ರಿಪ್ಪನ್ಪೇಟೆ: ಇಲ್ಲಿನ ಚೌಡೇಶ್ವರಿ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಂಭಾಗದಲ್ಲಿ ಭಾರಿ ಮಳೆಯಿಂದಾಗಿ ರಸ್ತೆಯಂಚಿನಲ್ಲಿ ಭೂ ಕುಸಿತವಾಗಿದ್ದು ಸುಮಾರು ಐದು ಅಡಿಯ ಹೊಂಡ ಬಿದ್ದಿದ್ದು ಇದರಿಂದಾಗಿ ಶಾಲಾ ಮಕ್ಕಳ ಮತ್ತು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಈ ರಸ್ತೆ ಸಂಪೂರ್ಣ ನಾದರಸ್ತಾಗಿದ್ದು ಇದನ್ನು ಇತ್ತೀಚೆಗೆ ಶಾಸಕ ವಿಶೇಷ ಅನುದಾನದಡಿಯಲ್ಲಿ ಸುಸಜ್ಜಿತ ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲಾಗಿದ್ದು ರಸ್ತೆಯ ಅಕ್ಕ ಪಕ್ಕದ ಸುಮಾರು ಐದು ಅಡಿ ಆಳದ ಚರಂಡಿ ನಿರ್ಮಿಸಲಾಗಿ ಆ ಚರಂಡಿ ಸಂಪೂರ್ಣವಾಗಿ ಕುಸಿದು ಹೋಗಿ ಈಗ ಕಾಂಕ್ರೀಟ್ ರಸ್ತೆಯಂಚಿನಲ್ಲಿ ಐದು ಅಡಿ ಆಳದ ಹೊಂಡ ಬಿದ್ದಿರುವುದರಿಂದ ರಸ್ತೆಯೂ ಎಲ್ಲಿ ಕುಸಿಯುತ್ತದೋ ಎಂಬ ಭಯ ಕಾಡುವಂತಾಗಿದೆ.
ಇನ್ನಾದರೂ ಸ್ಥಳೀಯ ಗ್ರಾಮಾಡಳಿತ ತಕ್ಷಣ ಗಮನಹರಿಸಿ ಶಾಲಾ ಮುಂಭಾಗದ ಭೂ ಕುಸಿತದ ಹೊಂಡವನ್ನು ಮುಚ್ಚುವರೆ ಕಾದು ನೋಡಬೇಕಾಗಿದೆ.
Related