ಹೊಸನಗರ: ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ವಿದ್ಯೆ ಕಲಿಯುವ ಗುಣ ಕಲಿಸುವ ಗುರುಗಳ ಬಗ್ಗೆ ಭಕ್ತಿ ಮತ್ತು ವಿನಯತೆ ಇದ್ದಲ್ಲಿ ಪ್ರತಿಯೊಬ್ಬರು ಯಶಸ್ಸು ಕಾಣಲು ಸಾಧ್ಯ ಎಂದು ಮೂಲಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿಯವರು ಹೇಳಿದರು.

ತಾಲ್ಲೂಕಿನ ಮೂಲಗದ್ದೆ ಮಠದ ಆವರಣದಲ್ಲಿ ಹೊಸನಗರ ತಾಲ್ಲೂಕಿಗೆ ಕೀರ್ತಿಪಾತಕೆ ಹಾರಿಸಿದ ಹೊಸನಗರ ತಾಲ್ಲೂಕು ಆಡಗೋಡಿಯ ಯುವಕ ಜಡ್ಜ್ ಪರೀಕ್ಷೆಯಲ್ಲಿ 7ನೇ ರ್ಯಾಂಕ್ ಪಡೆದ ಆದಿತ್ಯ ಕುಮಾರ್ರವರು ಸಿವಿಲ್ ಜಡ್ಜ್ ಆಗಿ ಹಾಗೂ ಹೊಸನಗರ ತಾಲ್ಲೂಕಿನ ಕಾಳಿಕಾಪುರದ ಶೃತಿಯವರು ಸಬ್ ಇನ್ಸ್ಪೇಕ್ಟರ್ ಆಯ್ಕೆಯಾಗಿದ್ದು ಇವರನ್ನು ಹೊಸನಗರದ ಜೆಸಿಐ ಸಂಸ್ಥೆಯ ವತಿಯಿಂದ ಅದ್ದೂರಿಯಾಗಿ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದ್ದು ಈ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
‘ಬೆಳೆಯುವ ಪೈರು ಮಳಿಕೆಯಲ್ಲಯೇ’ ಎಂಬ ಗಾದೆ ಮಾತಿನಂತೆ ಮಕ್ಕಳ ಭವಿಷ್ಯವನ್ನು ಸಣ್ಣ ವಯಸ್ಸಿನಲ್ಲಯೇ ಹೇಳಬಹುದು ಎಂದು ಈ ಸಮಾರಂಭದ ಅಧ್ಯಕ್ಷತೆ ವಹಿಸಿದ ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಮೌಳಿಗೌಡರವರು ಹೇಳಿದರು.

ಇಂಥವರನ್ನು ಸನ್ಮಾನಿಸುತ್ತಿರುವುದರಿಂದ ಬೇರೆಯಾವರಿಗೆ ಸ್ವೂರ್ತಿಯಾಗಲಿದ್ದು ಇನ್ನೂ ಹೆಚ್ಚು ಹೆಚ್ಚು ಕೀರ್ತಿಪಾತಕೆಯನ್ನು ನಮ್ಮ ತಾಲ್ಲೂಕಿಗೆ ತರಲಿ ಪ್ರತಿಯೊಬ್ಬ ಮನುಷ್ಯರು ಬೆಳೆಯಬೇಕಾದರೆ ಪೋಷಕ ವರ್ಗ ಹಾಗೂ ಕಲಿಸುವ ಶಾಲೆಯ ಶಿಕ್ಷಕ ವೃಂದ ಮಕ್ಕಳ ಭವಿಷ್ಯವನ್ನು ರೂಪಿಸುವವರು ಆಗಿರುತ್ತಾರೆ ತಮ್ಮ ಮಕ್ಕಳು ತಪ್ಪು ಮಾಡಿದಾಗ ತಿದ್ದುವ ಕೆಲಸ ಪೋಷಕ ವರ್ಗ ಹಾಗೂ ಶಿಕ್ಷಕ ವೃಂದದಿಂದ ಆದರೆ ಆ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಉತ್ತಮ ರೀತಿಯಲ್ಲಿ ಈ ದೇಶದ ಈ ರಾಜ್ಯದ ಕೊಡಿಗೆಯಾಗಿ ಸೇವೆ ಸಲ್ಲಿಸುತ್ತಾರೆ ಉತ್ತಮ ಹುದ್ದೆ ಸಿಕ್ಕಿದೆ ಎಂದು ದುರಂಕಾರ ಪಟ್ಟುಕೊಳ್ಳದೇ ಜನ ಸೇವೆಗಾಗಿ ತಮ್ಮ ಸೇವೆಯನ್ನು ಮುಡಿಪಗಿಟ್ಟುಕೊಂಡು ಉತ್ತಮ ಸೇವೆ ಮಾಡಲಿ ಎಂದು ಹಾರೈಸಿದರು.
