ವಿಕೇಂದ್ರಿಕರಣ ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ತಿರುಚಿ ಅಭಿವೃದ್ಧಿ ವ್ಯವಸ್ಥೆಯನ್ನು ಕುಲಗೆಡಿಸಿದ ಸರ್ಕಾರ ಬಿಜೆಪಿ: ಮಲ್ಲಿಕಾರ್ಜುನ ಹಕ್ರೆ ಗಂಭೀರ ಆರೋಪ

0
676

ಹೊಸನಗರ : ಶಾಸಕರುಗಳು ಜಿಲ್ಲಾ ಉಸ್ತುವಾರಿ ಸಚಿವರು ಆಡಳಿತದಲ್ಲಿ ಮೂಗು ತೂರಿಸಿದ ವ್ಯವಸ್ಥೆಯಿಂದಾಗಿ ಅರ್ಹ ಫಲಾನುಭವಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ದೇಶದಲ್ಲಿ ಮಾದರಿಯಾಗಿದ್ದ ಪಂಚಾಯತ್ ರಾಜ್ ವ್ಯವಸ್ಥೆ ವಿಕೇಂದ್ರಿಕರಣ ವ್ಯವಸ್ಥೆ ರಾಜ್ಯದಲ್ಲಿ ಎಕ್ಕುಟ್ಟಿ ಹೋಗಿದೆ. ಬಡ ಜನಪರ ಕಾಳಜಿ ಇಲ್ಲದ ಈ ಸರ್ಕಾರ ಅಸ್ತಿತ್ವದಲ್ಲಿ ಇರುವುದು ಖಂಡನಾರ್ಹ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ಸಾಗರ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಹಕ್ರೆ ಯವರು ಗಂಭೀರ ಆರೋಪ ಮಾಡಿದರು.

ಅವರು ಇಂದು ಗ್ರಾಮ ಪಂಚಾಯಿತಿಗೆ ಮನೆ ನೀಡುವ ಅಧಿಕಾರವನ್ನು ಕಸಿದುಕೊಂಡು ಶಾಸಕರಿಗೆ ನೀಡಿರುವ ಅಧಿಕಾರದ ಸರ್ಕಾರದ ನೀತಿಯ ವಿರುದ್ಧ ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಹಿಂದಿನ ಸರ್ಕಾರಗಳಲ್ಲಿ ಗ್ರಾಮ ಪಂಚಾಯತಿಯ ಫಲಾನುಭವಿಗಳ ಆಯ್ಕೆಯನ್ನು ಗ್ರಾಮಸಭೆಗಳಲ್ಲಿ ನಡೆಸಲಾಗುತ್ತಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರ ಅಧಿಕಾರ ಬಂದ ಮೇಲೆ ಪಂಚಾಯತ್ ರಾಜ್ ಕಾನೂನನ್ನು ಗಾಳಿಗೆ ತೂರಿ ಸರ್ಕಾರಿ ಆದೇಶ ಉಲ್ಲಂಘನೆ ಮಾಡಿ ಫಲಾನುಭವಿಗಳನ್ನು ನೇರವಾಗಿ ಶಾಸಕರಿಗೆ ಆಯ್ಕೆ ಮಾಡಲು ಅವಕಾಶ ನೀಡಿದ್ದರಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರುಗಳ ಅಧಿಕಾರವನ್ನು ಮೊಟಕುಗೊಳಿಸಿದ್ದು ಅಲ್ಲದೆ ಅವರುಗಳ ಅಧಿಕಾರದಲ್ಲಿ ಶಾಸಕರು ಹಸ್ತಕ್ಷೇಪ ಮಾಡುತ್ತಿರುವುದು ತೀರ ಖಂಡನಾರ್ಹವಾಗಿದೆ ಎಂದರು.

ಇದು ಸ್ಪಷ್ಟವಾಗಿ ಪಂಚಾಯತ್ ರಾಜ್ ಕಾನೂನನ್ನು ಉಲ್ಲಂಘಿಸಿದಂತಾಗಿದೆ ಆದುದರಿಂದ ಇದನ್ನು ತಕ್ಷಣದಿಂದ ತಡೆ ಹಿಡಿದು ಸ್ಥಳೀಯ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಹೊಸನಗರದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್‌ರವರಿಗೆ ಮನವಿ ಪತ್ರ ಸಲ್ಲಿಸಿ ಮನೆ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯಿತಿ ಗ್ರಾಮ ಸಭೆಗಳಲ್ಲಿಯೇ ತೀರ್ಮಾನಿಸಿ ಮನೆಗಳನ್ನು ವಿತರಿಸಬೇಕೆಂದರು.

ಈ ಸಂದರ್ಭದಲ್ಲಿ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ ನಾಗರಾಜ್, ಕಾರ್ಯದರ್ಶಿ ಡಿ.ಎಂ ಸದಾಶಿವ ಶ್ರೇಷ್ಠಿ, ತಾಲೂಕು ಪಂಚಾಯತ್ ಸದಸ್ಯ ಎರಗಿ ಉಮೇಶ್, ಕಳೂರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಡಿ.ಆರ್ ವಿನಯ್ ರಫೀಕ್, ಬಾಬುಜಾನ್ ಗ್ರಾಮ ಪಂಚಾಯತಿ ಅಧ್ಯಕ್ಷರುಗಳಾದ ಕರುಣಾಕರ ಶೆಟ್ಟಿ, ಶ್ರೀಮತಿ ಸುವರ್ಣ, ಕಲ್ಲಿ ಯೋಗೇಂದ್ರ ಚಂದ್ರಶೇಖರ್, ಲಕ್ಷ್ಮಣ್, ಅಶ್ವಿನಿ, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸದಸ್ಯರುಗಳು ಉಪಸ್ಥಿತರಿದ್ದು ಮಾತನಾಡಿದರು. ಪ್ರತಿಭಟನಾ ಸಭೆಯ ನಂತರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಿ.ಆರ್ ಪ್ರವೀಣ್ ರವರಿಗೆ ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಸರ್ಕಾರವನ್ನು ಆಗ್ರಹಿಸುವ ಮನವಿ ಸಲ್ಲಿಸಲಾಯಿತು.

ವರದಿ: ಉಡುಪಿ ಎಸ್ ಸದಾನಂದ ಹೊಸನಗರ 8277173177
ಜಾಹಿರಾತು

LEAVE A REPLY

Please enter your comment!
Please enter your name here