ವಿಜೃಂಭಣೆಯೊಂದಿಗೆ ಸಂಪನ್ನಗೊಂಡ ಶ್ರೀಜೇನುಕಲ್ಲಮ್ಮ ಜಾತ್ರಾ ಮಹೋತ್ಸವ

0
200ರಿಪ್ಪನ್‌ಪೇಟೆ: ಪುರಾಣ ಪ್ರಸಿದ್ದ ಹೆಬ್ಬಂಡೆಯಲ್ಲಿ ನೆಲೆಸಿರುವ ಜಗನ್ಮಾತೆ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವವು ವಿಜೃಂಭಣೆಯೊಂದಿಗೆ ಇಂದು ಸಂಪನ್ನಗೊಂಡಿತು.
ಭಾದ್ರಪದ ಮಾಸದ ಹುಣ್ಣಿಮೆಯಿಂದ ಮಹಾಲಯ ಅಮಾವಾಸ್ಯೆಯವರೆಗೆ ಎರಡು ಮಂಗಳವಾರ, ಎರಡು ಶುಕ್ರವಾರ ಪಿತೃ ಪಕ್ಷದಲ್ಲಿ ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಿಯ ಜಾತ್ರಾಮಹೋತ್ಸವವು ಶ್ರದ್ದಾಭಕ್ತಿಯಿಂದ ಅದ್ದೂರಿಯಾಗಿ ನೆರವೇರಿತು.


ದೇವಸ್ಥಾನದ ಪ್ರಧಾನ ಅರ್ಚಕ ಭಾಸ್ಕರ್ ಜೋಯ್ಸ್ ನೇತೃತ್ವದಲ್ಲಿ ಹಳೆಯ ಅಮ್ಮನಘಟ್ಟದಲ್ಲಿ ತಾಯಿ ಮಹಾಮಾತೆ ಜೇನುಕಲ್ಲಮ್ಮ ದೇವಿಗೆ ಪೂಜೆ ಸಲ್ಲಿಸಿ ನಂತರ ಕಂಕಣ ಧಾರಣೆ ಮಾಡಿ ಎರಡು ಮಂಗಳವಾರ ಮತ್ತು ಎರಡು ಶುಕ್ರವಾರದಂದು ದೇವಿಗೆ ವಿಶೇಷ ಅಲಂಕಾರಿಕಾ ಪೂಜೆಯೊಂದಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರೆವರಿಸುತ್ತಾ ಸಂಕಷ್ಟ ಪರಿಹರಿಸು ತಾಯಿ ಎಂದು ಹರಕೆ ಹೊತ್ತು ಬರುವ ಭಕ್ತರು
ಸಮೂಹಕ್ಕೆ ಸಂಕಷ್ಟ ಪರಿಹರಿಸುವ ತಾಯಿಯ ದರ್ಶನಕ್ಕೆ ತಂಡೋಪ ತಂಡದಲ್ಲಿ ಸಾವಿರಾರು ಭಕ್ತರು ಹರಿದು ಬಂದಿರುವುದು ಈ ಭಾರಿಯ ವಿಶೇಷವಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಬಿ.ಸ್ವಾಮಿರಾವ್ ವಿವರಿಸಿದರು.


ದೇವಸ್ಥಾನ ಸೇವಾ ಸಮಿತಿ ಪ್ರಧಾನಕಾರ್ಯದರ್ಶಿ ಸುಧೀರ್ ಭಟ್, ಹರೀಶ್‌ ಕಲ್ಯಾಣಪ್ಪಗೌಡ, ಶ್ರೀನಿವಾಸ್, ಸಂತೋಷ್, ರತ್ನಮ್ಮ ಇನ್ನಿತರ ಪದಾಧಿಕಾರಿಗಳು ದೇವಸ್ಥಾನ ಸೇವಾ ಸಿಬ್ಬಂದಿವರ್ಗ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here