ವೈಭವೀಕರಣದ ವ್ಯಕ್ತಿಗಿಂತ ಸಾಹಿತ್ಯಾಭಿಮಾನದ ಹೃದಯವಂತಿಕೆಗೆ ಬೆಂಬಲಿಸಿ: ಡಿ.ಬಿ. ಶಂಕರಪ್ಪ

0
292

ರಿಪ್ಪನ್‌ಪೇಟೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ಆಯ್ಕಯಾದ ಮೇಲೆ ಜಾತಿ ರಾಜಕೀಯ ಮಾಡದೆ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೆಳನಾಧ್ಯಕ್ಷರ ಸ್ಥಾನಕ್ಕೆ ಮಹಿಳೆ ಸರ್ವಸಮ್ಮತವಾಗಿ ಆಯ್ಕೆ ಮಾಡಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡಲಾಗಿದ್ದರೂ ಕೆಲವರು ಅನಾವಶ್ಯಕವಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಿ.ಬಿ.ಶಂಕರಪ್ಪ ಸ್ಪಷ್ಟಪಡಿಸಿದರು.

ರಿಪ್ಪನ್‌ಪೇಟೆಯ ಹಿಂದು ಮಹಾಸಭಾ ಆವರಣದಲ್ಲಿ ಇದೇ ತಿಂಗಳು 21 ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಮತ್ತು ಜಿಲ್ಲಾ ಅಧ್ಯಕ್ಷರ ಚುನಾವಣಾ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿ, ಹಾಲಿ ಅಧ್ಯಕ್ಷರು ಪುನರಾಯ್ಕೆಗೆ ಸ್ಪರ್ಧಿಸುವಂತ್ತಿಲ್ಲ ಎಂಬ ಬಗ್ಗೆ ಸಾಹಿತ್ಯ ಪರಿಷತ್ ಸದಸ್ಯರಲ್ಲಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. 2019 ರಲ್ಲಿ ರಾಜ್ಯ ಸಂಘದವರು 40(ಅ)ರೂ ಬೈಲಾದಂತೆ ಠಾಣೆಯಲ್ಲಿ ದೂರು ದಾಖಲಾಗಿರಬಾರದು ಈ ಬಗ್ಗೆ ಎನ್.ಓ.ಸಿ ಪಡೆದಿರಬೇಕು. ನಾಮಪತ್ರ ಸಲ್ಲಿಸುವಾಗ ಚುನಾವಣಾಧಿಕಾರಿಗಳು ಅಭ್ಯರ್ಥಿಯಿಂದ ಪಡೆಯಲಾದ ನಾಮಪತ್ರವನ್ನು ತಿರಸ್ಕರಿಸುವ ಅಧಿಕಾರವಿತ್ತು ಆದರೆ ನನ್ನ ನಾಮಪತ್ರವನ್ನು ಸ್ವೀಕರಿಸಿರುವ ಚುನಾವಣಾಧಿಕಾರಿಗಳು ಬೈಲಾ ತಿದ್ದುಪಡಿಯಾಗಿರುವುದನ್ನು ಆರೋಪಿಸುವವರು ಸ್ಪಷ್ಟವಾಗಿ ಓದಿ ತಿಳಿದುಕೊಳ್ಳದೆ ಮತದಾರರಲ್ಲಿ ತಪ್ಪು ಮಾಹಿತಿ ಬಿತ್ತರ ಮಾಡುವುದು ಎಷ್ಟು ಸಮಂಜಸ? ಎಂದು ಪ್ರಶ್ನಿಸಿದರು.

ಕಳೆದ ಐದು ವರ್ಷದ ಅವಧಿಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾಗುವುದು ಶ್ರೇಷ್ಟವಾಗಿದ್ದು ಇಲ್ಲಿ ಯಾವುದೇ ಜಾತಿ ಭೇದ ಮಾಡದೆ ಮುಸ್ಲಿಂ ಅಲ್ಪಸಂಖ್ಯಾತರ ಜಂಗಮರು ಒಕ್ಕಲಿಗರು ಮತ್ತು ಪರಿಶಿಷ್ಟ ಜನಾಂಗದ ಸಾಹಿತ್ಯಾಸಕ್ತರನ್ನು ಆಯ್ಕೆ ಮಾಡಿರುವುದಾಗಿ ಸಭೆಯಲ್ಲಿ ವಿವರಿಸಿದರು.

