20.6 C
Shimoga
Friday, December 9, 2022

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮೀಸಲಾಗಿದ್ದ ಭೂಮಿ ಡಿನೋಟಿಫಿಕೇಶನ್‌ | ಕೇಂದ್ರ ಅರಣ್ಯ ಸಚಿವರ ಜೊತೆ ನಾಳೆ ಚರ್ಚೆ ; ಬಿವೈಆರ್

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತ್ರರಿಗೆ ಮೀಸಲಾಗಿದ್ದ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿದ್ದ ಹಿಂದಿನ ಸರಕಾರದ ಆದೇಶವನ್ನು ರದ್ದು ಮಾಡಿರುವ ಬಗ್ಗೆ  ನಾಳೆ ಬೆಳಿಗ್ಗೆ ದೆಹಲಿಯಲ್ಲಿ ಅರಣ್ಯ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ. 

ಶರಾವತಿ ಮುಳುಗಡೆ ರೈತರು ಭೇಟಿಯಾಗಿ ಸರ್ವೋಚ್ಛ ನ್ಯಾಯಾಲಯ ಡಿನೋಟಿಫಿಕೇಷನ್ ರದ್ದು ಮಾಡಿರುವ ಬಗ್ಗೆ ಮಂಗಳವಾರ ಜಿಪಂ ನಲ್ಲಿನ ಸಭೆಯೊಂದಕ್ಕೆ ಸಂಸದರು ಆಗಮಿಸಿದ್ದ  ವೇಳೆ ಅವರೊಂದಿಗೆ ಚರ್ಚಿಸಿದ ನಂತರ  ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಯಡಿಯೂರಪ್ಪ ಅವರು ಪ್ರಧಾನಿಯವರ ಅಪಾಯಿಂಟ್‌ಮೆಂಟ್ ಪಡೆದಿದ್ದಾರೆ.  ಈ ಸಮಸ್ಯೆ ಬಗ್ಗೆ ಚರ್ಚಿಸಲಾಗುವುದು. ನಿರಾಶ್ರಿತರಾರೂ ಹೆದರುವ ಅವಶ್ಯಕತೆ ಇಲ್ಲ. ಮುಳುಗಡೆ ಸಂತ್ರಸ್ತ್ರ ಸಮಸ್ಯೆ ಚರ್ಚಿಸಿ ಕೇಂದ್ರದ ಒಪ್ಪಿಗೆ ಪಡೆದು ಸರಿಪಡಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಮ್ಯುಟೇಷನ್, ಪಹಣಿ ರದ್ದತಿಗೆ ನ್ಯಾಯಾಲಯ ಆದೇಶ ನೀಡಿರುವುದು ಸರಿಯಲ್ಲ. ಈ ಬಗ್ಗೆ ಗಮನ ಹರಿಸಬೇಕೆಂದು ರೈತರು ಸಂಸದರಿಗೆ ಮನವಿ ಮಾಡಿಕೊಂಡರು. ಈ ಹಿಂದೆ ಶಿವಮೊಗ್ಗಕ್ಕೆ ಬಂದಿದ್ದ ಸಿಎಂ ಬೊಮ್ಮಾಯಿ ಸಂತ್ರಸ್ತ್ರರಿಗೆ ಭರವಸೆ ನೀಡಿ 6 ತಿಂಗಳಲ್ಲಿ ಕೇಂದ್ರದ ಅನುಮತಿ ಕೊಡಿಸಿ ಹಕ್ಕು ನೀಡುವುದಾಗಿ ಎಂದು ತಿಳಿಸಿದ್ದರು. ಆದರೆ ಆಗಿಲ್ಲ ಎಂದು ದೂರಿದರು.

ಈ ವೇಳೆ ಮಾತನಾಡಿದ ಸಂಸದರು, ಅಧಿಕಾರಿಗಳಿಂದ ಆಗಿರುವ ತಪ್ಪಿನಿಂದಾಗಿ ಈ ಆದೇಶವಾಗಿದೆ. 31 ಅರಣ್ಯ ಭಾಗದಲ್ಲಿ ರಾಜ್ಯ ಸರ್ಕಾರ ತೀರ್ಮಾನಿಸಿ ಡಿನೋಟಿಫಿಕೇಷನ್ ಮಾಡಲಾಗಿತ್ತು. ಆದರೆ, ಇದನ್ನು ಪ್ರಶ್ನಿಸಿ ಶೆಟ್ಟಿಹಳ್ಳಿ ಅರಣ್ಯದ ಸಂಬಂಧ ಸುಪ್ರೀಂಕೋರ್ಟ್ ಗೆ ರಿಟ್ ಪಿಟಿಷನ್‌ನನ್ನು ಹೊಸನಗರದ ಗಿರೀಶ್ ಆಚಾರ್ ಹಾಕಿ, ಕೇಂದ್ರದ ಒಪ್ಪಿಗೆ ಪಡೆದು ಡಿನೋಟಿಫಿಕೇಶನ್ ಮಾಡಬೇಕಿತ್ತು. ಅದನ್ನ ಮಾಡಲಿಲ್ಲ ಎಂದು ಕೋರಿ ಅರ್ಜಿ ಸಲ್ಲಿಸಿದ್ದರು ಎಂದರು.

2016 ರಲ್ಲಿ ಡಿನೋಟಿಫೈ ಮಾಡಲಾಗಿದೆ. ಆದರೆ ಕೇಂದ್ರದ ಅನುಮತಿ ಪಡೆಯದೆ ಕ್ರಮ ಕೈಗೊಳ್ಳಲಾಗಿದೆ. ಅವರ ವಾದ ಸರಿಯಿದೆ. ಅತಿಕ್ರಮಣವಾಗಿಲ್ಲ ಆದರೆ ಹೋದ ದಾರಿ ಕಾನೂನಾತ್ಮಕವಾಗಿಲ್ಲ. ಏನೇ ಇದ್ದರೂ ಅರಣ್ಯ ಸಚಿವರ ಜೊತೆ ಕುಳಿತು ಸಮಗ್ರವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಇದಕ್ಕೆ ಸಂತ್ರಸ್ತರು ಭಯಪಡಬೇಕಾದ್ದೇನಿಲ್ಲ ಎಂದು ಸಮಾಧಾನಿಸಿದರು. 

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!