ವೀರಶೈವ-ಲಿಂಗಾಯಿತ ಪರಿಷತ್‌ನಿಂದ ಹೊಸನಗರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಿಸುವಂತೆ ಶಾಸಕ ಹೆಚ್. ಹಾಲಪ್ಪನವರಿಗೆ ಮನವಿ

0
311

ಹೊಸನಗರ: ವೀರಶೈವ ಲಿಂಗಾಯತ ಪರಿಷತ್ ವತಿಯಿಂದ ಸಮಾಜಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಿಕೊಡಲು ಹೊಸನಗರ, ಸಾಗರ ಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರ (ಐಬಿ)ದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಹರತಾಳು ಹಾಲಪ್ಪ, ವೀರಶೈವ ಲಿಂಗಾಯತ ಸಮುದಾಯದವರು ವಿವಿಧ ರೀತಿಯ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಅದರ ಮೂಲಕ ತಾಲ್ಲೂಕು, ಜಿಲ್ಲೆ, ರಾಜ್ಯ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಸರ್ಕಾರಿ ಹುದ್ದೆ ರಾಜಕೀಯ ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದಂತಹ ಛಾಪನ್ನು ಮೂಡಿಸಿದೆಯಲ್ಲದೇ, ಲಿಂಗಾಯತ ಸಮುದಾಯ ಅತ್ಯಂತ ದೊಡ್ಡದಾಗಿ ಬೆಳೆಯುತ್ತಿದೆ.

ಬಿ.ಎಸ್ ಯಡಿಯೂರಪ್ಪರವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಸಮಾಜದ ಒಳಿತಿಗಾಗಿ ಶ್ರಮಿಸಿದ ಧೀಮಂತ ನಾಯಕರು. ಇಂತಹ ಮಹಾನ್ ಪುರುಷರ ಕಂಡ ಈ ಸಮುದಾಯ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಬುದ್ಧತೆ ಹೊಂದಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಆಡಳಿತಾತ್ಮಕವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ರಾಜಕೀಯ ಎಂಬುದು ಈ ಸಮುದಾಯದಲ್ಲಿ ರಕ್ತಗತವಾಗಿ ಬಂದಿದೆ.

ವೀರಶೈವ ಲಿಂಗಾಯತ ಸಮುದಾಯಕ್ಕೆ ಜಮೀನು ಮಂಜೂರಾಗಬೇಕು ಎಂದು ತಿಳಿಸಿದ್ದೀರಿ ಮಂಜೂರು ಮಾಡಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದ ಅವರು, ಕಳೆದ ಎರಡು ಮೂರು ವರ್ಷಗಳ ಹಿಂದೆಯೇ ಈ ಕೆಲಸ ಮಾಡಿದ್ದರೆ, ಇಷ್ಟೊತ್ತಿಗಾಗಲೇ ಭೂಮಿ ಮಂಜೂರಾತಿಯಾಗಿ ಸಮುದಾಯ ಭವನದ ನಿರ್ಮಾಣ ಆಗುತ್ತಿತ್ತು. ಭೂಮಿ ಚಿಕ್ಕದಾಗಿ ಇದ್ದಂತೆ ಇದೆ ಹೆಚ್ಚಿನದಾಗಿ ಬೆಳೆದಿಲ್ಲ ಅನೇಕ ಬಗರ್ ಹುಕುಂ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಭೂಮಿ ನೀಡಲಾಗಿದ್ದು, ಈಗಾಗಲೇ ಒಂದು ಎಕರೆ ಜಮೀನು 25 ಲಕ್ಷ ರೂಪಾಯಿಗೂ ಅಧಿಕವಾಗಿದ್ದು ಎಲ್ಲಿಯೂ ಭೂಮಿ ಕೊಡಲು ಸಾಧ್ಯವಿಲ್ಲ. ಇನ್ನೇನಿದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ವಿಜ್ಞಾನಿಗಳಾಗಿಯೋ, ವೈದ್ಯರಾಗಿಯೋ, ವಕೀಲರಾಗಿಯೋ ಇಂಜಿನಿಯರಾಗಿ, ಪಿಎಸ್ಐ, ಸಿಪಿಐ, ಡಿಸಿ, ತಹಶೀಲ್ದಾರ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬೆಳೆಸುವ ವ್ಯವಸ್ಥೆ ಮಾಡಬೇಕಿದೆ. ಯಾವುದೇ ಸಮುದಾಯದ ಸಂಖ್ಯೆ ಹೆಚ್ಚಿದೆ, ಕಡಿಮೆ ಇದೆ ಎಂಬ ಸಂಶಯ ಬೇಡ. ಸಮಾಜದ ಪರವಾಗಿ ಉತ್ತಮ ಕೆಲಸ ಮಾಡಿದರೆ ಸಂಖ್ಯೆ ತನ್ನಿಂದ ತಾನೇ ಹೆಚ್ಚಾಗುತ್ತದೆ ಎಂದರು.

