ವಿದ್ಯಾರ್ಥಿಗಳು ಉತ್ತಮವಾದ ಜ್ಞಾನ ಸಂಪಾದನೆ ಮಾಡಿದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ‌ ; ಎನ್.ಆರ್. ದೇವಾನಂದ್

0
353

ಹೊಸನಗರ: ವಿದ್ಯಾರ್ಥಿಗಳು ಉತ್ತಮವಾದ ಜ್ಞಾನ ಸಂಪಾದನೆ ಮಾಡಿ ನಮ್ಮ ದೇಶದ ಅಭಿವೃದ್ಧಿಗೆ ಶ್ರಮಿಸಿ ದುಶ್ಚಟಗಳಿಂದ ದೂರ ಇರಬೇಕು ಆಗ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ಅಂಬೇಡ್ಕರ್ ನಿಗಮದ ನಿರ್ದೇಶಕ ಎನ್.ಆರ್ ದೇವಾನಂದ್‌ರವರು ಹೇಳಿದರು.

ಹೊಸನಗರ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸನಗರದ ಬಿ.ಸಿ ಟ್ರಸ್ಟ್‌ನವರು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಉದಯ್‌ಕುಮಾರ್ ಶೆಟ್ಟಿಯವರು ದುಶ್ಚಟಗಳು ಯಾವುದು? ಹೇಗೆ ಪ್ರಾರಂಭವಾಗುತ್ತದೆ ? ಮಕ್ಕಳು ಕೆಟ್ಟ ವಿಷಯಗಳಿಗೆ ಯಾವ ರೀತಿ ಸೆಳೆತಕ್ಕೆ ಒಳಗಾಗುತ್ತಾರೆ ? ದುಶ್ಚಟಗಳಿಂದ ದೂರವಿರುವ ಬಗ್ಗೆ ಹಾಗೂ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಆಲೋಚನೆ ಮತ್ತು ಉತ್ತಮ ವಿಷಯಗಳನ್ನು ತಿಳಿದುಕೊಂಡಾಗ ತಾನು ತನ್ನ ಸ್ವಾಸ್ಥ್ಯ ಕಾಪಾಡಿ ಆದರ್ಶ ವ್ಯಕ್ತಿಯಾಗಿ ಬಾಳಬಹುದು ಎಂಬ ಬಗ್ಗೆ ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಜಯಪ್ಪನವರು ವಹಿಸಿದ್ದರು.

ಹೊಸನಗರ ಶಾಖೆಯ ಯೋಜನಾಧಿಕಾರಿ ಬೇಬಿಯವರು ಈ ಸಂದರ್ಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಕೌಶಲ್ಯಗಳನ್ನು ಅಳವಡಿಸಿಕೊಂಡು ಶಿಸ್ತಿನ ಸಿಪಾಯಿಗಳಾಗಿ ಹೊರಹೊಮ್ಮಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ಕುಟುಂಬ ಹಾಗೂ ಸಮಾಜಕ್ಕೆ ಒಳ್ಳೆಯ ಹೆಸರನ್ನು ತಂದುಕೊಡುವಲ್ಲಿ ಶ್ರಮಿಸಬೇಕು ಶ್ರೀಧರ್ಮಸ್ತಳ ಗ್ರಾಮಾಬಿವೃದ್ಧಿ ಯೋಜನೆ ರೂಪಿಸುತ್ತಿರುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು ಇದರ ಯಶಸ್ವಿ ಅನುಷ್ಟಾನಕ್ಕೆ ವ್ಯಾಪಕ ಪ್ರಚಾರ ಮತ್ತು ಅನುಸರನಾ ಕಾರ್ಯ ರೂಢಿಸಿಕೊಂಡಿದೆ ವಿದ್ಯಾರ್ಥಿಗಳು ಕುಟುಂಬದ ಕಣ್ಮಣಿಗಳಾಗಿದ್ದು ಪೋಷಕರ ಅಭಿಲಾಷೆಯಂತೆ ಅವರು ವಿದ್ಯಾಭ್ಯಾಸದಲ್ಲಿ ತೊಡಗಿ ಪ್ರಗತಿ ಸಾಧಿಸಬೇಕು ವಿದ್ಯಾರ್ಥಿಗಳು ತಮ್ಮ ಆರೋಗ್ಯ ಪಾಲನೆಗೆ ಹಲವು ಮೂಲ ತಿಳುವಳಿಕೆಗಳನ್ನು ಗಳಿಸುವ ಅಗತ್ಯವಿದೆ ಮಧ್ಯವ್ಯಸನ, ಗುಟ್ಕಾ, ಧೂಮಪಾನಗಳಿಂದ ಯುವ ಜನತೆಯ ಜೀವನ ಹಾಳಾಗುತ್ತಿದೆ ಸಹವಾಸ ದೋಷ ಆಕಸ್ಮಿಕ ಆಕರ್ಷಣೆಗಳ ಕಾರಣ ದುಶ್ಚಟಕ್ಕೆ ಒಮ್ಮೆ ಆರಂಭವಾದರೆ ಬದುಕು ವಿನಾಶದ ಹಾದಿಯಲ್ಲಿ ಸಾಗುತ್ತದೆ ಇದರಿಂದ ವಯಕ್ತಿಕ ಜೀವನದ ಜೊತೆ-ಜೊತೆಗೆ ಸಮಾಜದ ಸ್ವಾಸ್ಥ್ಯ ಸಹ ಹಾಳಾಗುತ್ತದೆ ಎಂದು ವಿದ್ಯಾರ್ಥಿ ಜೀವನದ ದೆಸೆಯಿಂದಲೇ ಉತ್ತಮ ಕ್ರಿಯಾಶೀಲ ಹವ್ಯಾಸಗಳನ್ನು ರೂಢಿಸಿಕೊಂಡು ಉತ್ತಮ ಸಮಾಜ ಕಟ್ಟುವ ಕಾರ್ಯಕ್ರಮಕ್ಕೆ ದೃಢ ಸಂಕಲ್ಪ ಕೈಗೊಳ್ಳಬೇಕೆಂದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ಉಪನ್ಯಾಸಕಿ ಶ್ರೀಮತಿ ಸೌಮ್ಯ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಜಯಲಕ್ಷ್ಮಿ, ಮೇಲ್ವಿಚಾರಕ ಸುಭಾಷ್, ಸೇವಾಪ್ರತಿನಿಧಿ ಹಾಗೂ ಸುಮಾರು 100ಕ್ಕಿಂತಲ್ಲೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here