23.2 C
Shimoga
Sunday, November 27, 2022

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಸೂಚನೆ


ಹೊಸನಗರ: ತಾಲ್ಲೂಕಿನಲ್ಲಿ ವ್ಯಾಸಂಗ ಮಾಡುತ್ತಿರುವ 1ರಿಂದ10ನೇತರಗತಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 2022-23ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವರ್ಗಗಳ ಪ್ರವರ್ಗ 2ಎ, 3ಎ ಮತ್ತು 3ಬಿ ಹಾಗೂ ಅಲೆಮಾರಿ/ಅರೆಅಲೆಮಾರಿ ಪ್ರವರ್ಗ-1ರವರಿಗೆ ಆನ್‌ಲೈನ್‌ನಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಈ ವಿದ್ಯಾರ್ಥಿ ವೇತನ ಪಡೆಯಲು ಶಾಲೆಯ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪೋಷಕರ ಪಾತ್ರ ಹಿರಿದಾಗಿರುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಂಜಪ್ಪನವರು ಹೇಳಿದರು.


ಹೊಸನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಸಿ.ಆರ್.ಪಿ, ಬಿ.ಆರ್.ಸಿ ಮತ್ತು ಬಿ.ಆರ್.ಪಿ ಇವರಗಳ ಸಮ್ಮುಖದಲ್ಲಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಮಂಜಪ್ಪನವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು ಈ ಸಭೆಯಲ್ಲಿ ಮಾತನಾಡಿದರು.


1ರಿಂದ 10ನೇ ತರಗತಿಯ 2ಎ,3ಎ, 3ಬಿ ಹಾಗೂ ಅಲೆಮಾರಿ ಜನಾಂಗದವರು ಓದುತ್ತಿರುವ ಶಾಲೆಗಳ ಮೂಲಕ ಅಥವಾ ಟೈಪಿಂಗ್ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಸಬಹುದಾಗಿದ್ದು ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿರುತ್ತದೆ. ಅರ್ಜಿಯನ್ನು ಓದುತ್ತಿರುವ ಶಾಲೆಗಳಿಂದಲೇ ಅರ್ಜಿ ಸಲ್ಲಿಸದರೆ ಸೂಕ್ತವಾಗಿದ್ದು ಹೊಸನಗರ ತಾಲ್ಲೂಕಿನಲ್ಲಿರುವ ಎಲ್ಲಾ ಸರ್ಕಾರಿ ಶಾಲೆಯ ಶಿಕ್ಷಕರು ಹಾಗೂ ಅನುದಾನಿತ ಶಾಲೆಯಲ್ಲಿಯು ಅರ್ಜಿ ಸಲ್ಲಿಸಬಹುದಾಗಿದ್ದು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಂಬಂಧಪಟ್ಟವರು ಹೆಚ್ಚೆಚ್ಚು ಓದುತ್ತಿರುವ ಶಾಲೆಗಳಿಂದಲೇ ಅರ್ಜಿ ಸಲ್ಲಿಸಲು ಸಹಕಾರ ನೀಡಬೇಕು ಮತ್ತು ವಿದ್ಯಾರ್ಥಿಗಳ ಪೋಷಕರು ವಿದ್ಯಾರ್ಥಿ ವೇತನಕ್ಕೆ ಬೇಕಾಗುವಂಥಹ ಸೂಕ್ತ ದಾಖಲೆಗಳನ್ನು ಶಾಲೆಗಳಿಗೆ ವಿದ್ಯಾರ್ಥಿಗಳ ಮೂಲಕ ಕಳುಹಿಸಬೇಕು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ/ಅಂಚೆ ಕಛೇರಿಯಲ್ಲಿ ಐಪಿಪಿಬಿ ಖಾತೆಗೆ ಆಧಾರ್ ಜೋಡಣೆ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿಕೊಂಡು https//ssp.karnataka.gom.in ಗೆ ಅರ್ಜಿಯನ್ನು ಸಲ್ಲಿಸಬಹುದು.

ಈ ವಿದ್ಯಾರ್ಥಿ ವೇತನದ ಸೌಲಭ್ಯ 1ರಿಂದ10ನೇ ತರಗತಿಯವರೆಗೆ ಮಾತ್ರ ಲಭ್ಯವಿದೆ ಎಂದು ಈ ಸೌಲಭ್ಯ ಎಲ್ಲ ಸರ್ಕಾರಿ ಶಾಲೆಗಳ ಹಾಗೂ ಅನುದಾನಿಂತ ಶಾಲೆಗಳಿಗೆ ಬಿ.ಆರ್.ಸಿ, ಸಿಆರ್‌ಪಿಯಾದ ತಾವು ಈ ವಿದ್ಯಾರ್ಥಿ ವೇತನದ ಸೌಲಭ್ಯವನ್ನು ತಿಳಿಸುವುದರ ಜೊತೆಗೆ ಮೇಲೆ ತಿಳಿಸಿರುವ ವಿದ್ಯಾರ್ಥಿಗಳಿಗೆ ಹೊರ ಭಾಗದಲ್ಲಿ ಅರ್ಜಿ ಸಲ್ಲಿಸದೆ ಶಾಲೆಯಲ್ಲಿಯೇ ಅರ್ಜಿ ಸಲ್ಲಿಸಲು ತಿಳಿಸಬೇಕೆಂದು ಈ ಸಂದರ್ಭದಲ್ಲಿ ಸೂಚಿಸಿದರು.


ಈ ಸಭೆಯಲ್ಲಿ ಇಸಿಓ ರಂಗನಾಥ್ ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ಕು|| ಕಲಾವತಿ ಎನ್.ಆರ್‌ ರವರು ಮಾರ್ಗದರ್ಶನ ನೀಡಿದ್ದು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸಿ.ಆರ್‌ಪಿ, ಬಿಆರ್‌ಸಿ, ಬಿ.ಆರ್‌ಪಿ ಇನ್ನೂ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!