ಶಾಸಕ ಆರಗ ಜ್ಞಾನೇಂದ್ರರವರ ವಿಶೇಷ ಪ್ರಯತ್ನ, ಸಂಸದ ರಾಘವೇಂದ್ರ ಸಹಕಾರ, ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಸ್ಥಾನದ ಸಭಾಭವನಕ್ಕೆ ಸರ್ಕಾರದಿಂದ 2 ಕೋಟಿ ರೂ. ಮಂಜೂರು…

0
336

ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ಕ್ಷೇತ್ರ ದೇವತೆ ಕ್ಷೇತ್ರದ ಲಕ್ಷಾಂತರ ಜನರ ಆರಾಧ್ಯ ದೈವ ಶ್ರೀ ರಾಮೇಶ್ವರ ದೇವಾಲಯದ ಪಕ್ಕದಲ್ಲಿ ಸಮುದಾಯ ಭವನ ನಿರ್ಮಿಸಲು 2 ಕೋಟಿ ರೂಪಾಯಿಗಳನ್ನು ಸಂಸದ ಬಿ.ವೈ ರಾಘವೇಂದ್ರ ರವರ ಸಹಕಾರದಿಂದ ಶಾಸಕ ಆರಗ ಜ್ಞಾನೇಂದ್ರ ರವರು ಮಂಜೂರು ಮಾಡಿಸಿದ್ದಾರೆ.

ಪುರಾಣ ಪ್ರಸಿದ್ಧ ರಾಮೇಶ್ವರ ದೇವಾಲಯ ನಿರ್ಮಾಣ ಭಕ್ತರ ಸಹಕಾರದಿಂದ ನೆರವೇರಿದ್ದು ಸಭಾಭವನದ ಅವಶ್ಯಕತೆ ತುಂಬಾ ಇತ್ತು. ಹಳೆಯದಾದ ಚಿಕ್ಕ ಸಭಾಭವನವಿದ್ದರೂ ಕೂಡ ಜಾತ್ರೆ ಹಾಗು ವಿವಿಧ ಕಾರ್ಯಕ್ರಮದ ಸಂಧರ್ಭದಲ್ಲಿ ಊಟ ಇನ್ನಿತರ ವ್ಯವಸ್ಥೆಗೆ ಜಾಗದ ಕೊರತೆಯಾಗುತ್ತಿತ್ತು. ಇದನ್ನರಿತ ಶಾಸಕ ಆರಗ ಜ್ಞಾನೇಂದ್ರರವರು ಸುಸಜ್ಜಿತ ಸಭಾಭವನ ಮತ್ತು ಇನ್ನಿತರ ವ್ಯವಸ್ಥೆಗೆ 2 ಕೋಟಿ ರೂಪಾಯಿಗಳನ್ನು ಇಂದು ಮಂಜೂರು ಮಾಡಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here