ಶತಾಯುಷಿ ಅಜ್ಜಿ ಸೇರಿದಂತೆ ಹಿರಿಯರಿಗೆ ಸನ್ಮಾನ

0
1601

ಹೊಸನಗರ: ತಾಲ್ಲೂಕಿನ ಹಾರೆಕೊಪ್ಪದ ವಾಸಿ ಶೇಷಜ್ಜಿಯವರಿಗೆ 104 ವರ್ಷಗಳಾಗಿದ್ದು ಇವರ ಕೆಲಸವನ್ನು ಇವರೆ ಮಾಡಿಕೊಂಡು ಗಟ್ಟಿಯಾಗಿರುವುದನ್ನು ಮನಗಂಡು ತಾಲ್ಲೂಕು ಮೇಲಿನಬೆಸಿಗೆ ಗ್ರಾಮಸ್ಥರು ಫಾತೀಮಾರವರ ನೇತೃತ್ವದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಅದ್ಧೂರಿಯಾಗಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು.

ಇವರ ಜೊತೆಗೆ ಗ್ರಾಮದ ಹಿರಿಯರಾದ ಉಮೇಶ್, ಸಾಲಗೇರಿ ಧರ್ಮಯ್ಯಗೌಡ, ರಾಮಣ್ಣ ಪೂಜಾರ್, ಯಲ್ಲಪ್ಪ ಆಚಾರ್, ದೇವಪ್ಪಗೌಡ, ಮಹಾದೇವಮ್ಮ ಎರಗಿ ಹುಚ್ಚನಾಯ್ಕರವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು.

ಈ ಸಂದರ್ಭದಲ್ಲಿ ಹೊಸನಗರ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ಹಾಲಗದ್ದೆ ಉಮೇಶ್, ಜಯನಗರ ಅರಣ್‌ಕುಮಾರ್, ಏಜೆಂಟ್ ಯಲ್ಲಪ್ಪ, ಮಹಮದ್ ರೈಸ್, ನಾಗೇಶ್ ಪೈ, ನವೀನ್, ಗುರುಪ್ರಸಾದ್, ಹಾಲಪ್ಪ, ಸಂತೋಷ, ಭಾಸ್ಕರ ವಾರಂಬಳ್ಳಿ, ಹರೀಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here