ಶಾಸಕ ಹರತಾಳು ಬಗ್ಗೆ ಮಾಜಿ ಶಾಸಕ ಬೇಳೂರು ಹೇಳಿಕೆ ಖಂಡನೀಯ

0
1276

ರಿಪ್ಪನ್‌ಪೇಟೆ: ಶಾಸಕರ ಹರತಾಳು ಹಾಲಪ್ಪ ದ್ವೇಷದ ರಾಜಕೀಯ ಮಾಡುತ್ತಿದ್ದಾರೆಂದು ಮಾಜಿ ಶಾಸಕ ಬೇಳೂರು ಗೋಲಾಪಕೃಷ್ಣ ಪತ್ರಿಕಾ ಹೇಳಿಕೆಗೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ಬೆಳಗೋಡು ಗಣಪತಿ ಮತ್ತು ಹುಂಚ-ಕೆರೆಹಳ್ಳಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ ತೀವ್ರವಾಗಿ ಖಂಡಿಸಿದ್ದಾರೆ.

ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ತುರ್ತು ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ವಸ್ತು ಸ್ಥಿತಿ ಅರಿಯದೆ ಬೇಕಾಬಿಟ್ಟಿಯಾಗಿ ಹಾಲಿ ಶಾಸಕರ ಹರತಾಳು ಹಾಲಪ್ಪ ದ್ವೇಷದ ರಾಜಕೀಯ ಮಾಡುತ್ತಿದ್ದಾರೆಂಬ ಬಗ್ಗೆ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಬಂದಂತಹ ವರದಿಗೆ ಸ್ಪಷ್ಟನೆ ನೀಡಿ ಸ್ಥಳೀಯ ನಾಡಕಛೇರಿಯಲ್ಲಿ ಗ್ರಾಮ ಸಹಾಯಕರಾಗಿ ಕರ್ತವ್ಯ ನಿರ್ವಹಿಸುವ ಪ್ರವೀಣ ಯಾನೆ ಅಣ್ಣಪ್ಪ ಬಿನ್ ಸತ್ಯನಾರಾಯಣ ಎಂಬುವರು ಗ್ರಾಮ ಸಹಾಯಕರ ನೇಮಕಾತಿ ಸಂದರ್ಭದಲ್ಲಿ ಪ್ರವೀಣ ಬಿನ್ ಸತ್ಯನಾರಾಯಣ ಎಂಬ ಸುಳ್ಳು ಹೆಸರಿನಲ್ಲಿ ನೇಮಕಾತಿಯಾಗಿದ್ದು ಇವನಿಗೆ ಅಣ್ಣಪ್ಪ ಯಾನೆ ಪ್ರವೀಣ್ ಬಿನ್ ಸತ್ಯನಾರಾಯಣ ಹೆಚ್ ಎಂದು ಎರಡು ಹೆಸರಿನಲ್ಲಿ ಕರೆಯಲ್ಪಡುತ್ತಿದ್ದು ಕಳೆದ 2011 ರಲ್ಲಿ ವಿನಾಯಕ ವೃತ್ತದಲ್ಲಿ ಖಾಸಗಿ ಬಸ್ ಅಡ್ಡಗಟ್ಟಿ ಚಾಲಕ ಮತ್ತು ನಿರ್ವಾಹಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಸ್ ಜಖಂ ಗೊಳಿಸಿರುವ ಬಗ್ಗೆ ದೊಂಬಿ ಕೇಸ್ ದಾಖಲಾಗಿದ್ದು 2014 ರಲ್ಲಿ ಗ್ರಾಮ ಸಹಾಯಕರ ನೇಮಕಾತಿಯ ಸಂದರ್ಭದಲ್ಲಿ ಪ್ರವೀಣ್ ಬಿನ್ ಸತ್ಯನಾರಾಯಣ ಹೆಚ್ ಎಂದು ಅರ್ಜಿಯಲ್ಲಿ ಮಾಹಿತಿ ನೀಡಿ ಕ್ರಿಮಿನಲ್ ಪ್ರಕರಣವನ್ನು ಮರೆಮಾಚಿ ಗ್ರಾಮ ಸಹಾಯಕರ ನೇಮಕಾತಿಗೊಂಡಿದ್ದು ಇಲಾಖೆಯಲ್ಲಿ ತನಿಖೆಯಿಂದಾಗಿ ಅಣ್ಣಪ್ಪ ಯಾನೆ ಪ್ರವೀಣ್ ಬಿನ್ ಸತ್ಯನಾರಾಯಣ ಎರಡು ಹೆಸರಿನ ವ್ಯಕ್ತಿ ಒಬ್ಬನೆಯಾಗಿದ್ದರ ಪರಿಣಾಮ ಅವನ ನೇಮಕಾತಿಯನ್ನು ಕಾನೂನು ಬಾಹಿರಬಾಗಿದೆ ಎಂದು ವಜಾಗೊಳಿಸಲಾಗಿದೆ ಅಲ್ಲದೆ ಇತ್ತೀಚೆಗೆ ಗ್ರಾಮಲೆಕ್ಕಾಧಿಕಾರಿ ರಾಘವೇಂದ್ರ ಎಂಬುವರು ಎಸಿಬಿ ಬಲೆಗೆ ಸಿಕ್ಕಿಹಾಕಿಕೊಂಡ ಸಂದರ್ಭದಲ್ಲಿ ಹಣವನ್ನು ಪಡೆದವನ್ನು ಇವರೇ ಯಾಗಿದ್ದು ರಾಜಕೀಯ ನಾಯಕರ ಬೆಂಬಲದಿಂದಾಗಿ ನಿರಪರಾದಿ ರಾಘವೇಂದ್ರನ ಮೇಲೆ ಕೇಸ್ ದಾಖಲಾಗುವಂತೆ ಮಾಡಿದ್ದು ವೃದ್ಧಾಪ್ಯ ವೇತನ ಮತ್ತು ವಿಧವಾ ವೇತನ ಸೇರಿದಂತೆ 94c ಅಡಿ ಹಕ್ಕುಪತ್ರ ನೀಡುವ ವಿಚಾರದಲ್ಲಿ ಸಾಕಷ್ಟು ಭ್ರಷ್ಟಾಚಾರದ ದೂರುಗಳು ಇದ್ದು ಕಾನೂನಿನಡಿಯಲ್ಲಿ ವಜಾಗೊಳಿಸಲಾಗಿದೆ ಹೊರತು ಶಾಸಕರ ಕೈವಾಡದಿಂದಲ್ಲ ಎಂದು ಸ್ಪಷ್ಟನೆ ನೀಡಿದರು.

