ಶಂಕಿತ ಉಗ್ರರಿಂದ ಹಲವು ವಸ್ತುಗಳು ಸೀಜ್, 11 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಹಲವಾರು ಸಾಕ್ಷ್ಯಗಳ ಸಂಗ್ರಹ ; ಎಸ್ಪಿ ಲಕ್ಷ್ಮೀ ಪ್ರಸಾದ್

0
265

ಶಿವಮೊಗ್ಗ: ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಇಬ್ಬರು ಶಂಕಿತ ಉಗ್ರರನ್ನು ವಶಕ್ಕೆ ಪಡೆದು ಬಂಧಿತರಿಂದ ಒಂದು ಕಾರು, ಎರಡು ಲ್ಯಾಪ್‌ಟಾಪ್ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಉಪಯೋಗಿಸುತ್ತಿದ್ದ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಹೇಳಿದರು.

ನಗರದಲ್ಲಿಂದು ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆ.15ರಂದು ಶಿವಮೊಗ್ಗ ನಗರದಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನ ಮೇಲೆ ಮುಸ್ಲಿಂ ಯುವಕರು ಚಾಕುವಿನಿಂದ ಹಲ್ಲೆ ಮಾಡಿ ಕೊಲ್ಲಲು ಪ್ರಯತ್ನಿಸಿದ್ದು, ಈ ಕುರಿತಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾ ಕಾಲದಲ್ಲಿ 4 ಜನ ಆರೋಪಿತರನ್ನು ದಸ್ತಗಿರಿ ಮಾಡಲಾಗಿತ್ತು. ನಂತರ ತನಿಖೆ ಮುಂದುವರೆದು, ಸದರಿ ಪ್ರಕರಣದಲ್ಲಿ ತೀರ್ಥಹಳ್ಳಿಯ ನಿವಾಸಿಯಾಗಿರುವ ಶಾರೀಕ್ ಬಿನ್ ಅಬ್ದುಲ್ ಮಜೀದ್ ಎಂಬ ವ್ಯಕ್ತಿಯ ಪಾತ್ರ ಇರುವ ಬಗ್ಗೆ ಕಂಡುಬಂದಿದ್ದು ಹಾಗೂ ಶಾರೀಕ್‌ನ ಸಹಚರರು ಮಾಜ್ ಮತ್ತು ಯಾಸೀನ್ ಎಂದು ತಿಳಿದು ಬಂದಿರುತ್ತದೆ ಎಂದರು.

ಆರೋಪಿಗಳಾದ ಶಾರೀಕ್, ವಾಜ್ ಮತ್ತು ಸೈಯ್ಯದ್ ಯಾಸೀನ್ ಅವರ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಮತ್ತು ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು. ಶಾರೀಕ್ ಇತನು 2020ರಲ್ಲಿ ಮಂಗಳೂರಿನ ಗೋಡೆ ಬರಹದ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದು,ದಸ್ತಗಿರಿಯಾಗಿ ಸುಮಾರು 8ತಿಂಗಳವರೆಗೆ ಜೈಲಿನಲ್ಲಿ ಇದ್ದು ಫೆಬ್ರವರಿ 2021 ಬಿಡುಗಡೆಯಾಗಿರುತ್ತಾನೆ.

ಸದರಿ ದೊಡ್ಡಪೇಟೆಯ ತನಿಖಾಧಿಕಾರಿಯವರ ವರದಿ ಮತ್ತು ಪಿಠಾದಿ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಿಷೇ ದಿತ ಉಗ್ರ ಸಂಘಟನೆ ಇಸ್ಲಾಂಮಿಕ್ ಸ್ಟೇಟ್ (ಐ.ಎಸ್.ಐ.ಎಸ್) ಭಯೋತ್ಪಾದಕ ಕೃತ್ಯಗಳನ್ನು ಮುಂದುವರಿಸುವ ಸಲು ವಾಗಿ ಒಳಸಂಚು ಮಾಡಿಕೊಂಡು, ದೇಶದ ಐಕ್ಯತೆ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ದಕ್ಕೆಯನ್ನುಂಟು ಮಾಡುವುದಕ್ಕಾಗಿ ಕಾನೂನು ಬಾಹಿರವಾಗಿ ಮತ್ತು ಉದ್ದೇಶಪೂರ್ವಕವಾಗಿ ಸಾರ್ವಜನಿಕ ಆಸ್ತಿ ಮತ್ತು ಪ್ರಾಣಕ್ಕೆ ಅಪಾಯವಾಗುವ ಸ್ಫೋಟಕಗಳನ್ನು ಇಟ್ಟುಕೊಂಡಿರುವ ಬಗ್ಗೆ ಹಾಗೂ ಭಾರತದ ರಾಷ್ಟ್ರಧ್ವಜವನ್ನು ಸುಟ್ಟಿರುವ ವಿಷಯವಾಗಿ ಕಾನೂನು ರೀತ್ಯಾ ಪ್ರಕರಣ ದಾಖಲಾಗಿದೆ ಎಂದರು.

