24.3 C
Shimoga
Friday, December 9, 2022

ಶಾಲೆ ಒಂದು ದೇವಸ್ಥಾನ ವಿದ್ದಂತೆ ; ಶಾಸಕ ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ: ಅನ್ನ ದಾಸೋಹದೊಂದಿಗೆ ಜ್ಞಾನ ದಾಸೋಹವನ್ನು ಮಾಡುವುದರೊಂದಿಗೆ ಮಠಮಾನ್ಯಗಳು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿ ಮಕ್ಕಳನ್ನು ಉದ್ಯೋಗಕ್ಕೆ ಪ್ರೋತ್ಸಾಹಿಸುತ್ತಿದ್ದರು ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.


ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾರೋಹಿತ್ತಲು ಗ್ರಾಮದಲ್ಲಿ ಸುಮಾರು 25 ಲಕ್ಷ ರೂ ವೆಚ್ಚದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಹೆಚ್ಚುವರಿ ಕೊಠಡಿಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ನೀಡುವುದರೊಂದಿಗೆ ಮಕ್ಕಳ ಶೈಕ್ಷಣಿಕ ಮಟ್ಟ ಹೆಚ್ಚುವಂತಾಗಿದೆ.ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು ಪೋಷಕರು ತಮ್ಮ ಮಕ್ಕಳ ಮತ್ತು ಶಿಕ್ಷಕರಲ್ಲಿನ ನ್ಯೂನತೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಸಲಹೆ ನೀಡಿ ಎಸ್.ಡಿ.ಎಂ.ಸಿ ಸಮಿತಿಯವರು ತಿಂಗಳಿಗೊಂದು ಸಭೆ ಕರೆದು ಚರ್ಚಿಸುವುದರೊಂದಿಗೆ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸಹಕಾರಿಯಾಗುವುದೆಂದ ಅವರು, ಶಾಲೆ ಒಂದು ದೇವಸ್ಥಾನವಿದ್ದಂತೆ. ನಾವು ಅಭ್ಯಾಸ ಮಾಡಿದ ಶಾಲೆಯನ್ನು ಮರೆಯದೆ ಶಿರಭಾಗಿ ನಮಿಸಿ ಒಳಗೆ ಹೋಗುವುದು ಬೆಳೆಸಿಕೊಳ್ಳಬೇಕು ಎಂದರು.


ಎಸ್.ಡಿ.ಎಂ.ಸಿ ಅಧ್ಯಕ್ಷ ಜಯಚಂದ್ರ ಅಧ್ಯಕ್ಷತೆ ವಹಿಸಿದ್ದರು.


ಅರಸಾಳು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಲಕ್ಷ್ಮಿ ಸೋಮಶೇಖರ್, ಕ್ಷೇತ್ರಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾಗರಾಜ್, ಗ್ರಾ.ಪಂ.ಸದಸ್ಯ ಯೋಗೇಂದ್ರ,ಉಮೇಶ್‌ ಮಳಿಮಠ, ಚಂದ್ರಕಾಂತ,ಜಿ.ಪಂ.ಮಾಜಿ ಸದಸ್ಯೆ ಎ.ಟಿ.ನಾಗರತ್ನ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಜಿ.ಡಿ.ಮಲ್ಲಿಕಾರ್ಜುನ, ಮೆಣಸೆ ಆನಂದ, ಎನ್.ಸತೀಶ್,ರಾಮಚಂದ್ರ ಹರತಾಳು, ಕೆ.ಬಿ.ಹೂವಪ್ಪ, ಕಿರಿಯ ಅಭಿಯಂತರ ಶಿವಮೂರ್ತಿ, ಮಲ್ಲಿಕಾರ್ಜುನ ಇನ್ನಿತರರು ಹಾಜರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!