ವಿದ್ಯುತ್ ಸ್ಪರ್ಶಕ್ಕೆ ತಂದೆ ಬಲಿಯಾಗಿದ್ದ ಹಿನ್ನಲೆಯಲ್ಲಿ ಅನುಕಂಪದ ಆಧಾರದ ಮೇಲೆ ಅದೇ ಕೆಲಸ ಪಡೆದಿದ್ದ ಮಗನೂ ವಿದ್ಯುತ್ ಶಾಕ್’ಗೆ ಬಲಿ !!

0
532

ಮೂಡಿಗೆರೆ: ಕರ್ತವ್ಯದಲ್ಲಿರುವಾಗಲೇ ವಿದ್ಯುತ್ ಸ್ಪರ್ಶಕ್ಕೆ ತಂದೆ ಬಲಿಯಾಗಿದ್ದ ಹಿನ್ನಲೆಯಲ್ಲಿ ಅನುಕಂಪದ ಆಧಾರದ ಮೇಲೆ ಅದೇ ಕೆಲಸ ಪಡೆದಿದ್ದ ಮಗನೂ ಸಹ ಕರ್ತವ್ಯದಲ್ಲಿರುವಾಗಲೇ ಮೃತಪಟ್ಟಿರುವ ದಾರುಣ ಘಟನೆ ಮೂಡಿಗೆರೆಯಲ್ಲಿ ನಡೆದಿದೆ.

ಘಟನೆಯ ವಿವರ:

23 ವರ್ಷಗಳ ಹಿಂದೆ ಶಫೀಕ್ ಎಂಬವರ ತಂದೆ ಶಿವಮೊಗ್ಗದಲ್ಲಿ ಮೆಸ್ಕಾಂ ಲೈನ್ ಮ್ಯಾನ್ ಆಗಿ ಕೆಲಸ ಮಾಡುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶವಾದ ಕಾರಣ ಮೃತಪಟ್ಟಿದ್ದರು. ಹೀಗಾಗಿ ಮರುವರ್ಷವೇ ರಫೀಕ್ ಅವರಿಗೆ ಅನುಕಂಪದ ಆಧಾರದ ಮೇಲೆ ಲೈನ್ ಮ್ಯಾನ್ ಕೆಲಸ ನೀಡಲಾಗಿತ್ತು.

22 ವರ್ಷಗಳ ಕಾಲ ಲೈನ್ ಮ್ಯಾನ್ ಆಗಿ ಸೇವೆ ಸಲ್ಲಿಸಿದ್ದ ಶಫೀಕ್ ನಾಲ್ಕು ದಿನಗಳ ಹಿಂದೆ ಮೂಡಿಗೆರೆ ತಾಲೂಕಿನ ಕುನ್ನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಕಂಬವೇರಿ ಕರ್ತವ್ಯ ನಿರ್ವಹಿಸುವಾಗ ವಿದ್ಯುತ್ ಸ್ಪರ್ಶಿಸಿ ಕಂಬದಿಂದ ಬಿದ್ದಿದ್ದರು. ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.

ಶಫೀಕ್ ಅವರ ಚಿಕ್ಕಪ್ಪ ಸಹ ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುವಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ತಂದೆ – ಚಿಕ್ಕಪ್ಪನ ಬಳಿಕ ಮಗ ಸಹ ವಿದ್ಯುತ್ ಸ್ಪರ್ಶಕ್ಕೆ ಬಲಿಯಾದಂತಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here