ಶಾಸಕರಿಂದ ಕ್ಷುಲ್ಲಕ ರಾಜಕಾರಣದಿಂದ ಗ್ರಾಪಂ ಸಹಾಯಕನ ವಜಾ | ವಿಧಾನಸಭೆ ಮುತ್ತಿಗೆ: ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಬುಕ್ಕಿವರೆ ಎಚ್ಚರಿಕೆ

0
1441

ಹೊಸನಗರ: ಶಾಸಕರಾದ ಹರತಾಳು ಹಾಲಪ್ಪನವರು ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಸಹಾಯಕನನ್ನು ವಜಾ ಮಾಡುವ ಮೂಲಕ ಕ್ಷುಲ್ಲಕ ರಾಜಕರಣಕ್ಕೆ ಕೈ ಹಾಕಿದ್ದಾರೆ ಎಂದು ಹೊಸನಗರ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಹೇಂದ್ರ ಬುಕ್ಕಿವರೆಯವರು ಹೇಳಿದರು.

ಹೊಸನಗರದ ಕಾಂಗ್ರೆಸ್ ಕಛೇರಿ (ಗಾಂಧಿ ಮಂದಿರ)ಯ ಆವರಣದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿ, ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆಯ ನಾಡ ಕಛೇರಿಯ ಗ್ರಾಮ ಸಹಾಯಕ ಪ್ರವೀಣ ಯಾನೆ ಅಣ್ಣಪ್ಪನವರು ಗ್ರಾಮ ಸಹಾಯಕರಾಗಿ ಕೆಲಸಕ್ಕೆ 2014ರಲ್ಲಿ ಸೇರಿದ್ದು ಆದರೆ ಹಾಲಪ್ಪನವರು ಶಾಸಕರಾದ ತಕ್ಷಣ ಸುಳ್ಳು ಮಾಹಿತಿ ನೀಡಿ ಕೆಲಸಕ್ಕೆ ಸೇರಿದ್ದಾರೆ ಎಂದು ಕೆಲಸದಿಂದ ತೆಗೆಯಬಹುದಿತ್ತು. ಆದರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಚುನಾವಣೆಯಲ್ಲಿ ಅಣ್ಣಪ್ಪನ ಹೆಂಡತಿಯಾದ ಮಹಾಲಕ್ಷ್ಮೀಯವರು ಮೂರು ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಸಹಾಯ ಪಡೆದು ಹಾಲಿ ಉಪಾಧ್ಯಕ್ಷರಾಗಿದ್ದು, ಆದರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿಲ್ಲ ಎಂಬ ಕಾರಣದಿಂದ ಅವರ ಪತಿಯವರನ್ನು ವಜಾ ಮಾಡಿದ್ದಾರೆ ಇದು ಶಾಸಕರದವರಿಗೆ ಶೋಭೆ ತರುವುದಿಲ್ಲ ಎಂದರು.

ಕೆಲವು ರಾಜಕೀಯ ದೂರಿಣರು ಶಾಸಕರಿಗೆ ಗ್ರಾಮ ಸಹಾಯಕರಾದ ಅಣ್ಣಪ್ಪನವರನ್ನು ಗ್ರಾಮ ಸಹಾಯಕರ ಹುದ್ದೆಯಿಂದ ವಜಾ ಮಾಡಲು ಹಸ್ತಕ್ಷೇಪ ಮಾಡಿಲ್ಲ ಎಂದು ಪತ್ರಿಕಾ ಹೇಳಿಕೆ ನೀಡುತ್ತಿದ್ದು, ಆದರೆ ಶಾಸಕರಾದ ಹರತಾಳು ಹಾಲಪ್ಪನವರೇ ಕಂದಾಯ ಸಚಿವರಿಗೆ ಕಾಗದ ಬರೆಯಲಾಗಿದ್ದು ಕಂದಾಯ ಸಚಿವರಿಂದ ಮಾನ್ಯ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ತಂದು ಜಿಲ್ಲಾಧಿಕಾರಿಗಳಿಂದ ಹೊಸನಗರ ತಹಶೀಲ್ದಾರ್‌ರವರ ಮೂಲಕ ಗ್ರಾಮ ಸಹಾಯಕರ ಹುದ್ದೆಯಿಂದ ವಜಾ ಮಾಡಿದ್ದು ಶಾಸಕರು ಬರೆದ ಪತ್ರಗಳು ನಮಗೆ ಸಿಕ್ಕಿದೆ ಯಾವುದೇ ಶಾಸಕರು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಅದು ಅಲ್ಲದೇ ಗ್ರಾಮ ಸಹಾಯಕರ ಹುದ್ದೆಯಿಂದ ತೆಗೆಯಬೇಕಾದರೆ ಸರ್ಕಾರದ ಸುತ್ತೋಲೆಯ ಪ್ರಕಾರ ನೋಟಿಸು ನೀಡಿ ಕೆಲಸದಿಂದ ವಜಾ ಮಾಡಬೇಕಿತ್ತು‌. ಆದರೆ ಯಾವುದೇ ನೋಟಿಸ್ ನೀಡದೇ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಕೆಲಸದಿಂದ ವಜಾ ಮಾಡಿದ್ದು ತಪ್ಪು ಎಂದು ಹೇಳಿದರಲ್ಲದೇ, ಅದೇ ರೀತಿ ರಿಪ್ಪನ್‌ಪೇಟೆ ಕಾಲೇಜಿನಲ್ಲಿ ಗೌರವ ಉಪಾನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರವೀಣ್‌ಕುಮಾರ್‌ರವರನ್ನು ಕೆಲಸದಿಂದ ವಜಾ ಮಾಡಲು ಇವರೇ ಕಾರಣರಾಗಿದ್ದಾರೆ. ಶಾಸಕರಾಗಿ ಸಾರ್ವಜನಿಕರ ಒಳ್ಳಯ ಕೆಲಸ ಮಾಡಿ ಅದನ್ನು ಬಿಟ್ಟು ಬಡಪಾಯಿಗಳ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದು ಗ್ರಾಮ ಸಹಾಯಕ ಅಣ್ಣಪ್ಪನವರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳದಿದ್ದರೆ ಮುಂದಿನ ದಿನದಲ್ಲಿ ಯುವ ಕಾಂಗ್ರೆಸ್ ಪಕ್ಷದ ವತಿಯಿಂದ ವಿಧಾನಸಭೆಯನ್ನು ಮುತ್ತಿಗೆ ಹಾಕಲಿದ್ದೇವೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಪಕ್ಷದ ಪ್ರವೀಣ್, ಗ್ರಾಮ ಪಂಚಾಯಿತಿ ಸದಸ್ಯ ಆಸೀಪ್, ರಾಘವೇಂದ್ರ, ಉಲ್ಲಾಸ್, ನಾಗಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here