ವಿಧಾನ ಪರಿಷತ್ ಚುನಾವಣೆ : ಕಂಟ್ರೋಲ್ ರೂಂ ಸ್ಥಾಪನೆ

0
282

ಶಿವಮೊಗ್ಗ: ಕರ್ನಾಟಕ ವಿಧಾನ ಪರಿಷತ್ತು ಚುನಾವಣೆಯ ನೀತಿ ಸಂಹಿತೆಯು ದಿನಾಂಕ: 09-11-2021 ರಿಂದ ದಿನಾಂಕ: 16-12-2021 ರವರೆಗೆ ಜಾರಿಯಲ್ಲಿದ್ದು ಚುನಾವಣೆಗೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ವತಿಯಿಂದ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಶಿವಮೊಗ್ಗ ಜಿಲ್ಲಾದ್ಯಂತ ಫ್ಲೈಯಿಂಗ್ ಸ್ಕ್ವಾಡ್‍ಗಳನ್ನು ರಚಿಸಿ, ನಿಯಂತ್ರಣಾ ಕೊಠಡಿಗಳನ್ನು ತೆರೆಯಲಾಗಿರುತ್ತದೆ.

ಈ ಸಂದರ್ಭದಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶಕ್ಕಾಗಿ ಅಬಕಾರಿ ಅಕ್ರಮಗಳ ಬಗ್ಗೆ ಸಾರ್ವಜನಿಕರು ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ. ಅಬಕಾರಿ ಉಪ ಆಯುಕ್ತರ ಕಛೇರಿ, ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ರವರ ಕಛೇರಿಯಲ್ಲಿ ಜಿಲ್ಲಾ ಕಂಟ್ರೋಲ್ ರೂಂ [ಜಿಲ್ಲಾ ನಿಯಂತ್ರಣಾ ಕೊಠಡಿ] ಸ್ಥಾಪಿಸಲಾಗಿದ್ದು, ಕಂಟ್ರೋಲ್ ರೂಂ ನ ದೂರವಾಣಿ ಸಂಖ್ಯೆ: 08182-222784 ಆಗಿರುತ್ತದೆ.

ವಲಯ ಅಧಿಕಾರಿಗಳ ಸಂಖ್ಯೆ :

ಶಿವಮೊಗ್ಗ ಉಪವಿಭಾಗ ಸೈಯದ್ ತಫ್‍ಜಿಲ್ ಉಲ್ಲಾ ದೂ ಸಂ: 08182-295933, 9449597129. ಸಾಗರ ಉಪವಿಭಾಗ ಡಿ.ಲೀಲಾವತಿ 08183-227053, 944+597128, ತೀರ್ಥಹಳ್ಳಿ ಉಪವಿಭಾಗ ಸಂತೋಷ್ ಕುಮಾರ್ ಎಲ್.ಟಿ 08182-220077, 9449597127, ಶಿವಮೊಗ್ಗ ವಲಯ-1 ಶೀಲಾ ಎಂ ಧಾರಜ್‍ಕರ್ ದೂ.ಸಂ: 08182-229161, ಶಿವಮೊಗ್ಗ ವಲಯ-2 ಭೂಪತಿ ದೂ.ಸಂ: 08182-229161, ಭದ್ರಾವತಿ ವಲಯ ಸುನೀಲ್ ಕಲ್ಲೂರ ದೂ.ಸಂ: 08282-262849, ಶಿಕಾರಿಪುರ ವಲಯ ರಮೇಶ್ ಕೆ.ಹೆಚ್ 08187-223602, ಸಾಗರ ವಲಯ ಸಂದೀಪ್ ಎಲ್.ಸಿ 08183-220354, ಸೊರಬ ವಲಯ ಶ್ರೀನಾಥ್ ಆರ್ 08184-272368, ತೀರ್ಥಹಳ್ಳಿ ವಲಯ ಅಮಿತ್ ಕುಮಾರ್ ಎಸ್ ಎಂ 08181-227932, ಹೊಸನಗರ ವಲಯ ಸೈಯದ್ ತಫ್‍ಜಿಲ್ ಉಲ್ಲ 08185-221094 ನ್ನು ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here