ವೃಕ್ಷಾರೋಪಣ ಪ್ರಚಾರಾಂದೋಲನಕ್ಕೆ ಚಾಲನೆ

0
149

ಚಿಕ್ಕಮಗಳೂರು: ಅಂತಾರಾಷ್ಟ್ರೀಯ ಕಿರುಧಾನ್ಯ ವರ್ಷ-2023, ಪೌಷ್ಠಿಕ ತೋಟ ಮತ್ತು ವೃಕ್ಷಾರೋಪಣ ಪ್ರಚಾರಾಂದೋಲನಕ್ಕೆ ಚಾಲನೆ ನೀಡಲಾಯಿತು.

ಐ.ಸಿ.ಎ.ಆರ್ – ಕೃಷಿ ವಿಜ್ಞಾನ ಕೇಂದ್ರ, ಇಫ್ಕೋ ಇಸಹಯೋಗದೊಂದಿಗೆ ಅಂತಾರಾಷ್ಟೀಯ ಕಿರುಧಾನ್ಯ ವರ್ಷ-2023, ಪೌಷ್ಟಿಕ ತೋಟ ಮತ್ತು ವೃಕ್ಷಾರೋಪಣ ಪ್ರಚಾರಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಎ.ಟಿ. ಕೃಷ್ಣಮೂರ್ತಿ ಮಾತನಾಡಿ, ಅಂತಾರಾಷ್ಟ್ರೀಯ ಕಿರುಧಾನ್ಯ ವರ್ಷ-2023 ಪೌಷ್ಟಿಕ ತೋಟದ ಮಹತ್ವದ ಬಗ್ಗೆ ತಿಳಿಸಿ, ಮಹಿಳೆಯರು ಆರೋಗ್ಯ ಜೀವನಕ್ಕಾಗಿ ಸಮಗ್ರ ಪೋಷಕಾಂಶ, ಸಮತೋಲನ ಆಹಾರ ಬಳಸುವುದು ಮುಖ್ಯವೆಂದರು.

ಸಿರಿಧಾನ್ಯಗಳಾದ ಸಾಮೆ, ನವಣೆ, ಹಾರಕ, ಸಜ್ಜೆ, ಉದಲು ಮತ್ತು ಬರುಗುಗಳನ್ನು ನಿಗದಿತ ಪ್ರಮಾಣದಲ್ಲಿ ಸೇವಿಸುವುದರಿಂದ ರೋಗವನ್ನು ದೂರವಿಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್. ಅಶೋಕ್‍ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದಿನ ಆಹಾರ ಪದ್ಧತಿಯಲ್ಲಿ ಕಾಡಿನಲ್ಲಿ ಮತ್ತು ಸ್ವಂತ ತರಕಾರಿ ಬೆಳೆದು ತಿನ್ನುವುದರಿಂದ ಉತ್ತಮವಾದ ಆರೋಗ್ಯ ಇದ್ದು ಸದೃಢವಾಗಿರುತ್ತಿದ್ದೆವೆಂದರು.

ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ಮೂಡಿಗೆರೆ, ಮಾನವನು ತಮ್ಮ ದಿನನಿತ್ಯದ ಆಹಾರ ಸೇವನೆಯಲ್ಲಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ತಮ್ಮ ಆರೋಗ್ಯದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯವೆಂದು ಹೇಳಿದರು.

ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಎಂ. ಶಿವಪ್ರಸಾದ್ ಮಾತನಾಡಿ, ಪೌಷ್ಠಿಕ ಆಹಾರ ಪಡೆಯುವುದರಿಂದ ಔಷಧಿ ಬಳಕೆ ಮಾಡಿಮೆಮಾಡಬಹುದಾಗಿದೆ ಎಂದು ತಿಳಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here