ತರೀಕೆರೆ: ಭದ್ರಾ ಅಭಯಾರಣ್ಯದ ತಣಿಗೆಬೈಲು ವ್ಯಾಪ್ತಿಯ ಪರಮೇಶ್ ಜೋಳದ ಜಮೀನಿನಲ್ಲಿ ವಿದ್ಯುತ್ ಹರಿದು ಆನೆ ಸಾವನ್ನಪ್ಪಿದ ಘಟನೆ ನಡೆದಿದೆ.
ಬೆಳೆ ರಕ್ಷಿಸಿಕೊಳ್ಳಲು ಹಾಕಿದ್ದ ಅಕ್ರಮ ವಿದ್ಯುತ್ ತಂತಿ ತಗುಲಿ ಆನೆ ಸ್ಥಳದಲ್ಲೇ ಮೃತ ಪಟ್ಟಿದೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ನವೀನ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆನೆಯ ಮರಣೋತ್ತರ ಪರೀಕ್ಷೆಗೆ ಸಿದ್ಧತೆ ನಡೆಸಿದ್ದು, ವನ್ಯಜೀವಿ ಪರಿಪಾಲಕ ವೀರೇಶ್, ಭದ್ರಾ ವನ್ಯಜೀವಿ ಪಶವೈದ್ಯಾಧಿಕಾರಿ ಯಶಸ್ ಸ್ಥಳಕ್ಕೆ ತೆರಳಿದ್ದಾರೆ.
ಈ ಭಾಗದಲ್ಲಿ ಇದು ನಾಲ್ಕನೇ ಸಲಗ ಅಕ್ರಮ ವಿದ್ಯುತ್ ಹರಿದು ಸಾವನ್ನಪ್ಪಿರುವುದು. ಮಾನವ ಮತ್ತು ಆನೆ ಸಂಘರ್ಷ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.
ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ತಿಳಿಸಿದ್ದಾರೆ.