ಹೊಸನಗರ ತಾಲ್ಲೂಕಿನಲ್ಲಿ ಎಲ್ಲಾ ಸಮಾಜದ ಜನರು ಉತ್ತಮ ಭಾಂದವ್ಯ ಹೊಂದಿದ್ದು, ಎಲ್ಲರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು, ಈಡಿಗ ಸಮುದಾಯಕ್ಕೆ ಹೊಸನಗರ ತಾಲ್ಲೂಕಿನಲ್ಲಿಯೇ ಒಂದುವರೆ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಕಳೆದ ಬಾರಿ ಶಾಸಕನಾಗಿದ್ದಾಗ ಇಲ್ಲಿನ ಸಮುದಾಯ ಭವನದ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಿದ್ದು ಅದು ಈಗ ಪೂರ್ಣಗೊಂಡಿದೆ. ಇದೇ ರೀತಿಯಲ್ಲಿ ಸಾಗರ ತಾಲ್ಲೂಕಿನಲ್ಲಿಯೂ ಸಹ ಎಲ್ಲಾ ಸಮಾಜದ ಸಮುದಾಯ ಭವನದ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ ಹಣ ಬಿಡುಗಡೆಗೆ ಪ್ರಯತ್ನ ನಡೆಯುತ್ತಿದೆ.

ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದೇಶದ ಅಭಿವೃದ್ಧಿ ಆಗಿರಲಿಲ್ಲ ಆದರೆ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಮುಂದಿನ ಪೀಳಿಗೆಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸುವ ಉದ್ದೇಶದಿಂದ ಒಂದು ನೂರು ವರ್ಷಗಳಿಗೆ ಏನು ಮಾಡಬೇಕು ಎಂಬುದನ್ನು ಚಿಂತಿಸಿ ಅದನ್ನು ಕಾರ್ಯ ರೂಪಕ್ಕೆ ತರಲು ಹಲವು ಮಾರ್ಪಾಡು ಮಾಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೊಸನಗರ ತಾಪಂ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ವಾಟಗೋಡು ಸುರೇಶ್, ಎನ್.ವರ್ತೇಶ್, ಯೋಗೇಂದ್ರಪ್ಪ ಗೌಡ್ರು, ಈಶ್ವರಪ್ಪ ಗೌಡ್ರು, ಕೀರ್ತಿರಾಜ್ ಗೌಡ್ರು, ಮಳಲಿಕೊಪ್ಪ ವೀರೇಶ್ ಗೌಡ್ರು, ಗ್ರಾ ಪಂ ಸದಸ್ಯರಾದ ಮಲ್ಲಿಕಾರ್ಜುನ್, ಸಚಿನ್, ಪ್ರವೀಣ್, ಪರಿಷತ್ ಪದಾಧಿಕಾರಿಗಳು, ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here