ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಮನವಿ

0
420

ಶಿವಮೊಗ್ಗ : ಆಶಾ ಕಾರ್ಯಕರ್ತೆಯರಿಗೆ ಈ ಸಮೀಕ್ಷೆಗೆ ಸೂಕ್ತ ಸಂಭಾವನೆ ನಿಗದಿ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯಿಂದ ಇಂದು ಜಿ.ಪಂ. ಎದುರು ಪ್ರತಿಭಟನೆ ನಡೆಸಿ ಜಿ.ಪಂ.ಸಿಇಒ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಮೂಲಕ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ಆಶಾ ಕಾರ್ಯಕರ್ತೆಯರಿಗೆ ಈ ಸಮೀಕ್ಷೆ ಮಾಡಲು ಮೊಬೈಲ್/ಟ್ಯಾಬ್ ಜೊತೆ ಡಾಟಾ ಒದಗಿಸಬೇಕು. ಮೊಬೈಲ್ ಮತ್ತು ಟ್ಯಾಬ್ ಬಳಸಲು ಬಾರದ ಆಶಾ ಕಾರ್ಯಕರ್ತೆಯರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಸೂಕ್ತ ಸಂಭಾವನೆ ನೀಡಬೇಕು. ಒತ್ತಡ ಹೇರದೆ ಅಗತ್ಯವಿರುವಷ್ಟು ಸಮಯ ನೀಡಿ ಸಮೀಕ್ಷೆ ಮಾಡಿಸಬೇಕೆಂದು ಆಗ್ರಹಿಸಿದರು.

ಆರ್ಥಿಕ ಮಾಹಿತಿಯನ್ನು ಈ ಸಮೀಕ್ಷೆಯಿಂದ ಕೈಬಿಡಬೇಕು. ಈ ಸಂಜೀವಿನಿ ಸಂಬಂಧಿಸಿದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ಎನ್‌ಎಸ್‌ಡಿ ಸರ್ವೆಗೆ ಸಂಬಂಧಿಸಿದಂತೆ ಆದೇಶ ಪಾಲಿಸಬೇಕೆಂದು ಆಗ್ರಹಿಸಿದರು.

ಮೊಬೈಲ್‌ನಲ್ಲಿ ಈ ಸಮೀಕ್ಷೆ ಮಾಡಲು ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡುತ್ತಿದ್ದು, ಮೊಬೈಲ್ ಆಪ್(ಅಪ್ಲಿಕೇಶನ್) ಮೂಲಕ ಟಾರ್ಗೆಟ್ ನೀಡಿ ಸಮೀಕ್ಷೆ ಮಾಡಲು ತಿಳಿಸಲಾಗಿದೆ. ಹಲವು ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಮನೆಗಳನ್ನು ಹಂಚಿಕೆ ಮಾಡಿ ಸಮೀಕ್ಷೆ ನಡೆಸಲು ತಿಳಿಸಲಾಗಿದೆ.

ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಎಂಎಲ್ ಹೆಚ್‌ವಿ ಸಿಬ್ಬಂದಿ ಸಮೀಕ್ಷೆ ಮಾಡಲು ಆದೇಶಿಸಲಾಗಿದ್ದರೂ. ಆಶಾ ಕಾರ್ಯಕರ್ತೆಯರಿಂದ ಮಾತ್ರ ಸರ್ವೇ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದರು. ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ರಾಜೇಶ್ವರಿ, ಚಂದ್ರಕಲಾ,ಶಿಲಾಬಾಯಿ, ಅನಿತಾ, ಸುಜಾತ, ದೀಪಾ, ಸುಮಾ,ವಸಂತಾ, ಮಂಜುನಾಥ ಕುಕ್ಕವಾಡ ಮೊದಲಾದವರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here