ಶಾಸಕ ಸಿ.ಟಿ. ರವಿಗೆ ಮೈಕ್ ಹಿಡಿದು ನಿಂತ ನಗರಸಭೆಯ ಕಮಿಷನರ್ !! ಫೋಟೋ ವೈರಲ್

0
728

ಚಿಕ್ಕಮಗಳೂರು: ನಗರಸಭೆ ಪೌರಾಯುಕ್ತರು ಇತ್ತೀಚೆಗೆ ಶಾಸಕ ಸಿ.ಟಿ.ರವಿ ಮಾತನಾಡುವ ವೇಳೆ ಮೈಕ್ ಹಿಡಿದು ನಿಂತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ನಗರಸಭೆ ಕಮಿಷನರ್ ವಿರುದ್ಧ ವ್ಯಾಪಕ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

ಕೆಲದಿನಗಳ ಹಿಂದೆ ನಗರಸಭೆ ಆವರಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಸಕ ಸಿ.ಟಿ.ರವಿ ಮಾತನಾಡುತ್ತಿದ್ದ ವೇಳೆ ನಗರಸಭೆ ಕಮಿಷನರ್ ಬಸವರಾಜ್ ತಾನೊಬ್ಬ ಹಿರಿಯ ಅಧಿಕಾರಿ ಎಂಬುದನ್ನು ಮರೆತು ಖುದ್ದು ತಾವೇ ಮೈಕ್ ಅನ್ನು ಕೈಗೆತ್ತಿಕೊಂಡು ಸಿ.ಟಿ.ರವಿ ಅವರ ಮುಂದೆ ಹಿಡಿದುಕೊಂಡು ನಿಂತಿದ್ದರು. ಈ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನಗರಸಭೆ ಕಮಿಷನರ್ ಆಗುವುದಕ್ಕೆ ಬಸವರಾಜ್ ಅವರು ಅನ್‍ಫಿಟ್, ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಳ್ಳಲಿ, ನಗರಸಭೆ ಕಮಿಷರನ್ ಆಗಿ ಶಾಸಕರಿಗೆ ಮೈಕ್ ಹಿಡಿಯುವುದನ್ನು ಬಿಟ್ಟು ಅವರು ಬಿಜೆಪಿ ಸೇರಿ ಶಾಸಕರಿಗೆ ಬಕೆಟ್ ಹಿಡಿದಲ್ಲಿ ಉತ್ತಮ ಸ್ಥಾನಮಾನವಾದರೂ ಸಿಗುತ್ತದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರಸಭೆ ಕಮಿಷನರ್ ಆದವರು ರಾಜಕಾರಣಿಗಳ ಮುಂದೆ ಸೇವಕನಂತೆ ಮೈಕ್ ಹಿಡಿದು ನಿಲ್ಲುತ್ತಾರೆಂದರೇ ಕಮಿಷನರ್ ಬಸವರಾಜ್ ಬಿಜೆಪಿ ಕಾರ್ಯಕರ್ತನೆಂಬುದನ್ನು ಸಾಬೀತಾದಂತಾಗಿದೆ. ಇಂತಹ ಅಧಿಕಾರಿ ಸಿ.ಟಿ. ರವಿ ಅಣತಿಯಂತೆ ಕುಣಿಯುತ್ತಾರೆಯೇ ಹೊರತು, ಸಾರ್ವಜನಿಕರ ಅಧಿಕಾರಿಯಾಗಲು ಸಾಧ್ಯವಿಲ್ಲ. ನಗರಸಭೆಯಲ್ಲಿ ದಿನಗೂಲಿ ನೌಕರರು ಇದ್ದು, ಈ ನೌಕರರ ಬಳಿ ಮೈಕ್ ಹಿಡಿಯಲು ಹೇಳಬಹುದಿತ್ತು. ಆದರೆ ಕಮಿಷನರ್ ಬಸವರಾಜು ತಾವೇ ಖುದ್ದು ಮೈಕ್ ಹಿಡಿಯುವ ಮೂಲಕ ಸಿ.ಟಿ. ರವಿ ಅವರನ್ನು ಮೆಚ್ಚಿಸಲು ಮುಂದಾಗಿರುವು ನಾಚಿಕೆಗೇಡು. ಕಮಿಷನರ್ ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಕಾರ್ಯಕರ್ತನಾಗುವುದು ಒಳ್ಳೆಯದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಕೇಳಿ ಬರುತ್ತಿವೆ.

ಜಾಹಿರಾತು

LEAVE A REPLY

Please enter your comment!
Please enter your name here