ವಿದ್ಯುತ್ ಶಾಕ್ ; ಮೂರು ವರ್ಷದ ಬಾಲಕಿ ಸ್ಥಳದಲ್ಲೇ ಸಾವು !

0
463

ಭದ್ರಾವತಿ : ಮನೆ ಬಳಿ ಹಾಕಿರುವ ತಂತಿ ಬೇಲಿ ಮುಟ್ಟಿ ವಿದ್ಯುತ್ ಶಾಕ್ ಹೊಡೆದು ಮೂರು ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ತಾಲೂಕಿನ ಹಿರಿಯೂರು ಗ್ರಾಮದಲ್ಲಿ ನಡೆದಿದೆ.

ಇಂಚರ ಮೃತ ಬಾಲಕಿ. ತಂತಿ ಬೇಲಿ ಮೇಲೆ ಕೇಬಲ್ ತುಂಡಾಗಿ ಬಿದ್ದಿತ್ತು. ಈ ಕೇಬಲ್ನಲ್ಲಿ ವಿದ್ಯುತ್ ಹರಿದ ಹಿನ್ನಲೆಯಲ್ಲಿ ಅವಘಡ ಸಂಭವಿಸಿದೆ. ಮನೆಗೆ ಕೇಬಲ್ ಹಾಕಿದ ಆಪರೇಟರ್ ವಿರುದ್ದ ಮೃತ ಕುಟುಂಬಸ್ಥರ ಆಕ್ರೋಶ ವ್ಯಕ್ತ ಪಡಿಸಿದ್ದು, ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here