ಆರೋಪಿಗಳಾದ ಈ ಮೂವರು ಶಿವಮೊಗ್ಗದ ತುಂಗಾನದಿಯ ದಡದಲ್ಲಿರುವ ಸ್ಥಳೀಯವಾಗಿ ಕೆಮ್ಮನಗುಂಡಿ ಎಂದು ಕರೆಯುವ ಜಾಗದಲ್ಲಿ ತಾವು ತಯಾರಿಸಿದ ಬಾಂಬ್‌ನ್ನು ಪ್ರಾಯೋಗಿಕವಾಗಿ ಸ್ಫೋಟ ಮಾಡಿರುತ್ತಾರೆ ಹಾಗೂ ಪ್ರಾಯೋಗಿಕವಾಗಿ ಮಾಡಿರುವ ಸ್ಫೋಟವು ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಜಿಹಾದ್ ಮಾಡಲು ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿ ಇಟ್ಟಿರುತ್ತಾರೆ.

ಸ್ವಾತಂತ್ರ್ಯ ದಿನಾಚರಣೆಯ ನಂತರದ ದಿನಗಳಲ್ಲಿ ಭಾರತ ದೇಶದ ರಾಷ್ಟ್ರ ಧ್ವಜವನ್ನು ಬಾಂಬ್ ಸಿಡಿಸಿದ ಜಾಗದ ಹತ್ತಿರ ಸುಟ್ಟು ಹಾಕಿ ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿರುತ್ತಾರೆ, ಮತ್ತು ಬಾಂಬ್ ತಯಾರಿಸಲು ಬೇಕಾದ ಹಣವನ್ನು ಸಾರೀಕ್‌ನು ಆನ್‌ಲೈನ್ ಮುಖಾಂತರ ಯಾಸಿ ನ್‌ಗೆ ಕಳುಹಿಸಿರುತ್ತಾನೆ ಎಂದು ತಿಳಿಸಿದರು.

ಉಗ್ರ ಸಂಘಟನೆ ಇಸ್ಲಾಂಮಿಕ್ ಸ್ಟೇಟ್ (ಐ.ಎಸ್.ಐ.ಎಸ್) ನ ಭಯೋತ್ಪಾದಕ ಕೃತ್ಯಗಳನ್ನು ಮುಂದುವರೆಸಲು ಆರೋಪಿಗಳು ಯೋಜಿಸಿದ್ದು, ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಬರೀ ಬ್ರಿಟೀಷರ ಆಡಳಿತದಿಂದ ಮಾತ್ರ ಆದರೆ ನಮಗೆ ನಿಜವಾದ ಸ್ವಾತಂತ್ರ್ಯ ಸಿಗಬೇಕಾದರೆ ಈಗ ಇರುವ ಭಾರತದ ವ್ಯವಸ್ಥೆಯ ವಿರುದ್ಧ ಯುದ್ಧ ಸಾರಿ ಬಿಲಾಫತ್ ಸ್ಥಾಪಿಸಬೇಕಾಗಿರುತ್ತದೆ ಮತ್ತು ಷರಿಯಾ ಕಾನೂನು ಜಾರಿಗೊಳಿಸಬೇಕಾಗಿರುತ್ತದೆ. ಎಂಬ ವಿಚಾರಧಾರೆಯನ್ನು ಹೊಂದಿರುತ್ತಾರೆ. ಈ ವಿಚಾರಧಾರೆಗೆ ಅನುಗುಣವಾಗಿ ಇಸ್ಲಾಂಮಿಕ್ ಸ್ಟೇಟ್ (ಐ.ಎಸ್.ಐ.ಎಸ್) ಕಾರ್ಯನಿರ್ವಹಿಸುತ್ತಿರುತ್ತದೆ ಹಾಗೂ ಇಸ್ಲಾಂ ಧರ್ಮವನ್ನು ಉನ್ನತಿಗೇರಿಸುವ ಸಲುವಾಗಿ ಜಿಹಾದ್ ಮೂಲಕ ಉಫಿಗಳ ವಿರುದ್ಧ ಯುದ್ಧ ಸಾರುತ್ತಿರುತ್ತಾರೆ. ಇದೇ ರೀತಿಯಾಗಿ ಆರೋಪಿಗಳು ಕೂಡಾ ಅವರು ನಂಬಿದಂತೆ ಖಾಫಿರ್‌ಗಳ ವಿರುದ್ಧ ಜಿಹಾದ್, ಕೆಲಸವನ್ನು ಮಾಡಲು ಇಚ್ಚಿಸಿದ್ದು, ಆದಕ್ಕೋಸ್ಕರ ಸ್ಫೋಟಕಗಳನ್ನು ತಯಾರಿಸಲು ಬೇಕಾದ ಸಾಮಾಗ್ರಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುತ್ತಾರೆ ಎಂದು ಮಾಹಿತಿ ನೀಡಿದರು.

