ವೀರಶೈವ ಪತ್ತಿನ ಸಹಕಾರಿ ಸಂಘದ ಕಟ್ಟಡದ ಶಂಕುಸ್ಥಾಪನೆ | ಸದಸ್ಯರು ಒಗ್ಗಟಿನಿಂದ ಸಹಕಾರಿ ಸಂಸ್ಥೆಯಲ್ಲಿ ಕೆಲಸ ಮಾಡಿದರೆ ಎಂಥಹ ಸಂಸ್ಥೆಯನ್ನು ಉದ್ದಾರ ಮಾಡಬಹುದು ; ಹರತಾಳು ನಾಗರಾಜ್

0
131

ಹೊಸನಗರ: ಸದಸ್ಯರು ಯಾವುದೇ ಸಂಘ-ಸಂಸ್ಥೆಗಳಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡಿದರೆ ಒಗ್ಗಟಿನಿಂದ ಸೇವೆ ಮಾಡಿದರೆ ಎಂಥಹ ಪರಿಸ್ಥಿತಿಯಲ್ಲೂ ಒಂದಾಗಿ ಸೇವೆ ಮಾಡಿದರೆ ಖಂಡಿತವಾಗಿಯು ತಳ ಮಟ್ಟದ ಸಂಘ-ಸಂಸ್ಥೆಗಳನ್ನು ಉದ್ಧಾರ ಮಾಬಹುದು ಎಂದು ವೀರಶೈವ ಪತ್ತಿನ ಸಹಕಾರಿ ಸಂಸ್ಥೆಯ ಸಂಸ್ಥಾಪಕ ಹರತಾಳು ನಾಗರಾಜ್‌ರವರು ಹೇಳಿದರು.

ಹೊಸನಗರ ಪಟ್ಟಣದ 2ನೇ ವಾರ್ಡಿನಲ್ಲಿರುವ ಜೆಸಿಎಂ ರಸ್ತೆಯಲ್ಲಿ ತಮ್ಮ ಸ್ವಂತ ಜಾಗವನ್ನು ಹೊಂದಿದ್ದು ಅದರ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದು ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿದರು.

ಸಂಘ ಸಂಸ್ಥೆಯನ್ನು ಕಟ್ಟುವಾಗ ಸದಸ್ಯರ ಮನೋಭಾವವನ್ನು ಅರಿತು ಸಂಘವನ್ನು ಕಟ್ಟಬೇಕಾಗುತ್ತದೆ ಸದಸ್ಯರಾದವರು ಸಂಘದ ಏಳಿಗೆಗಾಗಿ ಸದಸ್ಯತ್ವವನ್ನು ಹೊಂದಿರುವರು ಅಥವ ಸಂಘದಲ್ಲಿ ಕಿರಿಕ್ ಮಾಡಲು ಸದಸ್ಯತ್ವ ಪಡೆದುಕೊಂಡಿದ್ದರೂ ಎಂಬುದನ್ನು ಮನವರಿಕೆ ಮಾಡಿಕೊಂಡು ಸದಸ್ಯತ್ವ ನೀಡಬೇಕು ಯಾವುದೇ ಸಂಘ ಸಂಸ್ಥೆಯಲ್ಲಿ ಒಂದೆರಡು ಕಿರಿಕ್ ಮಾಡುವವರು ಇದ್ದರೂ ಅಂಥಹ ಸಂಘವನ್ನು ಮೇಲೆತ್ತುವುದು ಕಷ್ಟಕರವಾಗಿರುತ್ತದೆ ಆದ್ದರಿಂದ ಸಂಘ-ಸಂಸ್ಥೆಯನ್ನು ಸ್ಥಾಪಿಸುವಾಗ ಸಂಘ ಸಂಸ್ಥೆಯ ಏಳಿಗೆಗಾಗಿ ಶ್ರಮಿಸುವವರನ್ನೇ ಸದಸ್ಯರನ್ನಾಗಿ ಮಾಡಿಕೊಳ್ಳುವುದು ಸೂಕ್ತ ಎಂದರು.

ವೀರಶೈವ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ನಂಜುಂಡಪ್ಪನವರು ಮಾತನಾಡಿ, ನಮ್ಮ ಸಂಸ್ಥೆ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ ನಮ್ಮಲ್ಲಿ ಪ್ರತಿಯೊಬ್ಬ ಸದಸ್ಯರು ಸಂಘದ ಏಳಿಗೆಗಾಗಿ ಶ್ರಮಿಸುತ್ತಿರುವುದರಿಂದ ಇಂದು ಸುಮಾರು 50ಲಕ್ಷ ರೂ. ಬಂಡವಾಳ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಶಂಕುಸ್ಥಾಪನೆ ಕೈಗೊಳ್ಳಲಾಗಿದೆ ಉತ್ತಮ ರೀತಿಯಲ್ಲಿ ಕಟ್ಟಡ ನಿರ್ಮಿಸುವುದೇ ನಮ್ಮ ಗುರಿಯಾಗಿದ್ದು ಸಂಘದ ಸದಸ್ಯರು ಸಹಕರಿಸಿರಿ ಎಂದರು.

ಈ ಶಂಕುಸ್ಥಾಪನೆ ಸಂದರ್ಭದಲ್ಲಿ ಕೊಗಟಿ ರಾಜಶೆಖರ, ಮಾವಿನಕಟ್ಟೆ ಶಿವಾನಂದ, ಡಿ.ವಿ.ಆರ್ ಮಲ್ಲಿಕಾ, ಚಂದ್ರಶೇಖರ, ವಿಶ್ವೇಶ್ವರ, ರಾಜಶೇಖರ, ಗಣಪತಿ ಗೌಡ, ಕಾರ್ಯನಿರ್ವಹಣಾಧಿಕಾರಿ ಗೀತಾ ಗಿರೀಶ್ ಹಾಗೂ ವೀರಶೈವ ಪತ್ತಿ ಸಹಕಾರಿ ಸಂಘದ ನಿರ್ದೆಶಕರು ಹಾಗೂ ಸದಸ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here