ಚಿಕ್ಕಮಗಳೂರು: ನಗರದ ಕೇಂದ್ರ ಬಿಂದು ಆಗಿರು ಕೆ.ಎಸ್.ಆರ್.ಟಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಊಟ ಮಾಡಲು ಒಂದು ಹೋಟೆಲ್ ವ್ಯವಸ್ಥೆ ಇಲ್ಲದೆ ಪರಿಸ್ಥಿತಿ ನಿರ್ಮಾಣ ಆಗಿದೆ.

ಪ್ರಸ್ತುತ ಈಗ ಇರುವ ಹೋಟೆಲ್ ಅನ್ನು ಕಳೆದ ಒಂದೂವರೆ ವರ್ಷದ ಹಿಂದೆ ಉಡುಪಿ ಮೂಲದವರು ಸಾರಿಗೆ ಸಂಸ್ಥೆಯಿಂದ ಬಾಡಿಗೆ ಆಧಾರದಲ್ಲಿ ಪಡೆದುಕೊಂಡ ನಡೆಸುತ್ತಿದ್ದರು ಆದರೆ ಸಂಸ್ಥೆಯು ಕಾಲ ಕಾಲಕ್ಕೆ ಬಾಡಿಗೆ ದರವನ್ನು ದುಪ್ಪಟ್ಟು ಮಾಡಿದ ಪರಿಣಾಮ ದುಪ್ಪಟ್ಟು ದರ ಪಾವತಿ ಮಾಡಲು ಆಗದೆ ಮುಚ್ಚಬೇಕಾಯಿತು. ತದನಂತರ ಕೊರೊನಾ ಸಮಸ್ಯೆಯಿಂದ ಸರ್ಕಾರ ಲಾಕ್ ಡೌನ್ ಜಾರಿ ಮಾಡಿದರ ಪರಿಣಾಮ ಹೋಟೆಲ್ ಉದ್ಯಮ, ಸಾರಿಗೆ ವಾಹನಗಳ ಸಂಚಾರ ಸೇರಿದಂತೆ ಎಲ್ಲಾವು ಸ್ಥಗಿತಗೊಂಡಿತು. ನಂತರ ಸರ್ಕಾರ ಲಾಕ್ ಡೌನ್ ಅನ್ನು ಹಂತ ಹಂತವಾಗಿ ಹಿಂದೆ ಪಡೆದರಿಂದ ವಾಹನ ಸಂಚಾರ, ಹೋಟೆಲ್ ಸೇರಿದಂತೆ ಎಲ್ಲಾ ಉದ್ಯಮಗಳು ಮತ್ತೆ ಆರಂಭವಾದವು. ಅದರೆ ಬಸ್ ನಿಲ್ದಾಣದಲ್ಲಿನ ಹೋಟೆಲ್ ಪುನಃ ಆರಂಭಿಸಲು ಸಂಸ್ಥೆಯ ಅಧಿಕಾರಿಗಳು ಆಸಕ್ತಿ ವಹಿಸುತ್ತಿಲ್ಲ.

ಇವರು ಕೇಳುವ ದುಪ್ಪಟ್ಟು ದರ ಬಾಡಿಗೆಯಿಂದ ಯಾರೂ ಸಹ ನಿಲ್ದಾಣದ ಹೋಟೆಲ್ ನಡೆಸಲು ಮುಂದೆ ಬರುತ್ತಿಲ್ಲ. ಸಂಸ್ಥೆಯ ಈ ನಡವಳಿಕೆಯಿಂದ ಸಾರ್ವಜನಿಕರು ನಿಲ್ದಾಣದ ಎದುರಿಗೆ ಇರವ ಖಾಸಗಿವರ ಹೋಟೆಲ್ ನಲ್ಲಿ ದುಪ್ಪಟ್ಟು ದರ ನೀಡಿ ಊಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅದೆ ರಿತಿ ನಿಲ್ದಾಣದ ಎದರು ಅಂಗಳದಲ್ಲಿ ಸುಮಾರು 15 ವರ್ಷಗಳಿಂದ ನಡೆಸುತ್ತಿದ್ದ ದ್ವಿಚಕ್ರ ವಾಹನ ಪಾರ್ಕಿಂಗ್ ಅನ್ನು ಸಹ ಸಾರಿಗೆ ವಾಹನಗಳು ಓಡಾಡುವಾಗ ಟ್ರಾಫಿಕ್ ಜಾಮ್ ಆಗುತ್ತದೆ ಎಂಬ ಕುಂಟು ನೆಪ ಹೇಳಿ ಪಾರ್ಕಿಂಗ್ ತೆಗೆಸಿ ಯಾರು ವಾಹನ ನಿಲ್ಲಸಬಾರದು ಎಂದು ಸುತ್ತಲೂ ದಾರ ಕಟ್ಟಿ ಕಾವಲುಗಾರನ್ನು ನೇಮಿಸಿದ್ದಾರೆ.