ಪ್ರಕರಣದ ತನಿಖೆಯ ಸಮಯದಲ್ಲಿ ತನಿಖಾಧಿಕಾರಿ ಗಳಾದ ಶಾಂತವೀರ ಡಿ.ವೈ.ಎಸ್.ಪಿ ತೀರ್ಥಹಳ್ಳಿ ರವರು ಎ೩-ಸೈಯದ್ ಯಾಸಿನ್‌ನನ್ನು ಹಾಗೂ ಎ2 ಮಾಜ್ ರವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ದಸ್ತಗಿರಿ ಮಾಡಲಾಯಿತು. ಹಾಗೂ ಇಬ್ಬರು ಆರೋಪಿತರನನ್ನು ಆ.20ರಂದು ನ್ಯಾಯಾಲಯದಲ್ಲಿ ಹಾಜರುಪಡಿಸಿ ತನಿಖೆ ಕುರಿತು 7 ದಿವಸ ಕಾಲ ಪೊಲೀಸ್ ವಶಕ್ಕೆ ಪಡೆದಿರುತ್ತಾರೆ. ಸೈಯದ್ ಯಾಸಿನ್‌ನು ಪಿ.ಯು.ಸಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಆತನ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.

ಮಾಜ್ ಮುನೀರ್ ಅಹಮ್ಮದ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಮಾಜ್ ಮುನೀರ್ ಅಹಮ್ಮದ್‌ನ ಮುಖಾಂತರ ಯಾಸಿನ್‌ಗೆ ಶಾರೀಕ್‌ನ ಪರಿಚಯವಾಯಿತು. ತಾನು ಮಾಜಿ ಮತ್ತು ಶಾರೀಕ್ ಬೇಟಿಯಾದಗಲ್ಲೆಲ್ಲಾ ಶಾರೀಕ್‌ನು ಮತ್ತು ಮಾಜಿ ಮುಸ್ಲಿಂ ಮೂಲಭೂತವಾದದ ಬಗ್ಗೆ ಮಾತನಾಡುತ್ತಿದ್ದನು. ಮತ್ತು ಯಾಸಿನ್‌ನ ಮೊಬೈಲ್‌ಗೆ ಮುಸ್ಲಿಂ ಉಗ್ರವಾದಿಗಳಿಗೆ ಸಂಬಂದಿಸಿದ ಮತ್ತು ಇಸ್ಲಾಂಗೆ ಸಂಬಂಧಿಸಿದ ಪಿ.ಡಿ.ಎಫ್, ಪೈಲ್‌ಗಳನ್ನು, ವಿಡಿಯೋ-ಆಡಿಯೋಗಳನ್ನು ಮತ್ತು ಅವುಗಳ, ಲಿಂಕ್‌ಗಳನ್ನು ಟಿಲಿಗ್ರಾಂ, ಇನ್ನಾ ಗ್ರಾಮ್, ವೈಲ್, ಎಲಿಮೆಂಟ್, ಪಿಕ್ಚರ್, ಇತ್ಯಾದಿ ಮೆಸೆಂಜರ್‌ಗಳನ್ನು ಕಳುಹಿಸುತ್ತಿದ್ದನು ಎಂದು ಹೇಳಿದರು.

ಜಾಹಿರಾತು

LEAVE A REPLY

Please enter your comment!
Please enter your name here