ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್ ನೌಕರರ ಪ್ರತಿಭಟನೆ

0
200

ಚಿಕ್ಕಮಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್ ನೌಕರರ ಪ್ರತಿಭಟನೆ ವಿವಿಧ ಕಾರ್ಮಿಕ ಸಂಘಟನೆಗಳ ಒಕ್ಕೂಟ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆ ಖಂಡಿಸಿ ದೇಶವ್ಯಾಪಿ ಮುಷ್ಕರಕ್ಕೆ ಕರೆನೀಡಿದ್ದು, ಜಿಲ್ಲೆಯಲ್ಲೂ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದರಿಂದ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.

ಗ್ರಾಮೀಣ ಪ್ರದೇಶ, ತಾಲೂಕು ಮಟ್ಟ ಹಾಗೂ ನಗರದಲ್ಲಿ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಬ್ಯಾಂಕ್, ವಿಮೆ, ಆದಾಯ ತೆರಿಗೆ, ಅಂಚೆ ಸೇರಿದಂತೆ ಹಲವು ಸೇವೆಗಳಲ್ಲಿ ಸೋಮವಾರ ವ್ಯತ್ಯಯವಾಗಿದ್ದು, ನಾಳೆ ಮಂಗಳವಾರವೂ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ.

ಬ್ಯಾಂಕ್ ಸಂಘಗಳ ಸಂಯಕ್ತ ವೇದಿಕೆ ನೀಡಿದ್ದ ಬಂದ್ ಕರೆಗೆ ಸ್ಪಂದಿಸಿದ್ದು, ಬ್ಯಾಂಕ್ ಸೇವೆ ಮತ್ತು ಬಟಾವಣೆಯನ್ನು ಸ್ಥಗಿತಗೊಳಿಸಲಾಯಿತು. ಕೇಂದ್ರ ಸರ್ಕಾರ ಹಲವು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಸಜ್ಜಾಗಿದ್ದು, ಈ ನಿರ್ಧಾರ ಸಮರ್ಥನೀಯವಲ್ಲ, ದೇಶದ ಆರ್ಥಿಕತೆ ಮತ್ತು ಜನತೆಗೆ ಅನುಕೂಲಕರವಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸಾರ್ವಜನಿಕ ಸೇವಾ ವಲಯದಲ್ಲಿರುವ ಬ್ಯಾಂಕುಗಳನ್ನು ಬಲವರ್ಧನೆಗೊಳಿಸಬೇಕು. ಬ್ಯಾಂಕುಗಳ ಖಾಸಗೀಕರಣ ನಿಲ್ಲಿಸಬೇಕು. ಬ್ಯಾಂಕುಗಳ ಠೇವಣಿ ಮೇಲಿನ ಬಡ್ಡಿಯನ್ನು ಹೆಚ್ಚಿಸುವುದು, ಹೆಚ್ಚಿನ ಸೇವಾ ಶುಲ್ಕವನ್ನು ಗ್ರಾಹಕರ ಮೇಲೆ ವಿಧಿಸಬಾರದು. ಬ್ಯಾಂಕು ನೌಕರರಿಗೆ ಪಿಂಚಣಿ ನೀಡುವುದು, ಎನ್‍ಪಿಎಸ್ ನಿಲ್ಲಿಸಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

ದಿನಗೂಲಿ ನೌಕರರನ್ನು ಖಾಯಂಗೊಳಿಸಬೇಕೆಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ ಮನವಿಯಲ್ಲಿ ಒತ್ತಾಯಿಸಿದೆ. ಚಿಕ್ಕಮಗಳೂರು ಜಿಲ್ಲಾ ಬ್ಯಾಂಕ್ ನೌಕರರ ಸಂಘಟನೆ ಪ್ರಧಾನಕಾರ್ಯದರ್ಶಿ ಕೆ. ಆರ್. ಬಸವರಾಜ್, ಪದಾಧಿಕಾರಿಗಳಾದ ಉಜ್ವಲ್ ಪಡುಬಿದ್ರೆ, ಎಸ್ಪಿ ನಂದನ್, ಶ್ರೀನಿವಾಸ್, ಕೆ. ಜಿ. ರೇವಣ್ಣ ಇದ್ದರು.

ಅಂಚೆ ನೌಕರರ ಜಂಟಿಕ್ರಿಯಾ ಸಮಿತಿ ನೇತೃತ್ವದಲ್ಲಿ ಪ್ರಧಾನಅಂಚೆ ಕಚೇರಿ ಎದುರು ನೌಕರರು ಇಂದು ಪ್ರತಿಭಟನೆ ನಡೆಸಿದರು. ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೇ ಪಿಂಚಣಿ ಯೋಜನೆ ಮುಂದುವರಿಸಬೇಕು. ಅಂಚೆ ಇಲಾಖೆ ಖಾಸಗೀಕರಣ ನಿಲ್ಲಿಸಬೇಕು. ಅಂಚೆ ಇಲಾಖೆಯಲ್ಲಿನ ನೆಟ್‍ವರ್ಕ್ ಸಮಸ್ಯೆ ಬಗೆಹರಿಸಬೇಕು. ಕೊರೊನಾ ಸೋಂಕಿನಿಂದ ಮೃತಪಟ್ಟ ಅಂಚೆನೌಕರರು ಮತ್ತು ಜಿಡಿಎಸ್ ನೌಕರರ ಕುಟುಂಬಕ್ಕೆ ಅನುಕಂಪ ಆಧರದ ಮೇಲೆ ನೌಕರಿ ನೀಡಬೇಕೆಂದು ಒತ್ತಾಯಿಸಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here