ವಿಶ್ರಾಂತಿಗೆ ನಿಲ್ಲಿಸಿದಾಗ ಹೃದಯಾಘಾತ ; ಟ್ಯಾಂಕರ್ ಚಾಲಕ ಸಾವು !

0
1112

ರಿಪ್ಪನ್‌ಪೇಟೆ: ಇಲ್ಲಿನ ಸಾಗರ ರಸ್ತೆಯ ವಿಶ್ವಮಾನವ ಸಭಾಭವದ ಬಳಿ ವಿಶ್ರಾಂತಿಗಾಗಿ ನಿಲ್ಲಿಸಿದ ಹೃದಯಾಘಾತದಿಂದ ಟ್ಯಾಂಕರ್ ಚಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ಯಲ್ಲಾಪುರದಿಂದ ತೀರ್ಥಹಳ್ಳಿಗೆ ಡಾಂಬರ್ ತುಂಬಿದ ಟ್ಯಾಂಕರ್ ಕೆಎ.20 ಡಿ7055 ಚಾಲಕ ಮಾರ್ಗಮಧ್ಯ ರಿಪ್ಪನ್‌ಪೇಟೆಯ ವಿಶ್ವಮಾನವ ಸಭಾಭವನದ ಬಳಿ ಲಾರಿ ನಿಲ್ಲಿಸಿ ವಿಶ್ರಾಂತಿ ಪಡೆಯುವ ಸಮದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ಚಾಲಕನ ನಂಬರಿಗೆ ಫೋನ್ ಮಾಡಲಾಗಿ ಸಂಪರ್ಕ ಸಿಗದಿದ್ದಾಗ ಗಾಬರಿಗೊಂಡ ಲಾರಿ ಮಾಲೀಕರ ಕಡೆಯವರು ಹುಡುಕಿಕೊಂಡು ಬಂದಾಗ ಚಾಲಕ ಲಾರಿಯಲ್ಲಿ ಮೃತಪಟ್ಟಿರುವುದು ಕಂಡು ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿಯನ್ನಾಧರಿಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here