ಶಾಲೆಯ ಶಿಸ್ತನ್ನು ಕಾಪಾಡುವ ಹೊಣೆ ಹೊತ್ತ ಶಿಕ್ಷಕರೇ ಅಶಿಸ್ತಿನಿಂದ ವರ್ತಿಸಿದರೆ ಇನ್ನೂ ವಿದ್ಯಾರ್ಥಿಗಳ ಪಾಡೇನು ?

0
1159

ಹೊಸನಗರ: ಶಿಕ್ಷಣ ಎಂದರೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಓದು ಬರಹ ಹಾಗೂ ಶಿಸ್ತುಬದ್ಧವಾಗಿರುವಂತೆ ಮಾಡುವುದಕ್ಕೆ ಶಿಕ್ಷಣ ಎಂದು ಹೇಳಲಾಗುವುದು. ಗುರುಗಳಾದವರು ತಮ್ಮ ತಮ್ಮ ವಿದ್ಯಾರ್ಥಿಗಳು ಸರಿಯಾಗಿ ಶಿಕ್ಷಣ ಪಡೆಯದಿದ್ದಲ್ಲಿ, ಏನಾದರು ತಪ್ಪು ಮಾಡಿದಲ್ಲಿ ಅವರನ್ನು ತಿದ್ದಿ ತೀಡಿ ಸರಿದಾರಿಯಲ್ಲಿ ನಡೆಸುವ ಅಥವಾ ಅವರಿಗೆ ಶೈಕ್ಷಣಿಕವಾಗಿ ತಮ್ಮನ್ನು ತಾವು ಬೆಳೆಸಿಕೊಳ್ಳುವ ದಾರಿ ತೋರುವುದಲ್ಲದೇ, ವಿದ್ಯಾರ್ಥಿಗಳಿಗೆ ದೇಶದ ಸತ್ಪ್ರಜೆಯಾಗಿಸುವುದು ಶಿಕ್ಷಕರ ಹೊಣೆಯಾಗಿದೆ. ಇಂತಹ ಮಹತ್ವದ ಶಿಕ್ಷಣ ನೀಡುವ ಶಿಕ್ಷಕರೇ ಶಾಲೆಯ ಶಿಸ್ತನ್ನು ಪ್ರತಿಪಾದಿಸಿದ್ದರೆ ಆ ಶಾಲೆಯ ವಿದ್ಯಾರ್ಥಿಗಳು ಶಿಸ್ತನ್ನು ಹಾಗೂ ಶಿಕ್ಷಣ ಪಡೆದುಕೊಳ್ಳುವುದು ಹೇಗೆ ಸಾಧ್ಯ?

ಹೌದು ಇಂತಹದೊಂದು ಅಶಿಸ್ತಿನ ವಾತಾವರಣವು ಹೊಸನಗರ ತಾಲ್ಲೂಕಿನಲ್ಲಿದೆ. ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಸೇರಿದಂತೆ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಒಟ್ಟಾರೆ ನಾಲ್ಕು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಈ ಶಾಲೆಯಲ್ಲಿ ಆರು ಖಾಯಂ ಒಬ್ಬರು ನಿಯೋಜಿತರು, ನಾಲ್ಕು ಜನ ಅತಿಥಿ ಶಿಕ್ಷಕರು ಹಾಗೂ ನಾಲ್ಕು ಜನ ಗೌರವ ಶಿಕ್ಷಕರು ಸೇರಿದಂತೆ ಒಟ್ಟು ಹದಿನೈದು ಶಿಕ್ಷಕರಿದ್ದಾರೆ. ಗೌರವ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ಶಾಲೆಯ ಎಸ್ಡಿಎಂಸಿ ಸಮಿತಿ ವತಿಯಿಂದ ನೇಮಕ ಮಾಡಲಾಗಿದೆ.

ಅದೇನೇ ಇರಲಿ ಈ ಶಾಲೆಯ ಹಿಂದಿ ಭಾಷೆಗೆ ಸಂಬಂಧಿಸಿದ ಶಿಕ್ಷಕರ ವರ್ತನೆಗೆ ಇಲ್ಲಿನ ಕೆಲವು ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಎಸ್ಡಿಎಂಸಿ ಸಮಿತಿಯ ಅಧ್ಯಕ್ಷರಾದಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಯೂ ಕೂಡ ಬೇಸತ್ತು ಹೋಗಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಈ ಶಿಕ್ಷಕರು ಪ್ರತಿನಿತ್ಯ ಹೊಸನಗರ ತಾಲ್ಲೂಕಿನ ರಿಪ್ಪನಪೇಟೆಯಿಂದ ಪ್ರಯಾಣ ಮಾಡುತ್ತಿದ್ದು, ಇವರು ಪ್ರತಿದಿನ ಬೆಳಗ್ಗೆ ಶಾಲೆಗೆ ಅರ್ಧ ಮುಕ್ಕಾಲು ಗಂಟೆ ತಡವಾಗಿ ಆಗಮಿಸುತ್ತಿದ್ದಾರೆ. ಎಂಬ ದೂರು ಪೋಷಕರಿಂದ, ಎಸ್ಡಿಎಂಸಿ ಸಮಿತಿ ವತಿಯಿಂದ, ಪೋಷಕರಿಂದ ಬರುತ್ತಿದ್ದು, ಇವರ ಈ ನಡೆತೆಗೆ ನೊಂದ ಈ ಶಾಲೆಯ ಶಿಕ್ಷಕರಾಧಿಯಾಗಿ ಅನೇಕರು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇವರ ಬದಲಾವಣೆಗೆ ಮನವಿ ಮಾಡಿದ್ದಾರೆ.