ಶಾಸಕರು ಕ್ಷೇತ್ರದ ಅಭಿವೃದ್ದಿ ಕಾರ್ಯದಲ್ಲಿ ಈಗಾಗಲೇ ನೂರಾರು ಕೋಟಿ ರೂ. ಅನುದಾನವನ್ನು ತರುವುದರೊಂದಿಗೆ ಶಾಸನ ಸಭೆಯಲ್ಲಿ ಶರಾವತಿ ಮುಳುಗಡೆ ರೈತರ ಮತ್ತು 192 ಕೆಪಿಸಿ ಲ್ಯಾಂಡ್ ವಿಚಾರವನ್ನು ಸದನದಲ್ಲಿ ದ್ವನಿ ಎತ್ತಿದ್ದು ಅಲ್ಲದೆ ಸಾಗರ-ಹೊಸನಗರ ತಾಲ್ಲೂಕಿನ ಹಲವು ಗ್ರಾಮಗಳಿಗೆ ಶರಾವತಿ ನದಿಯಿಂದ ಕುಡಿಯುವ ನೀರಿನ ಯೋಜನೆ ಕುರಿತು ಚರ್ಚಿಸಿಲಾಗಿದ್ದು ಮಾಜಿ ಶಾಸಕರಿಗೆ ತಿಳಿದಂತೆ ಇಲ್ಲ ಎಂದು ವ್ಯಂಗ್ಯವಾಡಿದರು.

ಈಗಾಗಲೇ ಕ್ಷೇತ್ರದ ವ್ಯಾಪ್ತಿಯಲ್ಲಿ ಭರದಿಂದ ಸಾಗಿರುವ ಸಾವಿರಾರು ಕೋಟಿ ವಚ್ಚದ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ ಕಳಪೆಯಾಗಿರುವ ಬಗ್ಗೆ ಕಂಡುಬಂದರೆ ಪ್ರತಿಭಟನೆ ಮಾಡಿ ಇಲ್ಲವೆ ಹೇಳಿಕೆ ನೀಡಲಿ ಅದು ಬಿಟ್ಟು ಸುಳ್ಳು ದಾಖಲೆ ನೀಡಿ ಭ್ರ‍್ರಷ್ಟಾಚಾರ ಎಸಗಿದವರ ಪರವಾಗಿ ಮಾತನಾಡುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರಿಗೆ ಹೇಳಿಕೆ ಇನ್ನಾದರೂ ತಮ್ಮ ಇಂತಹ ಕುಚ್ಚೇದ ಹೇಳಿಕೆ ನೀಡುವ ಮೊದಲು ವಸ್ತುಸ್ಥಿತಿ ಅರಿತು ಹೇಳಿಕೆ ನೀಡಲಿ ಎಂದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಸುರೇಶ್ ಸ್ವಾಮಿರಾವ್, ಎಂ.ಸುರೇಶ್‌ಸಿಂಗ್, ಕೀರ್ತಿಗೌಡ, ನಾಗಾರ್ಜುನಸ್ವಾಮಿ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here