23.2 C
Shimoga
Sunday, November 27, 2022

ವಿವಿಧ ಕಾಮಗಾರಿಗಳಿಗೆ ಸಂಸದ ಬಿವೈಆರ್ ಶಂಕುಸ್ಥಾಪನೆ

ಶಿಕಾರಿಪುರ : ಅಮೃತ್ 2 ಯೋಜನೆ ಅಡಿ ಕುಡಿಯುವ ನೀರಿಗಾಗಿ ಶಿವಮೊಗ್ಗ ಜಿಲ್ಲೆಯ ಪುರಸಭೆ ಪಟ್ಟಣ ಪಂಚಾಯಿತಿಗಳಿಗೆ 179 ಕೋಟಿ ರೂ. ಅನುದಾನವನ್ನು  ಉದ್ಯಾನವನ ಅಭಿವೃದ್ಧಿಗೆ ರೂ. 22 ಕೋಟಿಗಳನ್ನು ಹಾಗೂ ಕೆರೆಗಳ ಅಭಿವೃದ್ಧಿಗಾಗಿ 58 ರೂ. ಕೋಟಿ ಹಣವನ್ನು ಕೇಂದ್ರ, ರಾಜ್ಯ ಸರ್ಕಾರಗಳು ಬಿಡುಗಡೆ ಮಾಡಿವೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.

ಅವರು ಶುಕ್ರವಾರ ನಗರದಲ್ಲಿ ಕಾನೂರು ಆಶ್ರಯ ಬಡಾವಣೆ ಮತ್ತು ಹಳೆಯೂರು ಆಶ್ರಯ ಬಡಾವಣೆಯಲ್ಲಿ ಬಾಕಿ ಉಳಿದ ರಸ್ತೆಗಳಿಗೆ ಸಿ.ಸಿ ರಸ್ತೆ ಮತ್ತು ಸಿ.ಸಿ ಚರಂಡಿ ನಿರ್ಮಾಣ
ಹಾಗೂ  ಹಳಿಯೂರು ಆಶ್ರಯ ಬಡಾವಣೆಯಲ್ಲಿನ ಉಳಿಕೆ ರಸ್ತೆಗಳಿಗೆ ಸಿಸಿ ರಸ್ತೆ ಮತ್ತು ಸಿಸಿ ಚರಂಡಿ ನಿರ್ಮಾಣ ಮತ್ತು ಹೊಸಕೇರಿಯಿಂದ ಖಾಸಗಿ ಬಸ್ ನಿಲ್ದಾಣದವರೆಗೆ ಚರಂಡಿ ನಿರ್ಮಾಣ ಮತ್ತು ಎಸ್.ಎಸ್ ರಸ್ತೆಯಿಂದ ಐ.ಟಿ.ಐ ಕಾಲೇಜ್ ಗೇಟ್ ವರೆಗೆ ಸಿ.ಸಿ ರಸ್ತೆ ನಿರ್ಮಾಣ ಹಾಗೂ ವಿನಾಯಕನಗರ ಮುಖ್ಯ ರಸ್ತೆ ಮತ್ತು ಅಡ್ಡ ರಸ್ತೆಗಳ ಅಭಿವೃದ್ಧಿ ಮತ್ತು ಖಾಸಗಿ ಬಸ್‌ ನಿಲ್ದಾಣದಿಂದ ಮಾಸೂರು ವೃತ್ತದವರೆಗೆ ಎರಡೂ ಬದಿ ಚರಂಡಿ ನಿರ್ಮಾಣ  ಮತ್ತು ಇಂಟರ್ ಲಾಕ್ ವ್ಯವಸ್ಥೆ ಹಾಗೂ ಶಾಂತಿನಗರ ಛಾನಲ್ ಕೆಳಭಾಗದ ರಸ್ತೆಗಳ ಅಭಿವೃದ್ಧಿ ಮತ್ತು ಪುರಸಭಾ ಕಛೇರಿ ಆವರಣದಲ್ಲಿ ರಸ್ತೆ ಡಾಂಬರೀಕರಣ ಮತ್ತು  ಪೌರವಿಹಾರ ಲೇಔಟ್ ನಿಂದ ಡಿಗ್ರಿ ಕಾಲೇಜ್ ವರೆಗೆ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ ವಾರ್ಡ ನಂ 16 ರಲ್ಲಿನ ತಾಲ್ಲೂಕು ಆಫೀಸ್ ಹಿಂಭಾಗ ಮುಖ್ಯ ರಸ್ತೆ ಮತ್ತು ಅಡ್ಡ ರಸ್ತೆಗಳಿಗೆ ಸಿಸಿ ರಸ್ತೆ ನಿರ್ಮಾಣ ಸೇರಿ ಒಟ್ಟು 5 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕುಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.

ಬಿಎಸ್ ಯಡಿಯೂರಪ್ಪ ಪುರಸಭೆಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ  ಸಿಬ್ಬಂದಿಗಳಿಗೆ ವೇತನ ನೀಡಲು ಹಣವಿಲ್ಲದೆ  ಜೈನ ಸಮಾಜದ ಮುಖಂಡರುಗಳಲ್ಲಿ ಸಾಲ ಪಡೆದು ವೇತನ ನೀಡಿದ ಉದಾಹರಣೆಗಳಿವೆ. ಇದನ್ನು ವನಗಂಡಿದ್ದ ಯಡಿಯೂರಪ್ಪನವರು ತಾವು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ,ಪಟ್ಟಣ ಪಂಚಾಯಿತಿಗಳಿಗೆ ಶಾಶ್ವತವಾಗಿ ಅನುದಾನವನ್ನು ಸರ್ಕಾರದಿಂದಲೇ ಬಿಡುಗಡೆಗೊಳಿಸಿದರು   ಇದರಿಂದಾಗಿ ಸ್ಥಳೀಯ ಸಂಸ್ಥೆಗಳ ಮೇಲಿನ ಆರ್ಥಿಕ ಹೊರೆ  ಕಡಿಮೆಯಾಗಿ ಪ್ರಗತಿಪತದತ್ತ ಸಾಗಲು ಅನುಕೂಲವಾಯಿತು ಎಂದರು.


ಕಾರ್ಯಕ್ರಮದಲ್ಲಿ ಮಲೆನಾಡು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ ಎಸ್ ಗುರುಮೂರ್ತಿ ಅವರು, ಪುರಸಭೆ ಅಧ್ಯಕ್ಷರಾದ ರೇಖಾ ಭಾಯಿ ಮಂಜುನಾಥ್ ಸಿಂಗ್, ಮುಖಂಡರಾದ ಭದ್ರಾಪುರ ಹಾಲಪ್ಪ, ಮೋಹನ್, ವಸಂತ್ ಗೌಡ, ಪುರಸಭೆಯ ಸದಸ್ಯರು, ಮುಖ್ಯಧಿಕಾರಿ ಭರತ್ , ಬಿ .ಡಿ .ಭೂಕಾಂತ್ , ಲಕ್ಷ್ಮಿ ಮಹಾಲಿಂಗಪ್ಪ ಕೆ.ಪಾಲಾಕ್ಷಪ್ಪ ,  ಸುರೇಶ್ ,ಜಿನಳ್ಳಿ ಪ್ರಶಾಂತ್, ಮುಂತಾದವರು  ಉಪಸ್ಥಿತರಿದ್ದರು .

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!