ಶಿವಮೊಗ್ಗ: ಶಿವಮೊಗ್ಗ-ಶಂಕರಘಟ್ಟ ರಸ್ತೆಯ ಭದ್ರಾವತಿ ಜಂಕ್ಷನ್ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.
ಮನೋಜ್ (22) ಹಾಗೂ ಉತ್ತಮ್ (22) ಮೃತ ದುರ್ದೈವಿಗಳಾಗಿದ್ದು, ಇವರಿಬ್ಬರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂಕಾಂ ಹಾಗೂ ಎಂಸಿಎ ವ್ಯಾಸಂಗ ಮಾಡುತ್ತಿದ್ದರು. ಇಂದು ಭದ್ರಾವತಿಗೆ ತೆರಳುತ್ತಿದ್ದಾಗ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.