23.2 C
Shimoga
Sunday, November 27, 2022

ಶಾಲೆಗೆ ತೆರಳಿದ್ದ ಬಾಲಕಿ ಅಪಹರಣ ಯತ್ನ !

ತೀರ್ಥಹಳ್ಳಿ : ತಾಲೂಕಿನ ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಮೇಲಿನಕುರುವಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಇಂದು ಸಂಜೆ ಶಾಲೆಯಿಂದ ಮನೆಗೆ ತೆರಳುತ್ತಿದ ಬಾಲಕಿಯನ್ನು ಓಮ್ನಿ ಕಾರಿನಲ್ಲಿ ಬಂದ ನಾಲ್ಕರಿಂದ ಐದು ಜನರ ತಂಡ ಶಾಲೆಯ ಸಮೀಪದಲ್ಲೇ ಆರನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಓಮ್ನಿ ಕಾರಿನಲ್ಲಿ ಬಲವಂತವಾಗಿ ಹೊತ್ತೊಯ್ಯಲು ಪ್ರಯತ್ನಿಸಿರುವ ದುರ್ಘಟನೆ ನಡೆದಿದೆ.

ಕಲ್ಲು ಎಸೆದ ವಿದ್ಯಾರ್ಥಿ :

ಇದನ್ನು ನೋಡಿದ ಅದೇ ಶಾಲೆಯ ಅಕುಲ್ ಎಂಬಾತ ವಿದ್ಯಾರ್ಥಿ ಬಾಲಕಿನ್ನು ಹೊತ್ತೊಯ್ಯಲು ಬಂದಿದ್ದ ತಂಡದವರ ಮೇಲೆ ಕಲ್ಲು ಎಸೆದು ಕೂಗಾಡಿದ್ದಾನೆ. ಅಕುಲ್ ಕೂಗಾಟಕ್ಕೆ ಅಕ್ಕಪಕ್ಕದ ಜನರು ಓಡಿ ಬಂದ ಕಾರಣ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳ ತಂಡ ಬಿಟ್ಟು ಪರಾರಿಯಾಗಿದೆ.

ಕಾರಿನಲ್ಲಿ ಸುಮಾರು 25ರ ವಯೋಮಾನದ, ಮುಖಕ್ಕೆ ಕಪ್ಪುಬಟ್ಟೆಕಟ್ಟಿಕೊಂಡಿದ್ದ ಐದು ಮಂದಿ ಇದ್ದರು ಎನ್ನಲಾಗಿದೆ. ಇಬ್ಬರು ವಿದ್ಯಾರ್ಥಿಗಳ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ದುರ್ಘಟನೆಯೊಂದು ಸ್ವಲ್ಪದರಲ್ಲಿ ತಪ್ಪಿದೆ. ಈ ಘಟನೆಯಿಂದ ಬಾಲಕಿ ಪೋಷಕರಲ್ಲಿ ಭೀತಿ ಮೂಡಿಸಿದೆ. ಆರೋಪಿಗಳಿದ್ದ ಕಾರು ಎರಡು ಮೂರು ಬಾರಿ ಸಂಚರಿಸಿದ ದೃಶ್ಯ ಮೇಲಿನಕುರುವಳ್ಳಿಯಲ್ಲಿ ಮಂಜು ಟೈಲ್ಸ್‌ ಮಳಿಗೆಯ ಸಿ.ಸಿ. ಟಿವಿಯಲ್ಲಿ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ವಿದ್ಯಾರ್ಥಿಯೊಬ್ಬನ ಚಾಣಾಕ್ಷತನ ಮತ್ತು ಸಾಹಸದಿಂದ ಭಾರಿ ಅನಾಹುತವೊಂದು ತಪ್ಪಿದೆ.

ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!