ವಿಕಾಸತೀರ್ಥ ಬೈಕ್‌ ರ್‍ಯಾಲಿ ; ಹೆಲ್ಮೆಟ್ ಧರಿಸಿ ಸ್ವತಃ ತಾವೇ ಬೈಕ್ ಓಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

0
271

ತೀರ್ಥಹಳ್ಳಿ : ಪ್ರಧಾನಿ ನರೇಂದ್ರ ಮೋದಿ ಭಾರತ ದೇಶವನ್ನು ವಿಶ್ವ ಗುರುವನ್ನಾಗಿಸುತ್ತ ಅಹರ್ನಿಶಿ ಕಾರ್ಯ ನಿರ್ವಹಿಸುತ್ತಿದ್ದು ಇವರ ಈ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಸಲುವಾಗಿ ಮಂಗಳವಾರ ತೀರ್ಥಹಳ್ಳಿಯಲ್ಲಿ ವಿಕಾಸ ತೀರ್ಥ ಬೈಕ್‌ ರ್‍ಯಾಲಿ ಭರ್ಜರಿಯಾಗಿ ನಡೆಯಿತು.

ಸುಮಾರು 300 ಕ್ಕೂ ಅಧಿಕ ಸಂಖ್ಯೆಯಲ್ಲಿ ಬೈಕ್ ಗಳಲ್ಲಿ ಬಿಜೆಪಿ ಕಾರ್ಯಕರ್ತರು ಶ್ರೀ ರಾಮೇಶ್ವರ ದೇವಸ್ಥಾನದಿಂದ ಹೊರಟು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ದೇಶಕ್ಕೆ ನರೇಂದ್ರ ರಾಜ್ಯಕ್ಕೆ ಜ್ಞಾನೇಂದ್ರ ಎಂಬ ಘೋಷಣೆ ಕೂಗುತ್ತ ಸಂಚರಿಸಿದರು.

ವಿಕಾಸ ತೀರ್ಥ ಬೈಕ್‌ ರ್‍ಯಾಲಿಯಲ್ಲಿ ಪ್ರಮುಖ ಆಕರ್ಷಣೆಯಾಗಿ ಗೃಹಸಚಿವ ಆರಗ ಜ್ಞಾನೇಂದ್ರ ಕಾಣಿಸಿಕೊಂಡರು. ಸ್ವತಃ ತಾವೇ ಹೆಲ್ಮೆಟ್ ಧರಿಸಿ ಬೈಕ್ ಓಡಿಸಿ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ಬರುವಂತೆ ಮಾಡಿದರು.

ಇದಕ್ಕೂ ಮೊದಲು ಬೈಕ್ ಏರಿ ತಮ್ಮ ಕಾರ್ಯಕರ್ತರ ಪಡೆಯನ್ನು ನೋಡಿ ಕಿಲಕಿಲ ನಗುತ್ತಾ ಸಂತಸದಿಂದ ಬೈಕ್ ಓಡಿಸಿದರು.

ಬೈಕ್‌ ರ್‍ಯಾಲಿಯಲ್ಲಿ ಟಿ. ಡಿ ಮೇಘರಾಜ್, ಆದರ್ಶ ಗೋಖಲೆ ಸೇರಿ ತೀರ್ಥಹಳ್ಳಿಯ ನೂರಾರು ಯುವ ಮೋರ್ಚಾ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here