23.2 C
Shimoga
Sunday, November 27, 2022

ಶಾಂತಿ ಸಹಬಾಳ್ವೆಯೆ ಕ್ರಿಶ್ಚಿಯನ್ ಮಂತ್ರವಾಗಿದೆ ; ಸಚಿವ ಆರಗ ಜ್ಞಾನೇಂದ್ರ

ರಿಪ್ಪನ್‌ಪೇಟೆ: ಕ್ರಿಶ್ಚಿಯನ್ ಸಮುದಾಯದವರು ಸದಾ ಶಾಂತಿ ಸಹಬಾಳ್ವೆಯೊಂದಿಗೆ ಅರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಸರ್ವಧರ್ಮೀಯರಲ್ಲಿ ಸಮಾನತೆ ಸಹೋದರತ್ವವನ್ನು ಕಾಣುವುದರೊಂದಿಗೆ ತಮ್ಮ ಧರ್ಮದ ಸಂಘಟನೆಯನ್ನು ಬೆಳೆಸಿಕೊಂಡವರು ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೆಂದ್ರ ಹೇಳಿದರು.


ರಿಪ್ಪನ್‌ಪೇಟೆಯ ತೀರ್ಥಹಳ್ಳಿ ರಸ್ತೆಯಲ್ಲಿ ನಾಳೆ ಲೋಕಾರ್ಪಣೆಗೊಳ್ಳುವ ಗುಡ್‌ಶಫರ್ಡ್ ಚರ್ಚ್ ನವೀಕರಣ ಕೇಂದ್ರಕ್ಕೆ ಭೇಟಿ ನೀಡಿ ಧರ್ಮಗುರುಗಳ ಜೊತೆ ಸಮಾಲೋಚನೆ ನಡೆಸಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಚಿಕ್ಕವನಿದ್ದಾಗ 7ನೇ ತರಗತಿ ಉತ್ತೀರ್ಣಾನಾಗಿ ಇನ್ನೂ ಹೈಸ್ಕೂಲ್‌ಗೆ ಸೇರುವುದಿಲ್ಲ ಇಲ್ಲಿಗೆ ನನ್ನ ವಿದ್ಯಾಭ್ಯಾಸ ಮುಗಿಯಿತು ಎಂದುಕೊಂಡಿರುವಾಗಲೇ ನನಗೆ ಸ್ಪೂರ್ತಿ ನೀಡಿದವರು ಕ್ರಿಶ್ಚಿಯನ್ ಶಿಕ್ಷಕಿ. ಆಗ ನನಗೆ ನಮ್ಮೂರಿನ ನಾಗರಾಜ್ ರಾವ್ ಎಂಬುವವರು ನನ್ನ ಪರಿಚಯ ಕೇಳಿ 25 ರೂ. ಗಳನ್ನು ಕೊಟ್ಟು ನಾಳೆಯೇ ಕೋಣಂದೂರು ಹೈಸ್ಕೂಲ್‌ಗೆ ಸೇರುವಂತೆ ಒತ್ತಡಹಾಕಿ ಕಳುಹಿಸಿದರು. ನಂತರದಲ್ಲಿ ನನ್ನ ಕುಟುಂಬದ ಒಡೆತನವನ್ನು ನೋಡದೆ ಓದಿನಲ್ಲಿ ಆಸಕ್ತನಾಗಿರುವ ಕಾರಣ ನಾನು ಈ ಮಟ್ಟದಲ್ಲಿ ಬೆಳೆಯಲು ಕಾರಣವಾಯಿತು ಎಂದು ಶಿಕ್ಷಕಿಯ ಮುಂದಾಲೋಚನೆಯನ್ನು ಸ್ಮರಿಸಿದರು.