ಸರ್ವಸಮ್ಮೇಳನಾಧ್ಯಕ್ಷರಾಗಿರುವ ಸಣ್ಣ ರಾಮಪ್ಪ, ಶ್ರೀಕಂಠಕೊಡಗೆ, ಜಯಪ್ರಕಾಶ್, ವಿಜಯ, ಲಿಂಗಾಯಿತರೆ ಆರೋಪಿಸುವ ಮೊದಲು ಅವರ ಜಾತಿಯನ್ನು ತಿಳಿದುಕೊಂಡು ಮಾತನಾಡಬೇಕು ಎಂದರು.

ಕನ್ನಡ ಸಮ್ಮೇಳದ ಉಪನ್ಯಾಸಕರಿಗೆ ಬಡ್ತಿಯಲ್ಲಿ 10 ಅಂಕ:

ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡ ಸಾಹಿತ್ಯ ಪರಿಷತ್‌ನ ಸಮ್ಮೇಳನಗಳಲ್ಲಿ ಉಪನ್ಯಾಸ ನೀಡುವ ಪದವಿಪೂರ್ವ ಕಾಲೇಜ್ ಮತ್ತು ಪದವಿ ಕಾಲೇಜ್ ಮತ್ತು ಹೈಸ್ಕೂಲ್ ಶಿಕ್ಷಕರುಗಳಿಗೆ ಬಡ್ತಿ ಸಂದರ್ಭದಲ್ಲಿ 10 ಗ್ರೇಸ್ ಅಂಕಗಳನ್ನು ನೀಡಿ ಬಡ್ತಿ ನೀಡಲಾಗುತ್ತಿದೆ ಇದು ಎಷ್ಟ ಜನರಿಗೆ ಗೊತ್ತು ಎಂದು ಹೇಳಿದ ಅವರು, ಈಗಾಗಲೇ ಈ ಸೌಲಭ್ಯವನ್ನು ಪಡೆದುಕೊಂಡಿರುವುದರ ಬಗ್ಗೆ ವಿವರಣೆ ನೀಡಿದರು.

ಭ್ರಷ್ಟಾಚಾರ ರಹಿತ ಮತ್ತು ಪಾರದರ್ಶಕವಾಗಿ ಕಳೆದ ಐದು ವರ್ಷದ ನನ್ನ ಆಡಳಿತಾವಧಿಯಲ್ಲಿನ ಜಿಲ್ಲಾ ಮತ್ತು ತಾಲ್ಲೂಕ್ ಸಮ್ಮೇಳನದ ಖರ್ಚು ವೆಚ್ಚದ ಲೆಕ್ಕಪತ್ರವನ್ನು ನೀಡುವುದರೊಂದಿಗೆ ರಾಜ್ಯದಲ್ಲಿಯೇ ಪ್ರಥಮವಾಗಿ ಈ ರೀತಿಯಲ್ಲಿ ಲೆಕ್ಕಪತ್ರವನ್ನು ಬಹಿರಂಗವಾಗಿ ನೀಡಿರುವ ಪಾರದರ್ಶಕ ಭ್ರಷ್ಟಾಚಾರ ರಹಿತ ಅಧ್ಯಕ್ಷರಾಗಿರುವುದಾಗಿ ಹಲವರು ಸಭೆಯಲ್ಲಿ ಪ್ರಶಂಸೆಯನ್ನು ಮಾಡುತ್ತಿರುವುದು ಈ ಬಾರಿಯ ಚುನಾವಣೆಯಲ್ಲಿ ಅಭೂತ ಪೂರ್ವ ಬೆಂಬಲ ನೀಡುತ್ತಿರುವುದನ್ನು ಸಹಿಸದ ಕೆಲವರು ಹತಾಶಯ ಮನೋಭಾವನೆಯಿಂದಾಗಿ ಈ ರೀತಿಯಲ್ಲಿ ಆರೋಪಿಸುತ್ತಿದ್ದಾರೆಂದರು.

