ಶಂಕರ್ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಂಡಿ ನೋವು ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜನೆ

0
298

ಶಿವಮೊಗ್ಗ : ಶಂಕರ್ ಎಜುಕೇಷನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಿವಮೊಗ್ಗದಲ್ಲಿ ಏಪ್ರಿಲ್ 4ನೇ ವಾರದಲ್ಲಿ ಮಂಡಿ ನೋವು ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಪ್ರೊ.ಟಿ.ಎಸ್.ರಾಮ್ ಕುಮಾರ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಡಿ ನೋವು ಎನ್ನುವುದು 50 ವರ್ಷ ದಾಟಿದ ಬಹಳಷಷ್ಟು ಜನರನ್ನು ಕಾಡುವ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಡಾ.ವಿಜಯ್‌ನಾಯ್ಕ್ ಎಂಬುವರು ಸರಳವಾದ ಚಿಕಿತ್ಸಾ ವಿಧಾನವನ್ನು ಕಂಡು ಹಿಡಿದಿದ್ದಾರೆ. ಇದು ಶಸ್ತ್ರ ಚಿಕಿತ್ಸೆಯಿಲ್ಲದ ಚಿಕಿತ್ಸೆಯಾಗಿದೆ. ಇದನ್ನು ಅವರು 1999 ರಲ್ಲಿಯೇ ಪೇಟೆಂಟ್ ತೆಗೆದುಕೊಂಡಿದ್ದಾರೆ. ಬಹುಕೇಂದ್ರಿತ ಮೊಣಕಾಲು ಪಟ್ಟಿ ಕಟ್ಟುವ ಮೂಲಕ ಇದಕ್ಕೆ ಪರಿಹಾರ ಕಂಡುಕೊಂಡಿದ್ದಾರೆ ಎಂದರು.

ಗುಜರಾತಿನ ಡಾ.ವಿಜಯ್ ನಾಯ್ಕ್ ಅವರು ಈಗಾಗಲೇ ಬೆಂಗಳೂರು ಸೇರಿದಂತೆ ವಿವಿಧ‌ ಕಡೆ ಮಂಡಿನೋವು ಚಿಕಿತ್ಸಾ ಶಿಬಿರ ನಡೆಸಿದ್ದಾರೆ. ಸುಮಾರು 75 ಸಾವಿರ ಜನರು ಇದರ ಲಾಭ ಪಡೆದಿದ್ದಾರೆ. ಈಗ ಇವರು ಶಿವಮೊಗ್ಗಕ್ಕೆ ಬರುತ್ತಿರುವುದು ಇದೇ ಮೊದಲಾಗಿದೆ. ಶಿವಮೊಗ್ಗದ ಜನರು ಇದರ ಪ್ರಯೋಜನ ಪಡೆಯಬೇಕು ಎಂದರು.

ಮೊಣಕಾಲು ಶಸ್ತ್ರ ಚಿಕಿತೆಯೆಂದರೆ ಲಕ್ಷಾಂತರ ರೂ. ಖರ್ಚಾಗುತ್ತದೆ. ಆದರೆ ಈ ಪಟ್ಟಿಯು ಕೇವಲ 2 ಕಾಲು ಸೇರಿ 8 ಸಾವಿರ ರೂ. ನಲ್ಲಿ ಲಭ್ಯವಿದೆ. ಇದರ ಧರಿಸುವಿಕೆ ಕೂಡ ಸರಳವಾಗಿದೆ. ಶಿವಮೊಗ್ಗದಲ್ಲಿ ನಡೆಯುವ ಶಿಬಿರದಲ್ಲಿ ಸುಮಾರು 100 ಜನರಿಗೆ ಅವಕಾಶವಿದೆ. ಹಾಗಾಗಿ ಆಸಕ್ತರು (ಮೊ: 9448025056, 9448922023, 9448143165)ಗೆ ಸಂಪರ್ಕಿಸಿ, 500 ರೂ. ನೋಂದಣಿ ಶುಲ್ಕದೊಂದಿಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.

ಟ್ರಸ್ಟಿನ ಪದಾಧಿಕಾರಿಗಳಾದ ಎಸ್ .ಬಿ.ಅಶೋಕ್ ಕುಮಾರ್, ಆರ್.ಟಿ.ನಟರಾಜ್, ಡಾ. ಸಲೀಲ್, ಎಂ.ಕೃಷ್ಣಮೂರ್ತಿ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here