ವಾಲ್ಮೀಕಿ ಸಮಾಜಕ್ಕೆ 7.5 ಮೀಸಲಾತಿ ನೀಡಿ ; ಸರ್ಕಾರಕ್ಕೆ ಹೊಸನಗರ ತಾಲ್ಲೂಕು ವಾಲ್ಮೀಕಿ ಸಂಘದಿಂದ ಮನವಿ

0
450

ಹೊಸನಗರ: ಕರ್ನಾಟಕ ಸರ್ಕಾರ ವಾಲ್ಮೀಕಿ ಜನಾಂಗದವರಿಗೆ 7.50 ಮೀಸಲಾತಿ ನೀಡಬೇಕೆಂದು ಹೊಸನಗರ ತಾಲ್ಲೂಕು ವಾಲ್ಮೀಕಿ ಜನಾಂಗದ ತಾಲ್ಲೂಕು ಅಧ್ಯಕ್ಷರಾದ ಎಸ್.ಹೆಚ್ ನಿಂಗಮೂರ್ತಿಯವರ ನೇತೃತ್ವದಲ್ಲಿ ತಾಲ್ಲೂಕು ಕಛೇರಿಯ ಪ್ರಬಾರ ತಹಶೀಲ್ದಾರ್ ಶ್ರೀಕಾಂತ್ ಹೆಗಡೆಯವರಿಗೆ ಮನವಿ ಪತ್ರ ಸಲ್ಲಿಸಿದರು.

ನಂತರ ಮಾತನಾಡಿದ ತಾಲ್ಲೂಕು ಅಧ್ಯಕ್ಷ ಎಸ್ ಹೆಚ್ ನಿಂಗಮೂರ್ತಿ, ರಾಜ್ಯನಹಳ್ಳಿ ಗುರುಪೀಠದ ಪೂಜ್ಯ ಪ್ರಸನ್ನ ನಂದ ಗುರೂಜಿಯವರು 7.5 ಮೀಸಲಾತಿಗಾಗಿ ಸುಮಾರು 96ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಸತ್ಯಗ್ರಹ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಈ ಹಿಂದೆ ಸರ್ಕಾರ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದು ಆದರೆ ಅದನ್ನು ಮರೆತಂತೆ ಕಾಣುತ್ತಿದೆ ನಾಗಮೋಹನ್ ವರದಿ ಆಧರಿಸಿ ನಮಗೆ ಸರ್ಕಾರ ನ್ಯಾಯ ನೀಡಬೇಕು ಇಲ್ಲವಾದರೆ ಮುಂದಿನ ದಿನದಲ್ಲಿ ವಾಲ್ಮೀಕಿ ಜನಾಂಗ ಹಿರಿಯ ನಾಯಕರೆಲ್ಲರೂ ಒಟ್ಟಿಗೆ ಸೇರಿ ಉಗ್ರ ಹೋರಾಟ ಮಾಡಲು ಸಿದ್ಧರಾಗಬೇಕಾಗುತ್ತದೆ. ತಕ್ಷಣ ಸರ್ಕಾರ ಸ್ವಂದಿಸಿ ನಮ್ಮ ಜನಾಂಗಕ್ಕೆ 7.5 ಮೀಸಲಾತಿ ನೀಡಲಿ ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯವೆಂದರು.

ಈ ಮನವಿ ಪತ್ರ ನೀಡುವ ಸಂದರ್ಭದಲ್ಲಿ ತಾಲ್ಲೂಕು ಕಛೇರಿಯ ಪ್ರಥಮ ದರ್ಜೆ ಗುಮಾಸ್ಥರಾದ ವಿನಯ್ ಎಂ ಆರಾಧ್ಯ, ನಾಗರಾಜ್ ಕಿಣಿ ವಾಲ್ಮೀಕಿ ಜನಾಂಗದ ತಾಲ್ಲೂಕು ಉಪಾಧ್ಯಕ್ಷೆ ಕುಸುಮವತಿ, ನಿರ್ದೆಶಕರಾದ ಮಂಜಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here