ಹೊಸನಗರ : ಕಾಲೇಜು ಜೀವನ ವಿದ್ಯಾರ್ಥಿಗಳಿಗೆ ಒಂದು ಮಹತ್ವದ ಕಾಲಘಟ್ಟ ಈ ಅವಧಿಯಲ್ಲಿ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕು ಶಿಕ್ಷಕರಿಗೆ ಅಗೌರವ ಸಲ್ಲಿಸುವುದು ಹೊಡೆದಾಟ ಬಡಿದಾಟ ಅಮಲು ಪದಾರ್ಥ ಮದ್ಯಪಾನ ಧೂಮಪಾನ ಸೇವನೆ ಸಲ್ಲದು ಎಂದು ಹೊಸನಗರ ಪಿಎಸ್ಐ ಎಂ.ಎನ್ ರಾಜೇಂದ್ರ ನಾಯಕ್ ಕರೆ ನೀಡಿದರು.
ಅವರು ಇಂದು ಪಟ್ಟಣ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಾಂಸ್ಕೃತಿಕ ವೇದಿಕೆ ರಾಷ್ಟ್ರೀಯ ಸೇವಾ ಯೋಜನೆ ರೋವರ್ಸ್ ಮತ್ತು ರೇಂಜರ್ಸ್ ಯುವ ರೆಡ್ ಕ್ರಾಸ್ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಕಾಲೇಜು ಚಟುವಟಿಕೆಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಶಂಸನಾ ವರದಿಗಳು ಬರಬೇಕು ಕಾಲೇಜಿನಲ್ಲಿ ನಡೆಯುವ ಅಹಿತಕರ ಘಟನೆಗಳ ಬಗ್ಗೆ ವರದಿಗಳು ಬಾರದಂತೆ ಎಚ್ಚರಿಕೆ ವಹಿಸಬೇಕೆಂದು ಉಡುಗೆ-ತೊಡುಗೆ ಚಟುವಟಿಕೆಗಳಲ್ಲಿ ನಮ್ಮ ಜನಪದ ತೊಡಗಿಸಿಕೊಳ್ಳಬೇಕೆಂದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಜಯಪ್ಪ ಸಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭವನ್ನು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎನ್. ಶ್ರೀಧರ ಉಡುಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೆ ಆತಂಕ ಉಂಟಾಗಿತ್ತು ಇದೀಗ ಕಾಲೇಜಿನಲ್ಲಿ ಅಧ್ಯಯನ ನೀಡುವ ಉತ್ತಮ ತಂಡವಿದೆ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ರಾಜ್ಯಪ್ರಶಸ್ತಿ ವಿಜೇತ ಜಾನಪದ ಕಲಾವಿದ ಮಲೆನಾಡಿನ ಪ್ರತಿಭೆ ಆಂಜನೇಯ ಜೋಗಿ, ಕಾಲೇಜು ಬೋಧನಾ ವಿಭಾಗದ ಡಿ. ಮಂಜುನಾಥ್, ಡಾ. ಬಿ.ಜಿ ಅಕ್ಷತಾ, ಡಾ. ಕೆ.ಸಿ ಸೌಮ್ಯ, ಹೆಚ್. ದೊಡ್ಡಯ್ಯ, ಪ್ರತಿಮಾ, ಡಾ. ಎಂ.ಟಿ ಬಸವರಾಜಪ್ಪ, ಪ್ರೊ. ಅಂಜನ್ ಕುಮಾರ್, ದಿವಾಕರ್, ಸಾಂಸ್ಕೃತಿಕ ಚಟುವಟಿಕೆಗಳ ಉಪಾಧ್ಯಕ್ಷ ಕೆ. ಗೌತಮ್ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ಅಕ್ಷತಾ ಸ್ವಾಗತಿಸಿದರು. ಕು|| ಅಶ್ವಿತಾ, ಅನನ್ಯ ಕಾರ್ಯಕ್ರಮ ನಿರೂಪಿಸಿದರು. ಹೆಚ್. ದೊಡ್ಡಯ್ಯ ವಂದಿಸಿದರು.
ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು.