ್ದ ವೇಳೆ ಆಕಸ್ಮಿಕವಾಗಿ ನವ ವಿವಾಹಿತೆಯೊಬ್ಬಳು ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಕೈಮರದಲ್ಲಿ ಶನಿವಾರ ನಡೆದಿದ್ದು, ಭಾನುವಾರ ಮೃತದೇಹ ಪತ್ತೆಯಾಗಿದೆ.

ನಿಶ್ಮಿತಾ (26) ಮೃತ ದುರ್ದೈವಿಯಾಗಿದ್ದು, ಕೈಮರದ ನಾಗಪ್ಪ ಗೌಡ ಅವರ ಪುತ್ರ ಮಂಜುನಾಥ್ ಅವರ ಪತ್ನಿಯಾಗಿದ್ದು, ಮೂಲತಃ ಹೊಸನಗರ ತಾಲೂಕು ಹುಲಿಕಲ್. ಕಳೆದ 3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನಿಶ್ಮಿತಾ ಶನಿವಾರ ಬೆಳಿಗ್ಗೆ ನಾಯಿ ಕರೆದುಕೊಂಡು ವಾಯು ವಿಹಾರಕ್ಕೆ ಹೋಗಿದ್ದಾಳೆ. ಈ ವೇಳೆ ಕೆರೆದಂಡೆ ಮೇಲೆ ಹೋಗುವಾಗ ನಾಯಿ ಚೈನ್ ಎಳೆದು ಓಡಿದೆ. ಆಗ ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದಾಳೆ. ಮನೆಯವರು ಸಂಜೆವರೆಗೆ ಹುಡುಕಿದರೂ ಸಿಕ್ಕಿರಲಿಲ್ಲ. ಭಾನುವಾರ ಕೆರೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿವಾಹಪೂರ್ವ ಗರ್ಭವತಿ: ತಾಯಿ, ಮಗು ಸಾವು!

ಮದುವೆಯಾಗುವ ಮುನ್ನ ಗರ್ಭವತಿಯಾದ ಅಶ್ವಿನಿ (20) ಎಂಬಾಕೆ ಪ್ರಸವ ಸಂದರ್ಭ ಮಗುವಿನೊಂದಿಗೆ ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ಶಿವಮೊಗ್ಗ ತಾಲೂಕಿನ ಕುಂಸಿಯಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಶ್ವಿನಿ, ಭದ್ರಾವತಿ ಮೂಲದ ಬಸವರಾಜ್ ನನ್ನು ಪ್ರೀತಿಸುತ್ತಿದ್ದಳು ಎಂದು ಮೂಲಗಳಿಂದ ತಿಳಿದು ಬಂದಿದೆ. ಬಸವರಾಜ್ ಅಶ್ವಿನಿ ಒಟ್ಟಿಗಿದ್ದು, ವಿವಾಹವಾಗಬೇಕಿತ್ತು. ಆದರೆ ವಿವಾಹಕ್ಕೂ ಮೊದಲೇ ಅಶ್ವಿನಿ ಗರ್ಭವತಿಯಾಗಿದ್ದು, ಮನೆಯವರಿಂದ ವಿಷಯ ಮುಚ್ಚಿಟ್ಟಿದ್ದಳು. ಮಗಳಲ್ಲಿನ ದೈಹಿಕ ಬದಲಾವಣೆ ಗಮನಿಸಿದ ತಾಯಿ ಪ್ರಶ್ನೆ ಮಾಡಿದಾಗ ಅಶ್ವಿನಿ ವಿಷಯ ಮರೆಮಾಚಿದ್ದಳೆನ್ನಲಾಗಿದೆ. ಆದರೆ ಅಶ್ವಿನಿಗೆ ಏಳು ತಿಂಗಳು ತುಂಬುತ್ತಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಮನೆಯವರಿಗೆ ವಿಷಯ ತಿಳಿಸದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾಗಿದ್ದಾಳೆ. ಆಸ್ಪತ್ರೆಯಲ್ಲಿ ಪ್ರಸವ ಪೂರ್ವ ಬ್ಲೀಡಿಂಗ್ ಆಗಿದ್ದು, ಶಿಶು ಗರ್ಭದಲ್ಲಿಯೇ ತೀರಿಕೊಂಡಿತ್ತು. ಎರಡು ತಾಸಿನ ಬಳಿಕ ಅಶ್ವಿನಿ ಕೂಡ ಸಾವನ್ನಪ್ಪಿದ್ದಾಳೆ. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರಿಂದ ಕುಟುಂಬಕ್ಕೆ ಮಾಹಿತಿ ಸಿಕ್ಕಿದೆ.

ಅಶ್ವಿನಿ ಹಾಗು ಮಗುವಿನ ಸಾವಿಗೆ ಕಾರಣನಾದ ಬಸವರಾಜ್ ಮತ್ತು ಮತ್ತಿಬ್ಬರು ಯುವಕರನ್ನು ಬಂಧಿಸಲು ಕುಂಸಿ ಪೊಲೀಸರು ಬಲೆ ಬೀಸಿದ್ದಾರೆ. ಇತ್ತೀಚೆಗೆ ಬಸವರಾಜ್ ಕುಂಸಿಗೆ ಬಂದು ಒಂದು ವಾರ ಅಶ್ವಿನಿ ಮನೆಯಲ್ಲಿ ತಂಗಿದ್ದ ಮಾಹಿತಿ ಪ್ರಾಥಮಿಕವಾಗಿ ಲಭ್ಯವಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here