ಕನ್ನಡದ ಸೇವೆಗೆ ಸದಾ ಸಿದ್ದ:

ಕನ್ನಡ ಸೇವೆಗೆ ನಾನು ಸದಾ ಸಿದ್ದ. ಕನ್ನಡಪರ ಅಭಿವೃದ್ಧಿ ಕೆಲಸಗಳಿಗೆ ಬದ್ದ. ಕನ್ನಡದ ಸೇವೆಗಾಗಿ ಇನ್ನೊಂದು ಅವಕಾಶ ಮಾಡಿಕೊಡಬೇಕು. ಇದಕ್ಕಾಗಿ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಮತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಮಗೆ ತಮ್ಮ ಮತಗಳನ್ನು ನೀಡಿ ಜಯಶಾಲಿಯಾನ್ನಾಗಿಸುಂತೆ ಮನವಿ ಮಾಡಿದರು.

ಪಟ್ಠಭಿಯವರ ಅಭಿಲಾಷೆಯಂತೆ ನಾನು ಮತ್ತೆ ಚುನಾವಣೆಗೆ ಸ್ಪರ್ಧಿಸುವಂತಾಯಿತು ನನ್ನ ಆಯ್ಕೆಯಾದರೂ ಸಮರ್ಥವಾಗಿ ಜಿಲ್ಲೆಯಲ್ಲಿ ಸಾಹಿತ್ಯದ ಕೃಷಿಯನ್ನು ಭಿತ್ತಿ ಸಾಹಿತ್ಯಾಭಿಮಾನಿಗಳನ್ನಾಗಿಸುವ ಸಂಕಲ್ಪ ಮಾಡಿರುವುದಾಗಿ ತಿಳಿಸಿ ನನಗೆ ಮತಹಾಕಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಾಡೋಜ ಮಹೇಶ್‌ಜೋಷಿಯವರಿಗೆ ಮತಹಾಕದೆ ಮತದಾನ ಮಾಡುವವರಿಗೆ ಖಡಕ್ ಎಚ್ಚರಿಕೆ ನೀಡಿ ಇಬ್ಬರಿಗೂ ಹಾಕಿ ಇಲ್ಲವಾದರೆ ನನಗೆ ಮತಹಾಕುವುದೇ ಬೇಡಾ ಎಂದು ಖಡಕ್ ಎಚ್ಚರಿಕೆ ನೀಡಿ ಕೊಡುವುದಾದರೆ ಇಬ್ಬರಿಗೂ ಸಮನಾಗಿ ಮತದಾನಮಾಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

ಎಂ.ಬಿ.ಮಂಜುನಾಥ, ಆರ್.ಟಿ.ಗೋಪಾಲ್, ಎನ್.ಸತೀಶ್, ಎಲ್.ವೆಂಕಟೇಶ್, ವೀರೇಶ್ ಆಲವಳ್ಳಿ, ನಾಗಾರ್ಜುನಸ್ವಾಮಿ, ಎಂ.ಸುರೇಶ್‌ಸಿಂಗ್, ಕಗ್ಗಲಿ ಲಿಂಗಪ್ಪ, ಗಂಗಾಧರಯ್ಯ, ಬಸವರಾಜ್ ಇನ್ನಿತರರು ಸಭೆಯಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಕಲಾಕೌಸ್ತುಭ ಕನ್ನಡ ಸಂಘದ ಗೌರವಾಧ್ಯಕ್ಷೆ ಪದ್ಮಾ ಸುರೇಶ್, ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷೆ ಉಮಾ ಸುರೇಶ್, ನಾಗರತ್ನ ದೇವರಾಜ್, ಗ್ರಾ.ಪಂ.ಸದಸ್ಯ ಜಿ.ಡಿ.ಮಲ್ಲಿಕಾರ್ಜುನ, ಸುಂದರೇಶ್, ದೀಪಾ ಸುಧೀರ್, ವನಮಾಲಾ, ದಾನಮ್ಮ, ಶಶಿಕಲಾ ಮಲ್ಲಪ್ಪ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here