ಸರ್ಕಾರದ ನಿಯಮಾನುಸಾರ ಯಾವುದೇ ಸರ್ಕಾರಿ ನೌಕರರು ತಾವು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಾನದ ಆಸುಪಾಸಿನಲ್ಲಿಯೇ ಇರಬೇಕು ಎಂಬ ನಿಯಮವಿದೆ. ಆದರೆ ಹೊಸನಗರದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಹಿಂದಿ ಭಾಷೆಗೆ ಸಂಬಂಧಿಸಿದ ಶಿಕ್ಷಕರು ಹೊಸನಗರದಿಂದ ಇಪ್ಪತ್ತೆಂಟು ಕಿಲೋ ಮೀಟರ್ ದೂರದಲ್ಲಿರುವ ರಿಪ್ಪನ್‌ಪೇಟೆಯಿಂದ ಶಾಲೆಗೆ ಬರುವುದು ಹೋಗುವುದು ಮಾಡುತ್ತಿದ್ದಾರೆ. ಸರಿ ಸುಮಾರು ಅರವತ್ತೈದರಿಂದ ಎಪ್ಪತ್ತು ಕಿಲೋ ಮೀಟರ್ ದೂರದಲ್ಲಿರುವ ಶಿವಮೊಗ್ಗದಿಂದ ಆಗಮಿಸುವ ಶಿಕ್ಷಕರು ಅಥವಾ ಇನ್ಯಾವುದೋ ಹುದ್ದೆಗಳನ್ನು ಅಲಂಕರಿಸಿದ ಸರ್ಕಾರಿ ನೌಕರರು ತಮ್ಮ ತಮ್ಮ ಇಲಾಖೆಯ ಸಮಯಕ್ಕೆ ಸರಿಯಾಗಿ ಆಗಮಿಸುತ್ತಿರುವಾಗ, ಹತ್ತಿರದಲ್ಲೇ ಇರುವ ರಿಪ್ಪನಪೇಟೆಯಿಂದ ಪ್ರಯಾಣ ಮಾಡುವ ಇವರು ಶಾಲೆಯ ಸಮಯಕ್ಕೆ ಸರಿಯಾಗಿ ಬರದೇ ಶಾಲೆಯ ಗಂಟೆ ಹೊಡೆದು, ರಾಷ್ಟ್ರಗೀತೆ, ಪ್ರಾರ್ಥನೆಯಲ್ಲಾ ಮುಗಿದ ನಂತರ ಆಗಮಿಸುವುದು ಎಂದರೆ ಯಾವ ರೀತಿಯ ನ್ಯಾಯ.

ಒಂದೆಡೆ ರಾಜ್ಯಾದ್ಯಂತ ಖಾಸಗಿ ವಿದ್ಯಾಸಂಸ್ಥೆಗಳ ಆರ್ಭಟದಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿದ್ದರೆ, ಇಲ್ಲಿನ ಎಸ್ಡಿಎಂಸಿ ಸಮಿತಿ ವತಿಯಿಂದ ವಿದ್ಯಾರ್ಥಿಗಳನ್ನು ಉಳಿಸಿಕೊಂಡು ಅವರಿಗೆ ಉತ್ತಮ ಶಿಕ್ಷಣ ನೀಡಲು ಮುಂದಾದರೆ, ಶಾಲೆಯ ಶಿಸ್ತನ್ನು ಕಾಪಾಡುವ ಹೊಣೆ ಹೊತ್ತ ಶಿಕ್ಷಕರೇ ಅಶಿಸ್ತಿನಿಂದ ವರ್ತಿಸಿದರೆ ಇನ್ನೂ ವಿದ್ಯಾರ್ಥಿಗಳ ಪಾಡೇನು ಎಂದು ಪೋಷಕರು, ಈ ಶಾಲೆಯ ಹಲವು ಶಿಕ್ಷಕರು, ಎಸ್ಡಿಎಂಸಿ ಸಮಿತಿಯ ಅಧ್ಯಕ್ಷರು ಸದಸ್ಯರು ಚಿಂತನೆ ನಡೆಸಿದ್ದಾರೆ.

ವರದಿ: ಪುಷ್ಪಾ ಜಾಧವ್
ಜಾಹಿರಾತು

LEAVE A REPLY

Please enter your comment!
Please enter your name here