ವಿಜೃಂಭಣೆಯೊಂದಿಗೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ

0
371

ರಿಪ್ಪನ್‌ಪೇಟೆ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೋಟ್ಯಂತರ ಭಾರತೀಯರ ತ್ಯಾಗ ಬಲಿದಾನ ಹೋರಾಟ ಇದೆ.‌ ದೇಶ ಬ್ರಿಟೀಷರ ಆಳ್ವಿಕೆಯಿಂದಾಗಿ ಭಾರತೀಯರು ಬ್ರಿಟೀಷರ ಕೈಗೊಂಬೆಗಳಾಗಿ ಕೆಲಸ ಮಾಡಬೇಕಾಗಿತು. ಇಂಗ್ಲೀಷರ ಆಳ್ವಿಕೆಯಿಂದ ಮುಕ್ತಗೊಳಿಸಲು ಹಲವು ಮಹನೀಯರು ಹೋರಾಟದ ಫಲವೇ ಸ್ವಾತಂತ್ರ್ಯೋತ್ಸವ ಇಂದು ದೇಶ ಪ್ರಬುದ್ದಗೊಳ್ಳುವ ಭಾರತೀಯರಲ್ಲಿ ದೇಶಾಭಿಮಾನ ಬೆಳಸುವ ಉದ್ದೇಶದಿಂದ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಹರ್ ಘರ್ ತಿರಂಗಾ ಮೂಲಕ ಮಕ್ಕಳಲ್ಲಿ ರಾಷ್ಟ್ರಪ್ರೇಮವನ್ನು ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದ್ದರು ಎಂದು ಸಾಗರದ ವಿದ್ವಾನ್ ಗಜಾನನ ಭಟ್ ಹೇಳಿದರು.

ರಿಪ್ಪನ್‌ಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಚಿನ್ನೇಗೌಡ ಕ್ರೀಡಾಗಣದಲ್ಲಿ ಆಯೋಜಿಸಲಾಗಿದ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಚರಿತ್ರೆಯನ್ನು ತಿಳಿದುಕೊಂಡಾಗ ಮಾತ್ರ ರಾಷ್ಟ್ರಪ್ರೇಮ ಇನ್ನಷ್ಟು ಜಾಗೃತಗೊಳ್ಳುತ್ತದೆ. ಭಾರತೀಯರ ಪಾಲಿಗೆ ಅಮೃತ ಘಳಿಗೆಯಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮೀ, ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಪಿಡಿಓ ಜೆ.ಚಂದ್ರಶೇಖರ್, ಪಿಎಸ್‌ಐ ಶಿವಾನಂದಕೋಳಿ, ಉಪತಹಶೀಲ್ದಾರ್ ಹುಚ್ಚರಾಯಪ್ಪ, ಪ್ರಾಚಾರ್ಯ ಚಂದ್ರಶೇಖರ್, ಮಂಜುನಾಥ, ಕೆಸವಿನಮನೆ ರತ್ನಾಕರ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಈಶ್ವರ ಮಳಕೊಪ್ಪ, ಸಿಡಿಸಿ ಉಪಾಧ್ಯಕ್ಷ ದೇವೇಂದ್ರಪ್ಪಗೌಡ ನೆವಟೂರು, ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಆರ್.ಟಿ.ಗೋಪಾಲ್, ಎಂ.ಡಿ.ಇಂದ್ರಮ್ಮ, ಎನ್.ಸತೀಶ್, ವೈ.ಜೆ.ಕೃಷ್ನ, ನಾಗರತ್ನದೇವರಾಜ್, ಶ್ರೀನಿವಾಸ್ ಆಚಾರ್ ಇನ್ನಿತರ ಹಲವರು ಪಾಲ್ಗೊಂಡಿದ್ದರು.

ನಜ್ಮ ಸಂಗಡಿಗರು ಪ್ರಾರ್ಥಿಸಿದರು. ಗ್ರಾ.ಪಂ.ಸದಸ್ಯ ಆಸಿಫ್ ಸ್ವಾಗತಿಸಿದರು. ಕೆ.ಕೆ.ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here