ವಿವಾದಿತ ಕೃಷಿ ಮಸೂದೆ ಕಾಯ್ದೆ ವಾಪಾಸ್: ಹೊಸನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

0
440

ಹೊಸನಗರ: ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಲು ಹೊರಟಿದ್ದ ಕೃಷಿ ಕಾಯ್ದೆಯನ್ನು ಪರಿಶೀಲನೆ ನಡೆಸಿ ಅದನ್ನು ವಾಪಸ್ ಪಡೆದಿರುವುದನ್ನು ಸ್ವಾಗತಿಸಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ವಿವಿಧ ಭಾಗಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವುದರ ಮೂಲಕ ಸಂತಸ ವ್ಯಕ್ತಪಡಿಸಲಾಯಿತು.

ಮಾಧ್ಯಮದೊಂದಿಗೆ ಮಾತನಾಡಿದ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ ನಾಗರಾಜ್, ಕೇಂದ್ರದ ಬಿಜೆಪಿ ಸರ್ಕಾರವು ಏಕಪಕ್ಷೀಯವಾಗಿ ರೈತ ವಿರೋಧಿ ನೀತಿಯನ್ನು ಜಾರಿಗೆ ತಂದು ರೈತರಿಗೆ ಕೃಷಿ ಕುಟುಂಬಸ್ಥರಿಗೆ ಮರಣ ಶಾಸನ ಬರೆದಿದ್ದರು. ಅವರು ಜಾರಿಗೆ ತಂದ ಕೃಷಿ ಕಾಯ್ದೆಯಿಂದ ದೇಶದಾದ್ಯಂತ ರೈತರಿಂದ ಹಿಡಿದು ಕಾಂಗ್ರೆಸ್ ಪಕ್ಷ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಬೀದಿಗಿಳಿದು ಹೋರಾಟ ನಡೆಸಲಾಯಿತು. ಇಂದು ಮೂರು ಮಸೂದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ ಇದು ಕಾಂಗ್ರೆಸ್ ಪಕ್ಷದ ರೈತರ ಹಾಗೂ ವಿವಿಧ ಸಂಘಟನೆಗಳ ಹೋರಾಟದ ಫಲವಾಗಿದೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಧಿಕಾರವಹಿಸಿಕೊಂಡಾಗಿನಿಂದ ಇವರು ಜಾರಿಗೆ ತಂದ ಕರಾಳ ಮಸೂದೆಯಿಂದ ರೈತರಿಗೆ ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಕಡಿಮೆಯಾಗಿ, ದೇಶದ ಅನೇಕ ರೈತರು ತಮ್ಮ ತಮ್ಮ ಜಮೀನಿನಲ್ಲಿ ಅವರ ಜೀವನಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ಮಾತ್ರ ಬೆಳೆಯಲು ಮುಂದಾಗಿದ್ದರು. ದೇಶದ ಅನೇಕ ರೈತರು ದೆಹಲಿಯ ಸಮೀಪ ಕಳೆದ ಹಲವು ದಿನಗಳಿಂದ ನಿರಂತರವಾಗಿ ಚಳಿ ಮಳೆ ಲೆಕ್ಕಿಸದೆ ಹೋರಾಟ ನಡೆಸಿದರಲ್ಲದೆ ಆರುನೂಕ್ಕು ಅಧಿಕ ರೈತರು ಮರಣ ಹೊಂದಿದರು. ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಚಿವರ ಪುತ್ರ ಹೋರಾಟ ನಿರತ ರೈತರೊಬ್ಬರ ಮೇಲೆ ತಮ್ಮ ವಾಹನವನ್ನು ಹರಿಸುವ ಮೂಲಕ ರೈತನೊಬ್ಬನು ಸ್ಥಳದಲ್ಲೇ ಮೃತಪಟ್ಟಿದ್ದರು ಇಂತಹಾ ದೌರ್ಜನ್ಯ ಪ್ರಕರಣಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು, ದೇಶದ ರೈತರ ಹಾಗೂ ಜನತೆಯ ಹಿತಕಾಪಾಡಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಎರಗಿ ಉಮೇಶ್, ಅಶ್ವಿನಿ ಕುಮಾರ್, ಎಂ.ಪಿ ಸುರೇಶ್, ಸದಾಶಿವ ಶ್ರೇಷ್ಠಿ, ಸಣ್ಣಕ್ಕಿ ಮಂಜು, ಜಯನಗರ ಗುರು, ಮಂಜುನಾಥ್ ಡಿ.ಆರ್ ಮತ್ತಿತರರು ಇದ್ದರು.

ವರದಿ: ಪುಷ್ಪಾವತಿ
ಜಾಹಿರಾತು

LEAVE A REPLY

Please enter your comment!
Please enter your name here