ಎಚ್ಚರಿಕೆಯಿಂದ ಪಟಾಕಿ ಸಿಡಿಸಿ:

ದೀಪಾವಳಿಯ ಸಂಭ್ರಮಾಚರಣೆಯಲ್ಲಿ ಹೆಚ್ಚು ಪಟಾಕಿಯನ್ನು ಸಿಡಿಸುವುದರಿಂದಾಗಿ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದು ಅಲ್ಲದೆ ಮಕ್ಕಳು ಎಚ್ಚರಿಕೆ ವಹಿಸುವಂತೆ ಪೋಷಕರು ಜಾಗೃತಿ ವಹಿಸಬೇಕು ಎಂದು ಕಿವಿ ಮಾತು ಹೇಳಿ ಹಬ್ಬದ ಸಡಗರದಲ್ಲಿ ನೋವು ಅನುಭವಿಸಬೇಕಾಗುವುದೆಂಬ ಬಗ್ಗೆ ನಾವು ಎಚ್ಚರ ವಹಿಸಬೇಕು ಎಂದರು.


ಈ ಸಂದರ್ಭದಲ್ಲಿ ಗುಡ್‌ಶಫರ್ಡ್ ಫೂರಾನ ಚರ್ಚ್ ಧರ್ಮಗುರು ರೆ.ಪಾ.ಬಿನೋಯಿ ಸಚಿವರನ್ನು ಶಾಲು ಹಾಕಿ ಸನ್ಮಾನಿಸಿದರು.


ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮಿ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಮುಖಂಡರಾದ ಆರ್.ಟಿ.ಗೋಪಾಲ್, ಎನ್.ಸತೀಶ್, ಪಿ.ರಮೇಶ್, ವನಮಾಲ, ಸುಧೀಂದ್ರ ಪೂಜಾರಿ, ಅರ್.ಎಲ್.ನಿರೂಪ್, ಕಗ್ಗಲಿ ಲಿಂಗಪ್ಪ, ವರ್ಗೀಸ್‌ ಕೆಂಚನಾಲ, ಸಾಜಿ ಬರುವೆ, ಜೋಮಿ ಮ್ಯಾಥ್ಯೂಸ್, ಸಬ್ಬಾಸ್ಟಿನ್ ಮಾಥ್ಯೂಸ್ ಇನ್ನಿತರರು ಸಮಾಜದ ಮುಖಂಡರು ಪಾಲ್ಗೊಂಡಿದ್ದರು.


ಸಬಾಸ್ಟಿನ್ ಮಾಥ್ಯೂಸ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.


ನಿಧನವಾರ್ತೆ :

ರಿಪ್ಪನ್‌ಪೇಟೆ: ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಕಲಾಕೌಸ್ತುಭ ಕನ್ನಡ ಸಂಘದ ಸೇವಾಕರ್ತನಾಗಿ ಸಾಮಾಜಿಕ ಕಾರ್ಯಕರ್ತನಾಗಿದ ನಿತ್ಯಾನಂದ ಹೆಗಡೆ ಅನಾರೋಗ್ಯದಿಂದ ಬಳಲುತ್ತಿದ್ದು ಸೋಮವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.

ನಿತ್ಯನಂದ ಹೆಗಡೆ ಅಕಾಲಿಕ ನಿಧನಕ್ಕೆ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಸಮಿತಿಯ ಅಧ್ಯಕ್ಷ ವೈ.ಜೆ.ಕೃಷ್ಣಪ್ಪ, ಎಂ.ಬಿ.ಮಂಜುನಾಥ, ಸುಧೀಂದ್ರ ಪೂಜಾರಿ, ಹೆಚ್.ಎನ್.ಚೋಳರಾಜ್, ಶಬರಿ ಹೋಟೆಲ್‌ನ ಪ್ರಕಾಶ್ ಶೆಟ್ಟರು, ಪಿ.ಸುಧೀರ್, ಆರ್.ರಾಘವೇಂದ್ರ, ಹೆಚ್.ಎನ್.ಜಯದೇವ, ಮುರಿಗೆಪ್ಪ ದೂನ, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!